ಕಾಂಗ್ರೇಸ್ ಗೆಲುವಿಗೆ ಡಿಎಮ್.ಎಸ್.ಎಸ್. ಹರ್ಷ

ಸೇಡಂ, ಮೇ, 16: ಕಲಬುರ್ಗಿ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಿಧಾನಸಭೆಯಲ್ಲಿ ಡಿ.ಎಮ್.ಎಸ್.ಎಸ್ ಸಂಘಟನೆಯ ಪದಾಧಿಕಾರಿಗಳು ಕೋಮುವಾದಿ ಬಿಜೆಪಿ ಸರ್ಕಾರದ ವಿರುದ್ಧ ತೊಡೆತಟ್ಟಿ ಸೋಲಿಸಲು ಪಣತೊಟ್ಟ ರಾಜ್ಯಾಧ್ಯಕ್ಷ ಲಿಂಗರಾಜ ತಾರಪೈಲ್ ಅವರ ಆದೇಶದ ಮೇರೆಗೆ ಸೇಡಂ ತಾಲೂಕಿನಲ್ಲಿ ಸಂಘದ ಪದಾಧಿಕಾರಿಗಳು ಕಟ್ಟಿಬದ್ಧವಾಗಿ ಪಾಲಿಸಿ ಪ್ರತಿ ಹಳ್ಳಿಗೆ ತೆರಳಿ ಬಿಜೆಪಿ ಸರ್ಕಾರವು ವಿವಿಧ ಯೋಜನೆಗಳು ಕೈ ಬಿಟ್ಟಿರುವುದರಿಂದ ಕೋಮುವಾದ ಹೆಚ್ಚಳವಾಗಿರುವುದರ ಬಗ್ಗೆ ಮನವರಿಕೆ ಮಾಡಿ ಕಾಂಗ್ರೆಸ್ ಗೆಲ್ಲಿಸಲು ಪ್ರಯತ್ನಿಸುತ್ತೇವೆ ಸೇಡಂ ಸೇರಿದಂತೆ ಜಿಲ್ಲೆ ಹಾಗೂ ರಾಜ್ಯದಲ್ಲಿ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಏರುತ್ತಿರುವುದು ಸಂತೋಷ ತಂದಿದೆ ಎಂದು ಡಿಎಮ್.ಎಸ್.ಎಸ್. ಸಂಘಟನೆಯ ತಾಲೂಕಾ ಘಟಕದ ಅಧ್ಯಕ್ಷರಾದ ಮಾರುತಿ ಮುಗುಟಿ ಹಾಗೂ ಪ್ರಚಾರ ಸಮಿತಿಯ ಭಗವಾನ್ ದೊಡ್ಮನೆ, ಸದಾನಂದ ಹಂದರಕಿ, ಭೀಮು ಮುಧೋಳ್, ಜಗನಾಥ್ ಚಿಂತಿಪಳ್ಳಿ, ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಭ್ರಷ್ಟ ಬಿಜೆಪಿ ತೊಡಗಿಸಲು ತಾಲೂಕಿನ ಎಲ್ಲ ಪದಾಧಿಕಾರಿಗಳ ಸಭೆಯನ್ನು ಕರೆದು ಕೋಮುವಾದಿ ಪರಿಶಿಷ್ಟ ಸಮುದಾಯಗಳ ಆರ್ಥಿಕ ಅಭಿವೃದ್ಧಿಯನ್ನು ಬಯಸದೇ ಇರುವಂತಹ ದಲಿತ ವಿರೋಧಿ ಬಿ.ಜೆ.ಪಿ.ಯನ್ನು ಸೋಲಿಸಬೇಕೆಂಬ ನಿರ್ಧಾರವನ್ನು ಮಾಡಲಾಯಿತು. ಹಾಗೆಯೇ ಡಿ.ಎಮ್.ಎಸ್.ಎಸ್. ಸಂಘಟನೆಯ ಎಲ್ಲಾ ಜಿಲ್ಲಾಧಿಕಾರಿಗಳು ಒಂದು ತಿಂಗಳಿಂದ ಬಿ.ಜೆ.ಪಿ.ಯನ್ನು ಸೋಲಿಸಲು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಲು
