
ಹನೂರು ಮೇ.3:- ಬಿಜೆಪಿಗೆ ಮತ ನೀಡಿದರೆ ಸುವರ್ಣ ಕರ್ನಾಟಕಕ್ಕೆ ಮತ ನೀಡಿದಂತೆ. 2024ಕ್ಕೆ ಮತ್ತೊಮ್ಮೆ ನರೇಂದ್ರ ಮೋದಿಜಿ ಪ್ರಧಾನಿ ಆಗಬೇಕಾದರೆ ಡಾ.ಪ್ರೀತನ್ ನಾಗಪ್ಪ ಶಾಸಕರಾಗಿ ಆಯ್ಕೆಯಾಗಬೇಕು ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ ಹಾಗಾಗಿ ಬಿಜೆಪಿ ಪಕ್ಷಕ್ಕೆ ಮತ ನೀಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ತಿಳಿಸಿದರು.
ಹನುರು ಪಟ್ಟಣದ ಜಿ.ಗೌಡ ಕಾಲೇಜು ಪಕ್ಕದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಬಾರಿಯ ಚುನಾವಣೆ ಕರ್ನಾಟಕದ ಅಭಿವೃದ್ಧಿಗಾಗಿ ಆದರೆ ಕಾಂಗ್ರೆಸ್ ಸರ್ಕಾರ ಬಂದರೆ ಅಭಿವೃದ್ಧಿಯಿಂದ ಹಿಂದೆ ಹೋಗುತ್ತದೆ. ಜೋತೆಗೆ ಬಿಜೆಪಿ ಸರ್ಕಾರ ಲಿಂಗಾಯಿತರು ಒಕ್ಕಲಿಗರು ಎಸ್ಸಿ ಎಸ್ಟಿಗಳ ನೀಡಿರುವಂತಹ ಮೀಸಲಾತಿಗಳನ್ನು ಹಿಂಪಡೆಯಲ್ಲಿದ್ದಾರೆ.
ನರೇಂದ್ರ ಮೋದಿಜಿ ಅವರು ದೇಶಕ್ಕೆ ಒಳ್ಳೆ ಆಡಳಿತ ನೀಡಿದ್ದಾರೆ ಅಂತಹ ಅಂತರಾಷ್ಟ್ರೀಯ ನಾಯಕನನ್ನ ಕಾಂಗ್ರೆಸ್ ನವರು ವಿಷ ಶರ್ಪಕ್ಕೆ ಹೋಲಿಸುತ್ತಾರೆ ಖರ್ಗೆಯವರು ಇದು ಎಷ್ಟರ ಮಟ್ಟಕ್ಕೆ ಸರಿ. ಕುಟುಂಬ ರಾಜಕಾರಣ ಗಲಾಟೆ ಮಾಡುವ ಪಕ್ಷ ಕಾಂಗ್ರೆಸ್ ಇಂತಹ ಪಕ್ಷವನ್ನು ಯಾರು ಬೆಂಬಲಿಸಬಾರದು.
ಕಾಂಗ್ರೆಸ್ಸಿನವರು ಗ್ಯಾರಂಟಿ ಕಾರ್ಡ್ ಹೆಸರಿನಲ್ಲಿ ಉಚಿತ ವಿದ್ಯುತ್ ಕುಟುಂಬದವರಿಗೆ 2ಸಾವಿರ ರೂಂ. ಹಾಗೆ ಹೀಗೆ ಅಂತ ಸುಳ್ಳು ಭರವಸೆಗಳನ್ನು ನೀಡುತ್ತಾ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೇವೆ ಎಂದು ಹಗಲುಗನಸು ಕಾಣುತ್ತಿದ್ದಾರೆ. ಯುಪಿಎ ಸರ್ಕಾರದಲ್ಲಿ ಸೋನಿಯಾ ಗಾಂಧಿಯವರು 2009 ರಿಂದ 2014 ರವರೆಗೆ ರಾಜ್ಯಕ್ಕೆ ನೀಡುತ್ತಿದ್ದ 94 ಸಾವಿರ ಕೋಟಿ ಅನುದಾನವನ್ನು ನಮ್ಮ ಸರ್ಕಾರ 2 ಲಕ್ಷದ 24 ಸಾವಿರ ರೂ. ಕೋಟಿ ಹೆಚ್ಚಿಸಿದೆ.
