ಕಾಂಗ್ರೆಸ್ ಸಾಮಾಜಿಕ ನ್ಯಾಯ ಸಮಿತಿ ರಚನೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಸೆ.೪;: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸೂಚನೆ ಮೇರೆಗೆ ದಾವಣಗೆರೆ ಜಿಲ್ಲಾ ಮಟ್ಟದ ಸಾಮಾಜಿಕ ನ್ಯಾಯ ಸಮಿತಿಯನ್ನು ರಚಿಸಲಾಗಿದ್ದು, ಅಧ್ಯಕ್ಷರನ್ನಾಗಿ ವಕೀಲರಾದ ಆವರಗೆರೆಯ ಪರಮೇಶ್ ಎಸ್., ಇವರನ್ನು ನೇಮಕ ಮಾಡಲಾಯಿತು. ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕರ‍್ಯದರ್ಶಿ ದಿನೇಶ್ ಕೆ.ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು.ಇದರೊಂದಿಗೆ ಉಪಾಧ್ಯಕ್ಷರನ್ನಾಗಿ ಮಂಜಪ್ಪ, ಪ್ರಧಾನ ಕರ‍್ಯದರ್ಶಿಗಳನ್ನಾಗಿ ತಿಪ್ಪೇಶಪ್ಪ, ಶ್ರೀಮತಿ ಕವಿತಾ ಚಂದ್ರಶೇಖರ್, ಸಂಘಟನಾ ಕರ‍್ಯದರ್ಶಿಗಳಾಗಿ ಚಂದ್ರಮೌಳಿ, ಮಂಗಳಮ್ಮ, ಖಜಾಂಚಿಯಾಗಿ ಅನಿಷ್ ಪಾಷ, ಸಹ ಕರ‍್ಯದರ್ಶಿಯಾಗಿ ಎ. ಅರುಣಕುಮಾರ್ ಅವರನ್ನು ನೇಮಕ ಮಾಡಲಾಯಿತು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಎ.ನಾಗರಾಜ್, ಪರಿಶಿಷ್ಟ ವರ್ಗ ಘಟಕದ ಜಿಲ್ಲಾಧ್ಯಕ್ಷ ಕೆ.ಎನ್.ಮಂಜುನಾಥ, ಮುಖಂಡರುಗಳಾದ ಶಿರಮಗೊಂಡನಹಳ್ಳಿ ರುದ್ರೇಶ್, ರತನ್, ಬಸವರಾಜ್, ಲಿಂಗರಾಜ್, ನೂತನ ಪದಾಧಿಕಾರಿಗಳು ಉಪಸ್ಥಿತರಿದ್ದರು.