ಕಾಂಗ್ರೆಸ ನುಡಿದಂತೆ ನಡೆಯುತ್ತಿರುವ ಸರಕಾರ: ಪ.ಪಂ ಸದಸ್ಯ ತೌಶಿಪ ಗಿರಗಾಂವಿ

ಕೊಲ್ಹಾರ: ಮೇ.22:ರಾಜ್ಯದ ಕಾಂಗ್ರೆಸ ಸರ್ಕಾರ ನುಡಿದಂತೆ ನಡೆಯುವ ಮೂಲಕ ಜನರ ಮನದಲ್ಲಿ ಅಚ್ಚಳಿಯದೆ ನೆಲೆ ನಿಂತಿದೆ ಎಂದು ಪ.ಪಂ ಸದಸ್ಯ ತೌಶಿಪ ಗಿರಗಾವಿ ಹೇಳಿದರು.
ಕಾಂಗ್ರೆಸ ಸರ್ಕಾರ ಒಂದು ವರ್ಷ ಪೂರೈಸಿದ ಪ್ರಯುಕ್ತ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಈ ಒಂದು ವರ್ಷದಲ್ಲಿ ಅನೇಕ ಮಹತ್ತರ ಬದಲಾವಣೆಗಳನ್ನು ತಂದಿದೆ, ಜನರ ಕಷ್ಟಕ್ಕೆ ಮಿಡಿದಿದೆ, ಚುನಾವಣೆಯ ಮುಂಚೆ ಕೊಟ್ಟ ಭರವಸೆಗಳನ್ನ ಈಡೇರಿಸಿ ನುಡಿದಂತೆ ನಡೆದ ಸರ್ಕಾರ ಎನ್ನುವ ಹೆಸರು ಪಡೆದಿದೆ ಎಂದು ಅವರು ಹೇಳಿದರು.