ನರೇಂದ್ರ ಮೋದಿ ಅವರು ಇಡೀ ಭಾರತವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. 370 ವಿಧಿಯನ್ನು ತೆಗೆದು ಕಾಶ್ಮೀರದಲ್ಲಿ ಭಾರತದ ದೇಶದ ಪ್ರತಿಯೊಬ್ಬ ಪ್ರಜೆಗಳು ಎಲ್ಲಾ ಸ್ಥಾನಮಾನಗಳನ್ನು ಪಡೆಯುವಂತೆ ಮಾಡಿ ಎಲ್ಲ ಸಮಾನವಾಗಿ ಬದುಕಲು ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.
ಪ್ರತಿಯೊಂದು ಕ್ಷೇತ್ರದಲ್ಲಿ ಅಭ್ಯರ್ಥಿಯನ್ನ ಗೆಲ್ಲಿಸು ಇದರಿಂದ ಒಬ್ಬ ಎಂಎಲ್‍ಎ ಗೆಲ್ಲುತ್ತಾರೆ ಆದರೆ ಹನೂರು ಕ್ಷೇತ್ರದಲ್ಲಿ ಡಾ.ಪ್ರೀತನ್ ನಾಗಪ್ಪ ಅವರು ಗೆದ್ದರೆ ನಾಲ್ಕು ಎಮ್ಮೆಲ್ಲೆಗಳು ಗೆದ್ದಂತೆ ಅಂದರೆ ಆಕಾಂಕ್ಷಿಗಳಾಗಿದ್ದಂತಹ ನಿಶಾಂತು ವೆಂಕಟೇಶ್ ದತ್ತೆಶ್ ಕುಮಾರನ್ ಅವರು ಗೆದ್ದಂತೆ. ಹಾಗಾಗಿ ಹನೂರು ಕ್ಷೇತ್ರದಲ್ಲಿ ಕಮಲ ಅರಳುತ್ತೆ ಪಕ್ಷದ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಅವರು ಮಾತನಾಡಿ ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಈ ಬಾರಿ ಹನೂರು ಬಿಜೆಪಿ ಅಭ್ಯರ್ಥಿ ಡಾಕ್ಟರ್ ಪ್ರೀತನ್ ನಾಗಪ್ಪ ಗೆಲ್ಲುವುದು ಅಷ್ಟೇ ಸತ್ಯ ಎಂದು ಭವಿಷ್ಯ ನುಡಿದರು.
ಕ್ಷೇತ್ರದ ಅಭಿವೃದ್ಧಿಗಾಗಿ ನಿಮ್ಮೆಲ್ಲರ ಸೇವೆಗಾಗಿ ಡಾಕ್ಟರ್ ಪ್ರೀತನ್ ನಾಗಪ್ಪ ಅವರಿಗೆ ಮತ ನೀಡಿ 15 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಅವರನ್ನು ಗೆಲ್ಲಿಸಬೇಕು ಎಂದು ತಿಳಿಸಿದರು.
ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದ್ದು ಪ್ರತಿ ಕುಟುಂಬಕ್ಕೂ ಪ್ರತಿ ವರ್ಷಕ್ಕೆ ಮೂರು ಗ್ಯಾಸ್ ಸಿಲಿಂಡರ್ ಉಚಿತವಾಗಿ ನೀಡಲು ತೀರ್ಮಾನಿಸಲಾಗಿದೆ. ಬಿಪಿಎಲ್ ಕುಟುಂಬಕ್ಕೆ ಪ್ರತಿದಿನ ಅರ್ಧ ಲೀಟರ್ ಹಾಲು ಉಚಿತ, 5 ಕೆ.ಜಿ ಅಕ್ಕಿ ಜೊತೆಗೆ ಐದು ಕೆಜಿ ಸಿರಿಧಾನ್ಯ, ಹಿರಿಯ ನಾಗರಿಕರಿಗೆ ಉಚಿತ ಮಾಸ್ಟರ್ ಹೆಲ್ತ್ ತಪಾಸಣೆ.