ಪ್ರಾರಂಭಿಸಿ ಈ ಹಿಂದೆ ಕಾಂಗ್ರೇಸ್ ಪಕ್ಷವು ಪರಿಶಿಷ್ಟರಿಗಾಗಿ ಮಾಡಿರುವಂತಹ ಅನೇಕ ಯೋಜನೆಗಳಾದ ನೇರಸಾಲ ಯೋಜನೆ, ಮಹಿಳಾ ಅಭಿವೃದ್ಧಿ ಯೋಜನೆ, ವಿಕಲಚೇತನ ಯೋಜನೆ, ಗಂಗಾಕಲ್ಯಾಣ ಯೋಜನೆ, ಕಾಂಗ್ರೇಸ ಸರಕಾರ ಜಾರಿ ಮಾಡಿದ್ದನ್ನು ಬಿ.ಜೆ.ಪಿ. ಸರ್ಕಾರ ನಿಲ್ಲಿಸಿ ಪರಿಶಿಷ್ಟ ಸಮುದಾಯಕ್ಕೆ ಅನ್ಯಾಯ ಮಾಡಿರುವದನ್ನು ಮತ್ತು ಕಾಂಗ್ರೇಸ್
ಪಕ್ಷದ ಪರವಾಗಿ ಮತ ಚಲಾಯಿಸಿ ರಾಜ್ಯದಲ್ಲಿ ಸರ್ಕಾರ ಸ್ಪಷ್ಟ ಬಹುಮತದಿಂದ ಬಂದರೆ ಈ ಎಲ್ಲಾ ಯೊಜನೆಗಳು ಮರಳಿ ಜಾರಿ ಆಗುತ್ತವೆ, ಮಾದಿಗ ಸಮುದಾಯದ ಜನರಿಗೆ ಜನಜಾಗೃತಿಗೊಳಿಸಲಾಯಿತು. ಕಾಂಗ್ರೇಸ್ ಪಕ್ಷ ಜನರ ನೆಮ್ಮದಿಯ ಬದುಕಿಗೆ 5 ಗ್ಯಾರಂಟಿ ಯೋಜನೆಗಳ ಕುರಿತು ಮಹಿಳೆಯರಿಗೆ ಉಚಿತ ಪ್ರಯಾಣ, ಅನ್ನಭಾಗ್ಯ ಗೃಹಜ್ಯೋತಿ, ಯುವನಿಧಿ, ಮತ್ತು ವಿಶೇಷವಾಗಿ ಮಹಿಳೆಯರು 500, 1000/- ರೂ.ಗೆ ತಮ್ಮ ಓಟುಗಳನ್ನು ಬಿ.ಜೆ.ಪಿ.ಗೆ ಮಾರಿಕೊಳ್ಳಬಾರದು ಕಾಂಗ್ರೇಸ್. ಸರ್ಕಾರಕ್ಕೆ ಮತ ನಿಡಿ ಬಹು ಮತದಿಂದ ಗೆಲ್ಲಿಸಿದ್ದೇ ಆದರೆ ಗೃಹ ಲಕ್ಷ್ಮೀ ಯೋಜನೆ ಮೂಲಕ ಪ್ರತಿ ಮಹಿಳೆಗೆ 2000/- ರೂ. ಒಟ್ಟು 1 ವರ್ಷದಲ್ಲಿ 24000/- ರೂ. ತಮ್ಮ ಖಾತೆಗೆ ಜಮಾ ಆಗುತ್ತದೆ, ಎಂದು ಎಲ್ಲ ತಾಯಂದಿರರಲ್ಲಿ ಡಿ.ಎಮ್.ಎಸ್.ಎಸ್. ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಜನ
ಜಾಗೃತಿಯನ್ನು ಮೂಡಿಸಿದರು. ಒಂದು ತಿಂಗಳಿಂದ ಶ್ರಮವಹಿಸಿ, ಕಲಬುರಗಿ ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳು ಅತ್ಯಂತ ಬಹುಮತದಿಂದ ಗೆಲ್ಲುವಕ್ಕೆ ಕಾರಣಿಭೂತರಾದ ಡಿ.ಎಮ್.ಎಸ್.ಎಸ್.
ಸಂಘಟನೆಯ ಎಲ್ಲಾ ಪದಾಧಿಕಾರಿಗಳಿಗೆ ಹೊರಾಟಗಾರರಿಗೆ ಮಹಿಳಾ ಪದಾಧಿಕಾರಿಗಳಿಗೆ ರಾಜ್ಯಸಮಿತಿಯಿಂದ ರಾಜ್ಯ ಕಾಂಗ್ರೆಸ್ ನಾಯಕರುಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದಿದ್ದಾರೆ.