ಕಾಂಗ್ರೆಸ್ ಸುಳ್ಳು ಭರವಸೆ ವಿರುದ್ದ ಪ್ರತಿಭಟನೆ

(ಸಂಜೆವಾಣಿ ವಾರ್ತೆ)
ಹುಮನಾಬಾದ : ಜೂ.7: ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ತಾಲೂಕ ಬಿಜೆಪಿ ಘಟಕದಿಂದ ಪ್ರತಿಭಟನೆ ನಡೆಸಲಾಯಿತು
ಶಾಸಕ ಡಾ. ಸಿದ್ದು ಪಾಟೀಲ್ ಮಾತನಾಡಿ. ಜನ ವಿರೋಧಿ ವಿದ್ಯುತ ದರ ಏರಿಕೆ ಮತ್ತು ಹಾಲಿನ ಪೆÇ್ರೀತ್ಸಾಹ ಧನ ಕಡಿತಗೊಳಿಸಿ, ಬಡ ಜನರ ಜೀವನ ಬಗ್ಗೆ ಜನವಿರೋಧಿ ಕಾಂಗ್ರೇಸ್ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡು ಚುನಾವಣೆ ಮುಂಚೆ ಜನರ ಬಳಿ ಆಶ್ವಾಸನೆ ಗ್ಯಾರಂಟಿ ಕಾರ್ಡ ಭರವಸೆ ನೀಡಿ, ಅಧಿಕಾರ ಬಂದ ತಕ್ಷಣ ಬಡ ಜನತೆಯ ಮೇಲೆ ಒಂದೊದಾಗಿಯೇ ದರ ಏರಿಸುವ ಜನರ ದೈನಿಂದಿನ ಜೀವನದ ಮೇಲೆ ಸರ್ಕಾರದ ಬೆಲೆ ಏರಿಕೆ ನೀತಿಗೆ ನನ್ನ ಸಂಪೂರ್ಣ ವಿರೋಧ ವ್ಯಕ್ತಪಡಿಸಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕುಂಬಾರ, ಜಿಲ್ಲಾ ಉಪಾಧ್ಯಕ್ಷ ವಿಶ್ವನಾಥ ಪಾಟೀಲ ಮಾಡಗೂಳ, ಮಂಡಲದ ಅಧ್ಯಕ್ಷರಾದ ಪ್ರಭಾಕರ ನಾಗರಾಳೆ, ಬಸವರಾಜ ಆರ್ಯ, ಗಜೇಂದ್ರ ಕನಕಟಕರ್, ಅನಿಲ ಪಸಾರ್ಗಿ, ರಾಜು ಭಂಡಾರಿ, ಸಂತೋಷ ಪಾಟೀಲ, ಗಿರೀಶ ಪಾಟೀಲ, ಮಲ್ಲಿಕಾರ್ಜುನ ಸಿಗಿ, ವಿರೇಶ ಸಜ್ಜನ, ಗಿರೀಶ ತುಂಬಾ, ನಾಗಭೂಷಣ ಸಂಗಮ್, ಸುನೀಲ ಪತ್ರಿ, ಜೋಶಿ ಬಸನೂರೆ, ಸಂಜು ವಾಡೇಕರ, ರವಿ ಹೊಸ್ಸಳ್ಳಿ, ಶಿವರಾಜ ರಾಜೋಳೆ, ಮುತಾಂದ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.