ಮನೆ ಇಲ್ಲದವರಿಗೆ 5 ಲಕ್ಷ ಮನೆ ನಿರ್ಮಾಣದ ಯೋಜನೆ, 10 ಲಕ್ಷ ಉದ್ಯೋಗ ಸೃಷ್ಟಿ ಹಾಗೂ ವೃದ್ಯಾಪ್ಯ ವೇಪನವನ್ನು 800 ರೂ.ರಿಂದ 2 ಸಾವಿರ ರೂ.ಗೆ ಹೆಚ್ಚಿಸಿ ಜನಪರ ಆಡಳಿತ ಯೋಜನೆಗಳನ್ನು ನೀಡಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ನಾವು ನೀಡಿರುವಂತಹ ಪ್ರಣಾಳಿಕೆಯ ಭರವಸೆಗಳನ್ನು ಈಡೇರಿಸಲಿದ್ದೇವೆ ಎಂದು ಭರವಸೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅಮಿತ್ ಶಾ ಜಿ ಅವರು ಈ ದೇಶದ ಸರ್ವಾಂಗಿನ ಅಭಿವೃದ್ಧಿಗಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವಂತಹ ಈ ಸಂದರ್ಭದಲ್ಲಿ ಅಮಿತ್ ಶಾ ಜಿ ಬಂದಿರುವಂತಹ ಸಂದರ್ಭದಲ್ಲಿ ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ ಕಳೆದ ಬಾರಿ ಅಲ್ಪ ಮತಗಳಿಂದ ನಾವು ಸೋತಿದ್ದೇವೆ ಈ ಬಾರಿ ಡಾ.ಪ್ರೀತನ್ ನಾಗಪ್ಪ ಅವರನ್ನು ಅಧಿಕ ಮತಗಳಿಂದ ಗೆಲ್ಲಿಸಬೇಕು ಎಂದು ಮತಯಾಚಿಸಿದರು.
ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಪ್ರೀತನ್ ನಾಗಪ್ಪ ಅವರು ಮಾತನಾಡಿ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿರುವ ನನಗೆ ನಿಮ್ಮೆಲ್ಲರ ಮತಗಳನ್ನು ನೀಡಿ ಗೆಲ್ಲಿಸಬೇಕೆಂದು ಕೈಮುಗಿದರು.
ನಮ್ಮ ತಂದೆಯವರಾದ ದಿವಂಗತ ನಾಗಪ್ಪ ಅವರು ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿಗಳನ್ನು ಮಾಡಿ ಜನರ ಉತ್ತಮ ಒಡನಾಟ ಇಟ್ಟುಕೊಂಡು ಜನ ಸೇವೆ ಮಾಡಿದ್ದಾರೆ ಅವರಂತೆ ನಾನು ಕೂಡ ನಿಮ್ಮೆಲ್ಲರ ಸೇವೆ ಮಾಡಲು ಬಂದಿದ್ದೇನೆ ನನಗೊಂದು ಅವಕಾಶ ಮಾಡಿ ನಿಮ್ಮೆಲ್ಲರ ಸೇವೆ ಮಾಡಲು ಎಂದು ಮತ ಯಾಚಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕಿ ಪರಿಮಳ ನಾಗಪ್ಪ, ಮಾಜಿ ಶಾಸಕ ಬಾಲರಾಜು, ರಾಜ್ಯ ಚುನಾವಣಾ ವಕ್ತಾರ ಬಿಹಾರ ಎಂಎಲ್ಸಿ ದಿಲೀಪ್ ಕುಮಾರ್ ಜೈಸ್ವಾಲ್, ಹನೂರು ಚುನಾವಣೆ ಉಸ್ತುವಾರಿ ಪೆÇನ್ನು ರಾಧಾಕೃಷ್ಣನ್, ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಓಬಿಸಿ ರಾಷ್ಟ್ರೀಯ ಕಾರ್ಯಕಾರಣ ಸದಸ್ಯ ನೂರೊಂದು ಶೆಟ್ಟಿ, ಬೂದುಬಾಳು ವೆಂಕಟಸ್ವಾಮಿ, ಹನೂರು ಮಂಡಲ ಅಧ್ಯಕ್ಷ ಸಿದ್ದಪ್ಪ, ವೀರಭದ್ರ, ದತೇಶ್ ಕುಮಾರ್, ವೆಂಕಟೇಶ್, ನಿಶಾಂತ್, ಜಯಸುಂದ್ರ, ವಕೀಲರು ರಂಗಸ್ವಾಮಿ, ಮಾಧುರಾಜು, ಶಿವಕುಮಾರ್ ಸೇರಿದಂತೆ ಇನ್ನಿತರರು ಇದ್ದರು.