ಕಾಂಗ್ರೇಸ್ ನಲ್ಲಿ ಬಂಡಾಯ,  ಗುರುರಾಜನಾಯಕ, ಪಕ್ಷೇತರ ನಿಲ್ಲಲು ಬೆಂಬಲಿಗರ  ಒತ್ತಾಯ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ.9 :- ಕಾಂಗ್ರೇಸ್ ಟಿಕೇಟ್ ವಂಚಿತ ಗುರುರಾಜನಾಯಕ ಅವರ ಬೆಂಬಲಿಗರು ಕೂಡ್ಲಿಗಿಯಲ್ಲಿ ಶುಕ್ರವಾರ ಸಭೆ ಸೇರಿ ಕಾಂಗ್ರೇಸ್ ವಿರುದ್ಧ ಬಂಡಾಯದ ಕಹಳೆ ಊದಿ ಗುರುರಾಜನಾಯಕರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ತೀರ್ಮಾನ ಮಾಡಿ ಒತ್ತಾಯಿಸಿದ್ದಾರೆ.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಸಭೆ ಸೇರಿದ ಬೆಂಬಲಿಗರು ಮಾತನಾಡುತ್ತ ಕೂಡ್ಲಿಗಿ ಕ್ಷೇತ್ರದಲ್ಲಿ ಕಾಂಗ್ರೇಸ್ ನಿಂದ ಸ್ಪರ್ದಿಸಿ ಗೆಲುವು ಪಡೆದು ಕ್ಷೇತ್ರದ ಜನತೆಗೆ ಹಗಲಿರುಳು ಶ್ರಮಿಸುವ ಹಿರಾದೆ ನಮ್ಮೆಲ್ಲರದ್ದಾಗಿತ್ತು ಆದರೆ ಕಾಂಗ್ರೇಸ್ ಟಿಕೇಟ್ ಇಂತವರಿಗೆ ನೀಡದೆ ಇದ್ದದ್ದು ಬೇಸರ ತಂದಿದೆ.  ಗುರುರಾಜನಾಯಕ ಹೊರದೇಶದಲ್ಲಿದ್ದರು ಕ್ಷೇತ್ರದ ಅಭಿವೃದ್ಧಿ ಹಾಗೂ ಜನತೆಯ ಒಡನಾಟ ಇಟ್ಟುಕೊಂಡು ನಂತರ ಕಳೆದ ಐದಕ್ಕೂ ಹೆಚ್ಚು ವರ್ಷಗಳಿಂದ ಕಾಂಗ್ರೇಸ್ ಪಕ್ಷದ ಏಳ್ಗೆಗೆ ಶ್ರಮಿಸಿ ಸಂಘಟನೆ ಮಾಡಿದ್ದೂ ಅಮೇರಿಕದಿಂದ ಬಂದು ಕ್ಷೇತ್ರದ ಹಳ್ಳಿ ಹಳ್ಳಿ ಸುತ್ತಾಡಿ ಪ್ರತಿಯೊಬ್ಬರ ಕಷ್ಟ ಕಾರ್ಪಣ್ಯ ಅರಿತುಕೊಂಡಿದ್ದರು ಮತ್ತು ಕೋವಿಡ್ ಸಂದರ್ಭದಲ್ಲಿ ಜನರ ಆರೋಗ್ಯ ಹಾಗೂ ಅವರಿಗೆ ಬೇಕಾದ ಸಹಾಯ ಹಸ್ತ ಮಾಡಿರುವ ಗುರುರಾಜನಾಯಕರಿಗೆ ಕಾಂಗ್ರೆಸ್ ಪಕ್ಷದ ವರಿಷ್ಠರು ಗುರುತಿಸದೆ ಈ ಬಾರಿ  ಟಿಕೇಟ್  ನೀಡದೆ ಇದ್ದದ್ದು ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರಾದ ನಮಗೆಲ್ಲಾ ಬೇಸರ ತಂದಿದೆ ಇದರಿಂದ ಕಾಂಗ್ರೇಸ್ ವಿರುದ್ಧ ಬಂಡಾಯದ ಕಹಳೆ ಊದುವ ಮೂಲಕ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ನಿಮ್ಮನ್ನು ಗೆಲ್ಲಿಸುತ್ತೇವೆ ಕ್ಷೇತ್ರದ ಏಳ್ಗೆಗೆ ನಿಮ್ಮ ಸೇವೆ ಅಗತ್ಯ ಎಂದು ಗುರುರಾಜನಾಯಕರನ್ನು ಅವರ ಬೆಂಬಲಿಗ ಕಾಂಗ್ರೇಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಕೂಡ್ಲಿಗಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸುವಂತೆ  ಗುರುರಾಜ್ ನಾಯಕರನ್ನು  ಬೆಂಬಲಿಗರಾದ   ಬಣವಿಕಲ್ ಬಸವರಾಜ್ ,ಸೂಲದಹಳ್ಳಿ  ಹನುಮೇಶ್ ಪುಟ್ಟಣ್ಣ ,ಹೊಸಹಟ್ಟಿ ಮಾರಣ್ಣ ,ಶಿವಪುರ ಪಂಪಾಪತಿ ,ಕೂಡ್ಲಿಗಿ ಅಕ್ರಮ್ ,ಸುನಿಲ್ ,ಬೆಳಗಟ್ಟ ನಟರಾಜ್ ನೂರಾರು ಯುವಕರು ಸುತ್ತ ಮುತ್ತಲಿನ ಗ್ರಾಮದ ಯುವಕರು ಒತ್ತಾಯಿಸಿದ್ದಾರೆ.