ಕಾಂಗ್ರೆಸ್ ೧೫೦ ಸ್ಥಾನ ಗೆದ್ದು ಅಧಿಕಾರಕ್ಕೆ ಬರಲಿದೆ- ರವಿ ಬೋಸರಾಜು

ರಾಯಚೂರು, ಏ.೨೪-
ರಾಜ್ಯದಲ್ಲಿ ಕಾಂಗ್ರೆಸ್ ೧೫೦ ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ, ರಾಯಚೂರು ನಗರ ಕ್ಷೇತ್ರದಲ್ಲಿ ಜನರ ಆಶೀರ್ವಾದ ದಿಂದ ಕಾಂಗ್ರೆಸ್ ಅಭ್ಯರ್ಥಿ ಮೊಹ್ಮದ್ ಶಾಲಂ ಅವರು ಶಾಸಕರಾಗುದು ಖಚಿತ ಎಂದು ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರು ಕಾಂಗ್ರೆಸ್ ಅಭ್ಯರ್ಥಿ ಮೊಹ್ಮದ್ ಶಾಲಂ ಅವರ ಪರ ಪ್ರಚಾರ ಯಾತ್ರೆಯಲ್ಲಿ ಮಾತನಾಡಿದರು.
ರಾಯಚೂರು ನಗರ ವಿಧಾನ ಸಭಾ ಕ್ಷೇತ್ರದ ಮಂಗಳವಾರ ಪೇಟೆಯಲ್ಲಿ ಕಾಂಗ್ರೆಸ್ ಜನಾಶೀರ್ವಾದ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿ, ನಗರ ಶಾಸಕರ ೪೦% ಬ್ರಷ್ಟಾಚಾರಕ್ಕೆ ಜನರು ಬೇಸತ್ತಿದ್ದಾರೆ ಈ ಬಾರಿ ಜನರು ಬದಲಾವಣೆ ಬಯಸಿ ರಾಯಚೂರು ನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷದ ಕೈ ಹಿಡಿದು ಆಶೀರ್ವಾದ ಮಾಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಡಾವಣೆಯ ಜನರು ಮಾತನಾಡಿ ನಮಗೆ ಕುಡಿಯಲು ಸರಿಯಾದ ನೀರಿಲ್ಲ, ರಸ್ತೆ ಇಲ್ಲ, ಚರಂಡಿ ಇಲ್ಲ, ರಾಯಚೂರಿನಲ್ಲಿಯೇ ವಿದ್ಯುತ್ ಉತ್ಪಾದನೇಯಾದರು ನಮಗೆ ೨೪x೭ ಬೆಳಕು ನೀಡುತ್ತಿಲ್ಲ ಎಂದು ಅಳಲನ್ನು ಕಾಂಗ್ರೆಸ್ ನಾಯಕರೊಂದಿಗೆ ಮಾತನಾಡಿದರು.
ಮ ನಿಮ್ಮೆಲ್ಲರ ಸಮಸ್ಯೆಗಳ ಶಾಸ್ವತ ಪರಿಹಾರದ ಕಾಲ ಬಂದಿದೆ ಸುಳ್ಳು ಮಾತಿಗೆ ಮರಳಾಗದೆ ಕಾಂಗ್ರೆಸ್ ಅಭ್ಯರ್ಥಿ ಮೊಹ್ಮದ್ ಶಾಲಂ ಅವರಿಗೆ ಬೆಂಬಲಿಸಿ ಎಂದು ಮನವಿ ಮಾಡಿದರು ಮತಯಾಚಿಸಿದರು.
ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ಶಾಂತಪ್ಪ, ಜಿ. ಸುರೇಶ, ನರಸಿಂಹಲು ಮಾಡಗಿರಿ, ರಾಮು ಗಿಲೇರಿ, ತಾಯಣ್ಣ ನಾಯಕ, ಪ್ರಮೋದ್, ನಗರಸಭೆ ಸದಸ್ಯ ನೂರ್ ಅಹ್ಮದ್, ಪ್ರಶಾಂತ, ಜಿ. ಶಿವಮೂರ್ತಿ, ಮಹಾಲಿಂಗಪ್ಪ ಪಾಟೀಲ್, ತಿಮ್ಮಾರಡ್ಡಿ, ನರಸರೆಡ್ಡಿ, ಅರುಣ ಧೋತರಬಂಡಿ, ಹನುಮಂತ, ವೀರೇಶ, ಪ್ರಜ್ವಲ್ ಶರಣಗೌಡ, ಪ್ರವೀಣ ಪೋಗಲ್, ಯಲ್ಲಪ್ಪ, ಶಿವರಾಜ್ , ಮಾರೆಪ್ಪ, ವೀರೇಶ ಸೇರಿದಂತೆ ಸಾವಿರಾರು ಕಾರ್ಯಕರ್ತರು ಇದ್ದರು.