
ಸಂಜೆವಾಣಿ ವಾರ್ತೆ
ಹೊಸಪೇಟೆ ಏ16: ಅಂತು ಮುನಿಸಿಕೊಂಡಿದ್ದ ಬಿಜೆಪಿ ನಾಯಕಿ ರಾಣಿ ಸಂಯುಕ್ತ ಬಹುತೇಕ ಕಾಂಗ್ರೆಸ್ ಸೇರುವುದು ಗ್ಯಾರಂಟಿಯಾಗಿದೆ ಎನ್ನಲಾಗುತ್ತಿದೆ.
ಚುನಾವಣಾ ಪೂರ್ವ ರಾಜಕೀಯ ಬದಲಾವಣೆಗಳಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ರಾಣಿ ಸಂಯುಕ್ತ ಸಿದ್ಧಾರ್ಥಸಿಂಗ್‍ರವರಿಗೆ ಬಿಜೆಪಿ ಟಿಕೆಟ್ ನೀಡುತ್ತಿದಂತೆಯೇ ಬಹಿರಂಗ ಆಕ್ಷೇಪ ವ್ಯಕ್ತಪಡಿಸಿದ ಅವರು ಅನ್ಯಪಕ್ಷಗಳ ನಾಯಕರು ಸಂಪರ್ಕ ಆರಂಭಿಸಿದರು, ಇದಕ್ಕೆ ಪುಷ್ಠಿನೀಡುವಂತೆ ಮಾಧ್ಯಮಗಳನ್ನು ಕರೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ ಅವರು ಕಾರ್ಯಕರ್ತರ ಅಣತಿಯಂತೆ ಮುಂದಿನ ಹೆಚ್ಚೆ ಇಡುವುದಾಗಿ ತಿಳಿಸಿದ್ದರು.
ಈ ಮಧ್ಯೆ ಕಾಂಗ್ರೆಸ್ ಮುಖಂಡರಾದ ಮಾಜಿ ಸಿಎಂ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ, ರಾಣಿ ಸಂಯುಕ್ತ ಬೀಗರಾದ ನಾರಾ ಸೂರ್ಯನಾರಯಣ ರೆಡ್ಡಿಯವರ ಹಾಗೂ ಸ್ಥಳೀಯ ಮಾಜಿ ಶಾಸಕರ ಹಾಗೂ ಹಾಲಿ ಕಾಂಗ್ರೆಸ್ ಅಭ್ಯರ್ಥಿಯೂ ಆದ ಹೆಚ್, ಆರ್. ಗವಿಯಪ್ಪ ಮೂಲಕ ಸಂಪರ್ಕ ಸಾಧಿಸಿದ್ದರೂ ಎನ್ನಲಾಗುತ್ತಿದ್ದರೂ ಕಾರ್ಯಕರ್ತರ ಅಭಿಪ್ರಾಯದ ಹೊರತಾಗಿ ಯಾವುದೆ ತೀರ್ಮಾಣ ಕೈಗೊಳ್ಳಲಾರೆ ಎಂದಿದ್ದರೂ.
ಆದರೆ ಇದೀಗ ಅಪರ ಆಪ್ತವಲಯಗಳ ಪ್ರಕಾರ ರಾಣಿ ಸಂಯುಕ್ತ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾದಂತಾಗಿದೆ. ಈ ಕುರಿತು ಹಿರಿಯನಾಯಕರುಗಳೊಂದಿಗೆ ಮಾತುಕತೆಯಾಗಿದೆ, ಸದ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ದುಡಿಯಬೇಕು ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಎಂಎಲ್‍ಸಿ ಮಾಡುವುದಾಗಿ ಹೇಳಿದ್ದಾರೆ ಈ ಹಿನ್ನೆಲೆಯಲ್ಲಿ ರಾಣಿ ಸಂಯುಕ್ತರವರು ಸಹ ಸಮ್ಮತಿಸಿದ್ದಾರೆ ಎನ್ನಲಾಗಿದ್ದು ಇವರ ಕಾಂಗ್ರೆಸ್ ಸೇರ್ಪಡೆಯಿಂದ ಎಷ್ಟು ಸಹಾಯ ಕಾಂಗ್ರೆಸ್‍ಗೆ ಆಗೋತ್ತಾ ಇಲ್ಲವೂ ತಿಳಿದಿಲ್ಲಾ ಆದರೆ ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಹಿನ್ನೆಡೆಯಾಗುವುದಂತು ಸತ್ಯ.
ಈ ಮಧ್ಯ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ರಾಣಿ ಸಂಯುಕ್ತ ನಾನು ಇನ್ನು ಕಾಂಗ್ರೆಸ್ ಸೇರಲು ಮಾನಸಿಕವಾಗಿ ಸಿದ್ದವಾಗಿಲ್ಲಾ, ನನ್ನ ರಾಜಕೀಯ ನಡೆ ತೀವೃ ಕೂತೂಹಲ ಘಟ್ಟ ತಲುಪಿದೆ, ಇಷ್ಟರಲ್ಲಿಯೇ ನನ್ನ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದರು.