ಕಾಂಗ್ರೆಸ್ ಸೇರ್ಪಡೆಯಾದ ಯದರೂರು ಮುಖಂಡರು

ಕೋಲಾರ,ಏ.೪:ಶ್ರೀನಿವಾಸಪುರ ತಾಲ್ಲೂಕಿನ ಲಕ್ಷ್ಮಿಸಾಗರ ಗ್ರಾಮ ಪಂಚಾಯಿತಿ ಯದರೂರು ಗ್ರಾಮದ ಶಶಿಕಲಾ ಸುರೇಶ್, ಚೌಡಪ್ಪರವರ ನೇತೃತ್ವದಲ್ಲಿ, ಶ್ರೀನಿವಾಸಪುರ ಶಾಸಕರಾದ ಕೆ.ಆರ್ ರಮೇಶ್ ಕುಮಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಯದರೂರು ಗ್ರಾಮದ ಮುಖಂಡರಾದ ರಜಪೂತ್ ಜನಾಂಗದ ಲಕ್ಷ್ಮಣ್‌ಸಿಂಗ್, ಮಂಜುನಾಥಸಿಂಗ್, ಮುರಳಿಸಿಂಗ್, ಭವಾನಿಸಿಂಗ್ ರವರ ನಾಲ್ಕು ಕುಟುಂಬಗಳು, ಮುಸ್ಲೀಮ್ ಸಮುದಾಯದ ಅಯೂಬ್, ರಪೀಕ್, ಚಿಕನ್ ಬಾಬು, ತಾಕೀರ್, ಕೆ.ಎಸ್.ಆರ್.ಟಿ.ಸಿ ಶಿವಣ್ಣ, ಚಂದ್ರಶೇಖರ್, ಮರಗಲ್ ಹರೀಶ್ ಕುಟುಂದವರು ಸೇರ್ಪಡೆಯಾದರು.
ಶಾಸಕರಾದ ಕೆ.ಆರ್ ರಮೇಶ್ ಕುಮಾರ್ ಮಾತನಾಡಿ, ಶ್ರೀನಿವಾಸಪುರ ಕ್ಷೇತ್ರದಲ್ಲಿ ತಮ್ಮ ಅಧಿಕಾರವಧಿಯಲ್ಲಿ ಕೈಗೊಂಡಿರುವ ಉತ್ತಮ ಕೆಲಗಳನ್ನು ಮೆಚ್ಚಿ ಅನೇಕ ಗ್ರಾಮಗಳಲ್ಲಿ ಮುಖಂಡರುಗಳು, ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಪಕ್ಷದ ಸಂಘಟನೆಗೆ ಮತ್ತಷ್ಟು ಬಲ ನೀಡಿದಂತಾಗಿದೆ. ಯಾವುದೇ ಪಕ್ಷ ಬೇಧವಿಲ್ಲದೆ ಪ್ರತಿಯೊಬ್ಬರಿಗೂ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಡಿ.ಸಿ.ಸಿ ಬ್ಯಾಂಕ್ ವೃತ್ತಿಪರ ನಿರ್ದೇಶಕ ಹಾಗೂ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಶ್ಯಾಗತ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಸ್.ವಿ ಸುಧಾಕರ್, ಮಾಜಿ ಅಧ್ಯಕ್ಷ ಲಕ್ಷ್ಮೀಸಾಗರ ಅಶೋಕ್, ಲಕ್ಷ್ಮೀಸಾಗರ ಹನುಮೇಗೌಡ, ಚನ್ನಹಳ್ಳಿ ಸೀನಪ್ಪ, ಶೆಟ್ಟಿಹಳ್ಳಿ ದೇವರಾಜು, ವೆಂಕಟೇಶಪ್ಪ, ಅನಂತರೆಡ್ಡಿ, ಆನಂದ್, ಆವುಲಪ್ಪ, ಆದಿನಾರಾಯಣ, ಪಿಂಡಿ ನಗರ ಪ್ರಭಾಕರ್, ಕೊಳತೂರು ಚಿನ್ನಪ್ಪಯ್ಯ, ನಾರಾಯಣಸ್ವಾಮಿ, ಅರಕೆರೆ ಸದಸ್ಯರಾದ ಹರೀಶ್, ಜಗದೀಶ್, ಶ್ಯಾಗತ್ತೂರು ಸದಸ್ಯರಾದ ವಿವೇಕ್, ಸುಬ್ಬಮ್ಮ, ಲಕ್ಷ್ಮೀದೇವಮ್ಮ, ಗ್ರಾಮ ಪಂಚಾಯತಿ ಸದಸ್ಯರಾದ ನಾಗರಾಜು, ಬೀರಗಾನಹಳ್ಳಿ ಸುರೇಶ್, ಚನ್ನಕೃಷ್ಣಪ್ಪ, ಮಾಜಿ ಸದಸ್ಯರಾದ ನಾರಾಯಣಸ್ವಾಮಿ, ಅಗಸರ ಸೀನಪ್ಪ, ಆರೀಫ್, ಇಸ್ಮಾಯಿಲ್, ಬಿ.ಶಂಕರಪ್ಪ, ಅಪ್ಪಯ್ಯ ಉಪಸ್ಥಿತರಿದ್ದರು.