ಕಾಂಗ್ರೇಸ್ ನವರು ಸತ್ಯ ಹೇಳುವ ಧೈರ್ಯ ಕಳೆದುಕೊಂಡಿದ್ದಾರೆ

ಸಂಜೆವಾಣಿ ವಾರ್ತೆ

ಚಿತ್ರದುರ್ಗ,ಅ.16: ರಾಜ್ಯ ಕಾಂಗ್ರೇಸ್ ಸರ್ಕಾರದಲ್ಲಿನ ದುರಾಡಳಿತದ ಸತ್ಯಾಸತ್ಯತೆ ಸ್ವ ಪಕ್ಷದವರಿಂದಲೇ ಬಹಿರಂಗವಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೇಸ್ ಪಕ್ಷದಲ್ಲಿ ದೇಶ ಬೇಕು ಎನ್ನುವ ಜನರೇ ಹೆಚ್ಚಾಗಿದ್ದು, ರಾಜ್ಯದಲ್ಲಿ ಕಾಂಗ್ರೇಸ್ ನಡೆಸುತ್ತಿರುವ ದುರಾಡಳಿತದಿಂದ ಬೆಸತ್ತು ಹೋಗಿದ್ದಾರೆ. ಇದರಂದಲೇ ಸ್ವ ಪಕ್ಷದವರು ನಡೆಸುತ್ತಿರುವ ದುರಾಡಳಿತದ ಸತ್ಯಾಸತ್ಯತೆಗಳ ಬಗ್ಗೆ ನಮಗೆ ಮಾಹಿತಿ ನೀಡಿ, ಅವುಗಳನ್ನು ತಡೆಯುವ ಯತ್ನಕ್ಕೆ ಕೈ ಜೋಡಿಸುತ್ತಿದ್ದಾರೆ. ಆದರೆ ಅಲ್ಲಿನ ಬೆರಳೆಣಿಕೆ ಮಂದಿ‌ ಮಾತ್ರ ತಮ್ಮ ಬೆಳೆಕಾಳು ಬೆಯ್ಯಿಸ್ಸಿಕೊಳ್ಳಲು ಜನ ವಿರೋಧಿ, ದೇಶ ವಿರೋಧಿ ಹೇಳಿಕೆಗಳನ್ನು‌ ನೀಡುತ್ತಿದ್ದಾರೆ ಎಂದರು. ಧರ್ಮದ ಆಧಾರದ ಮೇಲೆ ಭಯೋತ್ಪಾದನೆ ನಡೆಯುತ್ತಿದೆ ಎಂಬ ಸಚಿವ ಈಶ್ವರ ಖಂಡ್ರೇ ಹೇಳಿಕೆಗೆ ಸಿಟಿ ರವಿ ಪ್ರತಿಕ್ರಿಯಿಸಿ, ಇಸ್ಲಾಂ ಹೆಸರಿನಲ್ಲಿ ಭಯೋತ್ಪಾದನೆ ನಡೆಯುತ್ತಿದೆ ಎಂಬುದು ತಡವಾಗಿ ಆದರೂ ತಿಳಿದು ಖಂಡ್ರೆ ಈಗ ಸತ್ಯ ಹೇಳಿದ್ದಾರೆ. ಇದು ಸ್ವಾಗತಾರ್ಹ. ಆದರೆ ಕಾಂಗ್ರೇಸ್ ನವರು ಸತ್ಯ ಹೇಳುವ ಧೈರ್ಯವನ್ನು ಇತ್ತೀಚೆಗೆ ಕಳೆದುಕೊಂಡಿದ್ದಾರೆ ಎಂದು ಲೇವಡಿ‌ ಮಾಡಿದ ಅವರು, ಡಿ.ಕೆ.ಶಿವಕುಮಾರ್ ಸ್ಟೈಲ್ ಎದರಿಸಿ ರಾಜಕೀಯ ಮಾಡುವ ಸ್ಟೈಲ್ ಆಗಿದೆ‌. ಆದರೆ ಎಲ್ಲರನ್ನು ಎಲ್ಲಾ ಕಾಲದಲ್ಲೂ ಎದುರಿಸಿ ರಾಜಕಾರಣ ಮಾಡಲು ಆಗುವುದಿಲ್ಲ ಎಂಬುದು ಡಿಕೆಶಿ ಅರ್ಥ ಮಾಡಿಕೊಳ್ಳಬೇಕು ಎಂದರು.ಬೆಂಗಳೂರಿನ ಕೆಲವರ ನಿವಾಸದಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ. ರಾಜೀವ್ ತಾರನಾಥ್ ಅವರ ಬಳಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಪರ್ಸೆಂಟೆಜ್ ಲೆಕ್ಕದಲ್ಲಿ ಕಲಾವಿದರ ಬಳಿ ಹಣ ಕೇಳಿದ ಕುಖ್ಯಾತಿ ಕಾಂಗ್ರೇಸ್ ಸರ್ಕಾರದ್ದಾಗಿದೆ. ಸಿದ್ದರಾಮಯ್ಯ ಅವರ ತವರು ಕ್ಷೇತ್ರದಲ್ಲೇ ಈ ಘಟನೆ ನಡೆದಿದೆ. ಆದರೂ ಕೂಡ ಸರ್ಕಾರ ತಮಗೆ ಸಂಬಂಧಿಸಿದಲ್ಲ ಎಂಬಂತೆ ಹೇಳಿಕೆ ನೀಡುತ್ತಿದ್ದಾರೆ. ಹಾಗಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಮಹದೇವಪ್ಪ, ತಂಗಡಗಿ ಇದ್ದ ಮೂವರಲ್ಲಿ ಕದ್ದವರಾರು ಎಂದು ಪ್ರಶ್ನಿಸಿದರು.