ಕಾಂಗ್ರೆಸ್ ಸೇರಲ್ಲ ಎಂಟಿಬಿ ಸ್ಪಷ್ಟನೆ

ಹೊಸಕೋಟೆ, ನ.೬- ಡಿ.ಕೆ.ಶಿವ ಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಬರುವವರಿಗೆ ಮುಕ್ತವಾಗಿ ಆಹ್ವಾನವನ್ನು ನೀಡಿದ್ದಾರೆ. ಆದರೆ ನಾನು ಬಿಜೆಪಿ ಪಕ್ಷದಲ್ಲಿ ಇದ್ದೇನೆ, ಇಲ್ಲೆ ಇರ್ತೇನೆ. ಆದರೆ ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.
ತಾಲೂಕಿನ ಅನುಗೊಂಡನಹಳ್ಳಿ ಹೋಬಳಿ ಮುತ್ಸಂದ್ರ ಗ್ರಾಪಂಗೆ ಆಯ್ಕೆಯಾದ ಸದಸ್ಯರಿಂದ ಅಭಿನಂದನೆ ಸ್ವೀಕರಿಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.
ಚುನಾವಣೆ ಸಮೀಪವಿರುವ ಕಾರಣ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರು ಪಕ್ಷಕ್ಕೆ ಬರುವ ಎಲ್ಲರಿಗೂ ಸ್ವಾಗತ ಎಂದು ಹೇಳಿದ್ದಾರೆ. ಆದರೆ ನಾನು ಈಗಾಗಲೆ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿಗೆ ಬಂದು ಮಂತ್ರಿ ಸಹ ಆಗಿದ್ದೇನೆ. ಪದೇ ಪದೇ ಪಕ್ಷ ಬದಲಾವಣೆ ಮಾಡುವ ಜಾಯಮಾನ ನನ್ನದಲ್ಲ. ನಾನೇನಿದ್ದರೂ ಇನ್ನು ಬಿಜೆಪಿ ಪಕ್ಷದಲ್ಲೆ ಇರ್ತೇನೆ. ಎಂದರು.
ಬಿಜೆಪಿ ಪಕ್ಷ ಕೇಂಧ್ರ ಹಾಗೂ ರಾಜ್ಯದಲ್ಲಿ ಸಾಕಷ್ಟು ಪರಿಣಮಕಾರಿಯಾಗಿ ಅಭಿವೃದ್ದಿ ಮಾಡುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಮುತ್ಸಂದ್ರ ಗ್ರಾಪಂಗೆ ನಡೆದ ಚುನಾವಣೆಯಲ್ಲಿ ೨೩ಕ್ಕೆ ಬಿಜೆಪಿ ಬೆಂಬಲಿತ ೧೭ಸದಸ್ಯರು ಗೆದ್ದಿದ್ದಾರೆ. ಅಲ್ಲದೆ ಉಳಿದ ೬ ಸದಸ್ಯರು ಅಲ್ಪ ಮತಗಳ ಅಂತರದಲ್ಲಿ ಸೋಲನುಭವಿಸಿದ್ದಾರೆ. ಆದ್ದರಿಂದ ವಿಪಕ್ಷಗಳು ಮತದಾರರನ್ನು ದಿಕ್ಕು ತಪ್ಪಿಸುವ ಕೆಲಸ ಎಂದಿಗೂ ಫಲ ನೀಡಲ್ಲ ಎಂದರು.
ನಾಗನಾಯಕನ ಕೋಟೆ ಗ್ರಾಪಂ ಸದಸ್ಯೆ ಆಶಾರಾಣಿ ಮಾತನಾಡಿ ಸಚಿವ ಎಂಟಿಬಿ ನಾಗರಾಜ್ ಅವರ ಅಭಿವೃದ್ದಿ ಕಾರ್ಯಗಳು ಈ ಭಾರಿ ನಮ್ಮ ಗೆಲುವಿಗೆ ಸಾಕಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಮತದಾರರು ನಮ್ಮ ಮೇಲೆ ವಿಶ್ವಾಸವಿಟ್ಟು ಮತ ನೀಢುವ ಮೂಲಕ ಗೆಲುವು ಸಾಧಿಸಲು ಸಹಕರಿಸಿದ್ದು ಅವರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಅಭಿವೃದ್ದಿ ಮಾಡಿ ತೋರಿಸುತ್ತೇವೆ ಎಂದರು.
ಇದೇ ಸಂಧರ್ಭದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ನಿತೀಶ್ ಪುರುಷೋತ್ತಮ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ವಿನೋದ್ ರೆಡ್ಡಿ, ಗ್ರಾಪಂ ಸದಸ್ಯರಾದ ಪಟೇಲ್ ಬಾಬು, ಆಶಾರಾಣಿ, ಆಂಜಿನಪ್ಪ, ವಿನೋಧ ಶಶಿಧರ್, ಮುಖಂಢರಾದ ನಾಗನಾಯಕನಕೋಟೆ ವಸಂತ್‌ಕುಮಾರ್, ಮಧು, ಹೀರೇಗೌಡ, ಬಸವರಾಜ್, ಸುನಿಲ್ ಕುಮಾರ್, ಗೋಪಾಲ್, ಪ್ರಕಾಶ್, ಆಟೋ ವೆಂಕಟೇಶ್ ಇದ್ದರು.

ಈ ಬಾರಿ ಮುತ್ಸಂದ್ರ ಗ್ರಾಮ ಪಂಚಾಯ್ತಿ ದಾಖಲೆ ಮಟ್ಟದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಜಯ ದೊರೆತಿದ್ದು ಸಚಿವ ಎಂಟಿಬಿ ನಾಗರಾಜು ರವರ ಅಭಿವೃದ್ದಿ ಅವರ ಸೇವೆಗೆ ಮೆಚ್ಚಿ ಜನ ಮತ ನೀಡಿದ್ದಾರೆ ಆದ್ದರಿಂದ ಮತದಾರರ ಋಣ ತೀರಿಸಲು ನಮ್ಮ ಶಕ್ತಿ ಮೀರಿ ಕೆಲಸ ಮಾಡಿ ನಮ್ಮ ಮುತ್ಸಂದ್ರ ಪಂಚಾಯ್ತಿಯನ್ನು ಬಿಬಿಎಂಪಿ ರೀತಿಯ ಮಾದರಿ ಪಂಚಾಯ್ತಿ ಮಾಡುತ್ತೇವೆ,
-ನಂಜುಂಡರೆಡ್ಡಿ(ಪಟೇಲ್ ಬಾಬು) ನೂತನ ಗ್ರಾಮ ಪಂಚಾಯ್ತಿ ಸದಸ್ಯ