ಕಾಂಗ್ರೆಸ್ ಸಿದ್ದಪಡಿಸಿದ ಆಹಾರವನ್ನು ಬಿಜೆಪಿ ಬಡಿಸುತ್ತಿದೆ: ಶಾಸಕ ದರ್ಶನಾಪುರ

ಶಹಾಪುರ :ಮಾ.5:ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸಿದ್ಧಪಡಿಸಿದ್ದ ಅಡುಗೆಯನ್ನು ಬಿಜೆಪಿ ಬಡಿಸುತ್ತಿದೆ ಎಂದು ಶರಣಬಸಪ್ಪಗೌಡ ದರ್ಶನಾಪುರ ಅವರು ಹೇಳಿದರು
ಕಿರದಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಇಂದು ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಇಲಾಖೆಗಳ ನೂತನ ಶಾಲಾ ಕಟ್ಟಡ ಉದ್ಘಾಟಿನೆ ಹಾಗೂ ಅಡಿಗಲ್ಲು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸಿದ್ಧಪಡಿಸಿದ್ದ ಅಡುಗೆಯನ್ನು ಬಿಜೆಪಿ ಬಡಿಸುತ್ತಿದೆ ಎಂದು ಶಹಾಪುರ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಶರಣಬಸಪ್ಪಗೌಡ ದರ್ಶನಾಪುರ ಅವರು ಹೇಳಿದರು.
ಮತಕ್ಷೇತ್ರದ ಸುರಪುರ ತಾಲ್ಲೂಕಿನ ಕಿರದ್ದಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿನ ವಿವಿಧ ಇಲಾಖೆಗಳ ಅಡಿಗಲ್ಲು ಹಾಗೂ ಉಧ್ಘಾಟಿಸಿ ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಕಲಬುರಗಿ, ಯಾದಗಿರಿ ಜಿಲ್ಲೆಗಳಿಗೆ ಆಗಮಿಸಿದ್ದ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದರು. 2013ರಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನರಸಿಂಹಯ್ಯ ಸಮಿತಿ ವರದಿಯ ಶಿಫಾರಸ್ಸಿನ ಮೇರೆಗೆ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮೇಲ್ದರ್ಜೆಗೇರಿಸಲು ಎಲ್ಲ ಕ್ರಮಗಳನ್ನು ಕೈಗೊಂಡಿದ್ದೆವು. ಆಗ ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಾಗಿದ್ದಾಗ ಜಮೀನಿಗೆ ತಿದ್ದುಪಡಿ ತಂದಿದ್ದೆವು. ಹಿಂದಿನ ಕಾಂಗ್ರೆಸ್ ಸರ್ಕಾರ ತಯಾರಿಸಿದ ಅಡುಗೆಯನ್ನು ಪ್ರಧಾನಿ ಮೋದಿ ಬಡಿಸಿದ್ದಾರೆ ಎಂದು ಹೇಳಿದರು.

ಅದೇ ರೀತಿ ನಾರಾಯಣಪುರ ಸ್ಕಾಡಾ ಗೇಟ್ ಗಳನ್ನು ನಾವು ಪ್ರಾರಂಭಸಿದ್ದೆವು, 2014 ರಲ್ಲಿ ನಾವು ಈ ಯೋಜನೆಯನ್ನು ಜನರಿಗೆ ತಂದಿದ್ದೆವು. ಇದ್ದಕ್ಕಾಗಿ 3500 ಸಾವಿರ ಕೋಟಿ ಹಣವನ್ನು ನಾವು ಖರ್ಚು ಮಾಡಿದ್ದೆವು. ಆದರೆ, ಮೋದಿಯವರ ಕೈಯಿಂದ ಈ ಗೇಟ್ ಗಳನ್ನ ಉದ್ಘಾಟನೆ ಮಾಡಿಸಿದ್ದಾರೆ.
ಹಾಗಾಗಿ ಈ ಬಿಜೆಪಿಯವರ ಬಂಡವಾಳವೇ ಮೋದಿ ರಾಜ್ಯ ಬಿಜೆಪಿ ನಾಯಕರ ಮುಖ ನೋಡಿ ಜನ ಓಟ್ ಹಾಕಲ್ಲ ಇವರ ಮುಖ ಅಳಸಿದೆ. ಹೀಗಾಗಿ ಮೋದಿ, ಶಾ ಹಾಗೂ ನಡ್ಡಾಗೆ ಕರೆದುಕೊಂಡು ಬರುತ್ತಿದ್ದಾರೆ. ಈ ಬಿಜೆಪಿ ಸಿಎಂ ಹಾಗೂ ಸಚಿವರು ಅಲಿ ಬಾಬಾ ಚಾಲಿಸ್ ಚೋರ್ ಇದ್ದ ಹಾಗೆ ಎಂದು ವ್ಯಂಗ್ಯ ಮಾಡಿದರು.
‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಕಿತ್ತೊಗೆದು ಕಾಂಗ್ರೆಸ್‍ನ್ನು ಆಯ್ಕೆ ಮಾಡಲು ಜನರು ಈಗಾಗಲೇ ನಿರ್ಧರಿಸಿದ್ದಾರೆ ಎಂದು ಹೇಳಿದರು.
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮರಿಗೌಡ ಹುಲಕಲ್ ಮಾತನಾಡಿ, ಕಾಂಗ್ರೆಸ್ ಜನರಿಗೆ ಏನನ್ನೂ ಮಾಡಿಲ್ಲ ಎಂದು ಆರೋಪಿಸಿರುವ ಪ್ರಧಾನಿ ಮೋದಿಯವರ ಹೇಳಿಕೆಯನ್ನು ಟೀಕಿಸಿದರು.ಬಿಜೆಪಿ ಕಲ್ಯಾಣ ಕರ್ನಾಟಕಕ್ಕೆ ಏನು ಮಾಡಿದೆ ಅಂತ ಒಂದು ಸಾಕ್ಷಿ ತೋರಿಸಿ ಎಂದು ಪ್ರಶ್ನೆ ಮಾಡಿದರು.
ಮಲ್ಲಿಕಾರ್ಜುನ ಖರ್ಗೆ ಹಾಗೂ ದಿವಂಗತ ಧರಂಸಿಂಗ್ ರನ್ನ ನೆನೆದ ಮರಿಗೌಡ, ಈ ಭಾಗಕ್ಕೆ ಇಬ್ಬರು ನಾಯಕರು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. 371 ಜೆ ತಿದ್ದುಪಡಿ ಮಾಡಿದ್ದೆ ಖರ್ಗೆ ಮಾತ್ತು ಧರಂಸಿಂಗ್. ಈ ಭಾಗಕ್ಕೆ ನಮ್ಮ ಸರ್ಕಾರ ಸಾಕಷ್ಟು ಕೊಡುಗೆ ಕೊಟ್ಟಿದೆ. ಆದರೆ, ಬಿಜೆಪಿ ಏನು ಮಾಡಿದೆ? ಯಾವುದೇ ಅಣೆಕಟ್ಟಯನ್ನ ಕಟ್ಟಿದ್ದಾರಾ ನೀರಾವರಿ ಮಾಡಿದ್ದಾರಾ, ಕುಡಿಯೋ ನೀರಿನ ವ್ಯವಸ್ಥೆ ಮಾಡಿದ್ದಾರಾ? ನಾವು ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳಿದರು.
ನಮ್ಮ ಸರ್ಕಾರ ಬಂದ ಮೇಲೆ 200 ಯೂನಿಟ್ ವಿದ್ಯುತ್ ಉಚಿತ 2 ಸಾವಿರ ರೂ. ಖಚಿತವಾಗಿ ಹೇಳಬಹುದಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ
ಜಿಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪಾಟೀಲ ಕೆಂಭಾವಿ, ಲಿಂಗನಗೌಡ ಮಾಲಿ ಪಾಟೀಲ್, ಗ್ರಾಪಂ ಅಧ್ಯಕ್ಷೆ ಶ್ರೀಮತಿ ಅನ್ನಪೂರ್ಣ ಚಂದಪ್ಪ ದೇವರಮನಿ,ಕೆಂಭಾವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಎಸ್ ಪಾಟೀಲ ಚಿಂಚೋಳಿ, ಶಿವಮಾಂತ ಚಂದಾಪುರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಡಿ ಪಾಟೀಲ, ಶರಣಬಸ್ಸು ಕಾಕ ದಿಗ್ಗಾವಿ, ಮಲ್ಲಣ್ಣ ಹೇಗ್ಗೇರಿ,ಅಮೀನರೆಡ್ಡಿ ಬಿರಾದಾರ ಕಿರದ್ದಳ್ಳಿ ಶಾಂತಗೌಡ ಪೆÇೀ ಪಾಟೀಲ ಮಾಲಹಳ್ಳಿ, ರಾಮಸ್ವಾಮಿ ಭೋವಿ, ಭೀಮರೆಡ್ಡಿ ದೇಸಾಯಿ, ಮಹಾದೇವಪ್ಪ ಸಾಲಿಮನಿ, ಖಾಜಾಪಟೀಲ್ ಕಾಚೂರ್, ಸುಧಾಕರ ಡಿಗ್ಗಾವಿ, ಶಿವರಾಜ ಬುದೂರ, ಭೀಮನಗೌಡ ಬಿರಾದಾರ ಮಾಲಹಳ್ಳಿ, ರಹೀಮಾನ ಪಟೇಲ್ ಯಲಗೋಡ, ದೇವಪ್ಪ ಮ್ಯಾಗೇರಿ, ಅಯ್ಯಪ್ಪಗೌಡ ವಂದಗನೂರ, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ ಪೂಜಾರಿ, ಕಿರದ್ದಳ್ಳಿ ಹಾಗೂ ಮಾಲಹಳ್ಳಿ ಗ್ರಾಪಂ ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಹಾಗೂ ಕಾರ್ಯಕರ್ತರು ದರ್ಶನಾಪುರ ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.