ಕಾಂಗ್ರೇಸ್ ಘಟಕದ ವತಿಯಿಂದ ಸಂಭ್ರಮಾಚರಣೆ

ನಂಜನಗೂಡು: ಮೇ.19:- ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ 2ನೇ ಬಾರಿಗೆ ಸಿದ್ದರಾಮಯ್ಯರವರು ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ರವರು ಆಯ್ಕೆಯಾದ ಹಿನ್ನೆಲೆಯಲ್ಲಿ ನಗರ ಕಾಂಗ್ರೇಸ್ ಘಟಕದ ವತಿಯಿಂದ ಸಂಭ್ರಮಾಚರಣೆಯನ್ನು ಆಚರಿಸಲಾಯಿತು.
ನಗರದ ಆರ್.ಪಿ.ರಸ್ತೆಯಲ್ಲಿರುವ ಕಾಂಗ್ರೇಸ್ ಕಚೇರಿ ಮುಂಭಾಗ ಸಮಾವೇಶಗೊಂಡ ಕಾಂಗ್ರೇಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ, ಸಿದ್ದರಾಮಯ್ಯರವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡುವ ಮೂಲಕ ಸಂಭ್ರಮಾಚರಣೆಯನ್ನು ಆಚರಣೆ ನಡೆಸಿದರು.
ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕುರಹಟ್ಟಿಮಹೇಶ್ ಮಾತನಾಡಿ ಕಳೆದ 5 ವರ್ಷಗಳಿಂದ ಬಿಜೆಪಿ ಪಕ್ಷದ ಭ್ರಷ್ಟಾಚಾರ, ಬೆಲೆ ಏರಿಕೆ, ದುರಾಡಳಿತದಿಂದ ಆಕ್ರೋಶಗೊಂಡು ಕಾಂಗ್ರೇಸ್ ಪಕ್ಷಕ್ಕೆ ನಿಶ್ಚಳ ಮಹುಮತ ನೀಡಿ ಬೆಂಬಲ ವ್ಯಕ್ತಪಡಿಸಿರುವ ಮತದಾರರಿಗೆ ಮೊದಲು ಅಭಿನಂದನೆ ಸಲ್ಲಿಸುತ್ತೇನೆ.
ಜೊತೆಗೆ ಕಾಂಗ್ರೇಸ್ ಪಕ್ಷದ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾಗಾಂಧಿ, ರಾಹುಲ್‍ಗಾಂಧಿ, ರಾಜ್ಯ ಉಸ್ತುವಾರಿ ಸುರ್ಜೆವಾಲ, ವೇಣುಗೋಪಾಲ್ ಸೇರಿ ರಾಜ್ಯಕ್ಕೆ ಅನೇಕ ಭಾಗ್ಯಗಳನ್ನು ಕೊಟ್ಟು ಭಾಗ್ಯರಾಮಯ್ಯ ಎನಿಸಿರುವ ಸಿದ್ದರಾಮಯ್ಯರವರನ್ನು 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಮಾಡಿರುವುದು, ಮತ್ತು ಡಿ.ಕೆ.ಶಿವಕುಮಾರ್ ರವರನ್ನು ಉಪ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿರುವುದು ಕಾರ್ಯಕರ್ತರಲ್ಲಿ ಹೊಸಚೈತನ್ಯ ಮೂಡಿದೆ ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ಸೇರಿ ವಿಜಯೋತ್ಸವ ಆಚರಣೆ ನಡೆಸಲಾಗುತ್ತಿದೆ ಎಂದರು.
ಇದೇ ಸಂಧರ್ಭದಲ್ಲಿ ಕೆಪಿಸಿಸಿ ಸದಸ್ಯ ಅಕ್ಬರ್‍ಅಲಿಂ, ಪುರಸಭಾ ಮಾಜಿ ಅಧ್ಯಕ್ಷ ಚೆಲುವರಾಜು, ನಗರಸಭಾ ಸದಸ್ಯರಾದ ಎಸ್.ಪಿ.ಮಹೇಶ್, ಪ್ರದೀಪ್, ಗಂಗಾಧರ್, ಮುಖಂಡರಾದ ಗೋವಿಂದರಾಜು, ನಾಗರಾಜು, ಲೋಕೇಶ್, ಮಹದೇವು, ಪರ್ವೀಜ್, ಅಬ್ದುಲ್‍ಖಾದರ್, ಗಣೇಶ್ ಸೌಭಾಗ್ಯ ಸೇರಿದಂತೆ ಹಲವಾರು ಪ್ರಮುಖರು ಇದ್ದರು.