ಕಾಂಗ್ರೆಸ್ 2 ನೇ ಪಟ್ಟಿಯಲ್ಲಿ ನಗರ ಅಭ್ಯರ್ಥಿ ಪ್ರಕಟ ಸಾಧ್ಯತೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.04: ಇಂದು ನವ ದೆಹಲಿಯಲ್ಲಿ ನಡೆದಿರುವ ಎಐಸಿಸಿ ಚುನಾವಣಾ ಸಮಿತಿಯ ಸಭೆಯಲ್ಲಿ ನಗರ ಕ್ಷೇತ್ರದ ಅಭ್ಯರ್ಥಿಯನ್ನು ಪ್ರಕಟಿಸುವ ಸಾಧ್ಯತೆ ಇದೆ.
ಬಹುತೇಕ ನಾರಾ ಭರತ್ ರೆಡ್ಡಿ ಹೆಸರು ಪ್ರಕಟವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೂ ಮಾಜಿ ಶಾಸಕ ಅನಿಲ್ ಲಾಡ್, ಪ್ರಚಾರ ಸಮಿತಿಯ ಮುಖಂಡ ಜೆ.ಎಸ್.ಆಂಜನೇಯಲು, ರಾವೂರು ಸುನೀಲ್ ದೆಹಲಿಯಲ್ಲಿಯೇ ಬೀಡು ಬಿಟ್ಟು ಸಭೆ ಆರಂಭವಾಗುವ ಮುನ್ನದ ಕ್ಷಣದವರಗೆ ತಮಗೆ ಟಿಕೆಟ್ ನೀಡಿ ಎಂಬ ಪ್ರಯತ್ನ‌ ಮುಂದುವರೆಸಿದ್ದರಂತೆ.
ಯಾವ ಕಾರಣಕ್ಕೆ ತಮಗೆ ಪಕ್ಷ ಟಿಕೆಟ್ ನೀಡಬೇಕು ಎಂಬ ಅಂಶಗಳನ್ನು ಚುನಾವಣಾ ಸಮಿತಿಯ ಮುಖಂಡರುಗಳಿಗೆ ತಲುಪಿಸಿದ್ದಾರಂತೆ.
ಪಕ್ಷದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯದ ಉಸ್ತುವಾರಿ ಸುರ್ಜಿವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಉಳುದ ನಾಯಕರು ಯಾವ ನಿರ್ಧಾರಕ್ಕೆ ಬರಲಿದ್ದಾರೆಂಬುದನ್ನು ಕಾದು ನೋಡಬೇಕಿದೆ.