
ಸಂಜೆವಾಣಿ ವಾರ್ತೆ
ಸಂಡೂರು:ಮಾ: 12: ಇತಿಹಾಸ ತಿಳಿದವನು ಇತಿಹಾಸ ಸೃಷ್ಟಿಸಬಲ್ಲ, ಈ ದೇಶದ ಇತಿಹಾಸವೇ ಕಾಂಗ್ರೇಸ್ ಇತಿಹಾಸವಾಗಿದೆ, ದೇಶದ ಪ್ರಗತಿಗೆ ಅಣೆಕಟ್ಟುಗಳ ನಿರ್ಮಾಣ, ಗರೀಭೀ ಹಟಾವೋ, ಬ್ಯಾಂಕುಗಳ ರಾಷ್ಟ್ರೀಕರಣ, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದಂತಹ ಮಹತ್ತರ ಯೋಜನೆಗಳ ಜೊತೆ ಪ್ರತಿಯೊಬ್ಬರೂ ಸಹ ಹಸಿವು ಮುಕ್ತವಾಗಲೆಂದು ಅನ್ನಭಾಗ್ಯ ಯೋಜನೆ ಜಾರಿಗೆ ತರುವ ಮೂಲಕ ದೇಶದ ಪ್ರಗತಿಗೆ ನಾಂದಿಹಾಡಿದ್ದೇವೆ ಎಂದು ಶಾಸಕ ಈ.ತುಕರಾಂ ತಿಳಿಸಿದರು.
ಅವರು ಇಂದು ಪಟ್ಟಣದ ಶಾಸಕರ ಕಛೇರಿ ಅವರಣದಲ್ಲಿ ಪ್ರಜಾಧ್ವನಿಯಾತ್ರೆ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಜಗತ್ತಿನ ಶ್ರೇಷ್ಠ ಪ್ರಧಾನಿಯಾಗಿದ್ದವರು ಮನಮೋಹನ್ ಸಿಂಗ್, ಅವರು ತಂದ ಯೋಜನೆ ಇಂದು ದೇಶದ ಪ್ರಗತಿಗೆ ಕಾರಣವಾಗಿದೆ ಎನ್ನುವುದನ್ನು ಬಿಜೆಪಿ ಮರೆತಿದೆ, ಅವರು ಪ್ರನಾಳಿಕೆಯಲ್ಲಿ ಘೋಷಿಸಿದ ಒಂದು ಯೋಜನೆಯನ್ನು ಸಹ ಮಾತನಾಡುತ್ತಿಲ್ಲ ಮೋದಿಯವರು, ಬರೀ ಧರ್ಮ ಕಲಹ, ಜಾತಿ ಕಲಹ, ಖಾಸಗೀಕರಣ, ಲೂಟಿ ಮಾಡುವಂತಹ ಕಾರ್ಯ ನಡೆಯುತ್ತಿದೆ, ಅದಕ್ಕೆ ಉತ್ತರವಾಗಿ ಡಾ. ಬಿ.ಅರ್. ಅಂಬೇಡ್ಕರ್ ಕೊಟ್ಟಂತಹ ಮತದಾನದ ಹಕ್ಕಿನ ಮೂಲಕ ನಾಗರೀಕರು ಉತ್ತರಿಸಬೇಕು ಕಾಂಗ್ರೇಸ್ ಪಕ್ಷಕ್ಕೆ ಮತ ಚಲಾಯಿಸುವ ಮೂಲಕ ಈ ದೇಶದ ಪ್ರಗತಿಗೆ ನಾಂದಿಹಾಡಬೇಕು, ಕೇವಲ ಡೊಂಗೀ ದೇಶಪ್ರೇಮವನ್ನು ಬಿತ್ತುವ ಮೂಲಕ ಜನರನ್ನು ದಿಕ್ಕು ತಪ್ಪಿಸುವ ವ್ಯವಸ್ಥಿತ ತಂತ್ರಗಾರಿಕೆ, ಸಂಡೂರಿನ ನಾಗರೀಕರು ಪ್ರಜ್ಞಾವಂತರಿದ್ದಾರೆ, ಓದಿದವರಿಗೆ ಮಾತ್ರ ಫಾಸಾಗಲು ಸಾಧ್ಯ, ಕಾಪಿ ಹೊಡೆಯುವವರಿಗೆ ಅವಕಾಶವಿಲ್ಲ, ಸಂಡೂರಿನ ಸಮಗ್ರ ಅಭಿವೃದ್ದಿಗೆ ನಿರಂತರವಾಗಿ ಸಹೋದರ ಭಾವನೆಯಿಂದ ಶ್ರಮಿಸುತ್ತಿದ್ದು ದಿನಾಂಕ: 19 ರಂದು ಪಟ್ಟಣದಲ್ಲಿ ನಡೆಯುವು ಪ್ರಜಾಧ್ವನಿ ಯಾತ್ರೆಯಲ್ಲಿ ಸಿದ್ದರಾಮಯ್ಯನವರು ಅಗಮಿಸುತ್ತಿದ್ದು ಅವರು ಗ್ಯಾರಂಟಿ ಕಾರ್ಡ ನೀಡುತ್ತಿದ್ದಾರೆ ಪ್ರತಿ ಮಹಿಳೆಗೆ 2 ಸಾವಿರ, 10 ಕೆ.