ಕಾಂಗ್ರೆಸ್ ಸಿಡಬ್ಲುಸಿ ಯಲ್ಲಿ ನಾಸೀರ್ ಹುಸೇನ್

(ಸಂಜೆವಾಣಿ ವಾರ್ತೆ)ಬಳ್ಳಾರಿ, ಅ.21: ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ವರ್ಕಿಂಗ್ ಕಮಿಟಿಯನ್ನು ಪುನರ್ ರಚಿಸಿದ್ದು. ಅದರಲ್ಲಿ ಬಳ್ಳಾರಿಯ ರಾಜ್ಯ ಸಭಾ ಸದಸ್ಯ ಡ.ಸೈಯದ್ ನಾಸೀರ್ ಹುಸೇನ್ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.ಈ ಸಮಿತಿಯಲ್ಲಿ ಕರ್ನಾಟಕದಿಂದ ನೇಮಕ ಗೊಂಡ ಮೂವರಲ್ಲಿ ಇವರು ಒಬ್ಬರಾಗಿದ್ದಾರೆ. ಇವರಲ್ಲದೆ ಈ ಸಮಿತಿಯಲ್ಲಿ ಮಾಜಿ‌ ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿ ಮತ್ತು ಬಿ.ಕೆ.ಹರಿಪ್ರಸಾದ್ ಇದ್ದಾರೆ.