ಕಾಂಗ್ರೆಸ್ ಸೇರ್ಪಡೆ

ಬೈಲಹೊಂಗಲ, ಏ4: ಶಾಸಕ ಮಹಾಂತೇಶ ಕೌಜಲಗಿ ಅವರು ಮತಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ದಿ ಕಾರ್ಯಗಳನ್ನು ಮನಗಂಡು ಪುರಸಭೆ ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ ಅವರ ನೇತೃತ್ವದಲ್ಲಿ 500 ಕ್ಕೂ ಹೆಚ್ಚು ಕಾರ್ಯಕರ್ತರು ಶಾಸಕ ಮಹಾಂತೇಶ ಕೌಜಲಗಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಅವರ ಗೃಹ ಕಚೇರಿಯಲ್ಲಿ ಶಾಸಕ ಮಹಾಂತೇಶ ಕೌಜಲಗಿ ಸರ್ವರನ್ನು ಕಾಂಗ್ರೆಸ್ ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು.
ಪುರಸಭೆ ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ ಮಾತನಾಡಿದರು. ಬಾಬುಸಾಬ ಸುತಗಟ್ಟಿ, ಸೋಮಶೇಖರ ವಾಲಿ, ಈಶ್ವರ ಬೋರಕನವರ, ಗುಂಡಪ್ಪ ಸನದಿ, ಇಸ್ಮಾಯಿಲ ದೇವಲಾಪುರ ಕಾಂಗ್ರೆಸ್ ಪಕ್ಷಕ್ಕೆ
ಸೇರ್ಪಡೆಗೊಂಡರು. ಮಹಾಂತೇಶ ತುರಮರಿ ಅಭಿಮಾನಿ ಬಳಗದ ನೂರಾರು ಕಾರ್ಯಕರ್ತರು ಇದ್ದರು.