ಜಿ. ಉಚಿತ ಅಕ್ಕಿ, 200 ಯೂನಿಟ್ ವಿದ್ಯುತ್ ವಿತರಣೆ ಮಾಡುವಂತಹ ಮಹತ್ತರ ಯೋಜನೆಯನ್ನು ಮಾಡುವ ಪ್ರಮಾಣ ಪತ್ರ ಕೊಡುತ್ತಿದ್ದೇವೆ, ನುಡಿದಂತೆ ನಡೆಯುವು ಸರ್ಕಾರ ಯಾವುದಾದರೂ ಇದ್ದರೇ ಕಾಂಗ್ರೇಸ್ ಸರ್ಕಾರ, ಮೋದಿಯವರು ಉದ್ಯೋಗ ಕೊಡುತ್ತೇವೆ ಎಂದರೆ ವರ್ಷಕ್ಕೆ 1 ಲಕ್ಷ ಉದ್ಯೋಗ ಸಹ ನೀಡಲಿಲ್ಲ, 15 ಲಕ್ಷ ಖಾತೆಗೆ ಹಾಕುತ್ತೇವೆ ಎಂದರೂ, ಪೈಸೆಯನ್ನೂ ಸಹ ಹಾಕಲಿಲ್ಲ, ಅಚ್ಚೆ ದಿನ್ ಎಂದರೆ ಗ್ಯಾಸ್,ಪೆಟ್ರೋಲ್, ದಿನಸಿ ಬೆಲೆ ಗಗನಕ್ಕೇರಿಸಿ ಅಚ್ಚೇದಿನ ಆಚರಿಸಿದರು, ನಾಗರೀಕರ ಶೋಷಣೆಯೇ ಮೂಲವಾಗಿದೆ ಇಂತಹ ಭ್ರಷ್ಟಸರ್ಕಾರವನ್ನು ಕಿತ್ತೋಗೆಯಲು ಪಣ ತೋಡೋಣ ಎಂದರು.
ಕಾರ್ಯಕ್ರಮದಲ್ಲಿ ಲಾಡ್ ಕುಟುಂಬದ ಹಿರಿಯರಾದ ಡಾ. ಏಕನಾಥ ಲಾಡ್ ಮಾತನಾಡಿ ವಿದ್ಯಾವಂತ, ಅಭಿವೃದ್ದಿಗೆ ನಿರಂತರ ಶ್ರಮಿಸುವ, ಭ್ರಷ್ಟಚಾರ ರಹಿತ ವ್ಯಕ್ತಿಯನ್ನು ಆಯ್ಕೆಮಾಡಿ, ತುಕರಾಂ ಅಂತಹ ಯೋಗ್ಯನಾಯಕ ಎಂದರು.
ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷೆ ಅನಿತಾ ವಸಂತಕುಮಾರ್ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷೆ ಅಶಾಲತಾ, ಮಾಜಿ ಅಧ್ಯಕ್ಷ ಎಲ್.ಹೆಚ್. ಶಿವಕುಮಾರ್, ಗಡಂಬ್ಲಿ ಚನ್ನಪ್ಪ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಚಿತ್ರಿಕಿ ಸತೀಶ್, ಏಕಾಂಬರಪ್ಪ, ಮಾಜಿ ವಾಡಾ ಅಧ್ಯಕ್ಷ ರೋಷನ್ ಜಮೀರ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಈರಮ್ಮ, ಹನುಮಂತರಡ್ಡಿ, ಬಂಡ್ರಿ ರವಿಕುಮಾರ್, ಬಿಜಿ.ಸಿದ್ದೇಶ್, ಉಪಾಧ್ಯಕ್ಷ ಈರೇಶ್ ಸಿಂಧೆ, ಹಲವಾರು ಕಾಂಗ್ರೇಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. ಪ್ರಜಾಧ್ವನಿ ಯಾತ್ರೆಯನ್ನು ಉದ್ದೇಶಿಸಿ ಶಾಸಕ ಈ.ತುಕರಾಂ ಮಾತನಾಡಿ ಪ್ರತಿ ಮಹಿಳೆಯರಿಗೆ ಅಧಿಕಾರಿಕ್ಕೆ ಬಂದರೆ 2000 ಮಾಸಿಕ ನೇರ ಖಾತೆಗೆ ಹಾಕುವುದಾಗಿ ಘೋಷಿಸಿ, ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಭಾಗಿಯಾಗಲು ಕರೆನೀಡಿದರು.