ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾಮಟ್ಟದ ಸಭೆ

ಚಿತ್ರದುರ್ಗ ಸೆ.೧೨; ಚಿತ್ರದುರ್ಗದ ಪಕ್ಷ ಕಚೇರಿಯಲ್ಲಿ ಸಾಮಾಜಿಕ ಜಾಲತಾಣದ ಜಿಲ್ಲಾ ಮಟ್ಟದ ಸಭೆಯನ್ನು ನಡೆಸಲಾಯಿತು. ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿಗಳಾದ ಕೆ.ಎಲ್. ಹರೀಶ್ ಮಾತನಾಡಿ ಸಮಾಜಿಕ ಜಾಲತಾಣ ಈಗಿನ ಸ್ಥಿತಿಯಲ್ಲಿ ಪಕ್ಷದ ಸಂಘಟನೆಯಲ್ಲಿ ಬಹಳ ಮಹತ್ವದ ಪಾತ್ರ ವಹಿಸುತ್ತಿದ್ದು ನಾವುಗಳು ಪಕ್ಷ ಅಧಿಕಾರಕ್ಕೆ ಬರುವ ವರೆಗೂ ಛಲಬಿಡದೆ ಹೋರಾಟ ಮಾಡಬೇಕು ಹಾಗೂ ಪಕ್ಷದ ಎಲ್ಲಾ ಘಟಕಗಳ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿ ಪಕ್ಷದ ಕಾರ್ಯಕ್ರಮಗಳನ್ನು ಜನತೆಗೆ ಮುಟ್ಟಿಸುವಲ್ಲಿ ಹಾಗೂ ಆಡಳಿತ ಪಕ್ಷದ ಜನ ವಿರೋಧಿ ಧೋರಣೆಗಳನ್ನು ಜನರಿಗೆ ಮನದಟ್ಟು ಮಾಡುವಲ್ಲಿ ಯಶಸ್ವಿಯಾಗಬೇಕಾಗಿದೆ ಎಂದರು.ಜಿಲ್ಲಾಧ್ಯಕ್ಷರಾದ ತಾಜ್ ಪೀರ್ ಮಾತನಾಡಿ ಜಾಲತಾಣ ಪಕ್ಷದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಮಹತ್ತರ ಘಟಕವಾಗಿದೆ, ಜನರಿಗೆ ಸರಿಯಾದ ಮಾಹಿತಿಯನ್ನು ತಲುಪಿಸಿ ಜನರನ್ನು ಎಚ್ಚರಿಸುವ ಕಾರ್ಯವನ್ನು ನೀವುಗಳು ಮಾಡಬೇಕು ಎಂದು ತಿಳಿಸಿದ ಅವರು ನಮ್ಮ ಸಹಕಾರ ಸದಾ ನಿಮಗೆ ಇರುತ್ತದೆ ಎಂದರು.
ಜಿಲ್ಲಾ ಕಾರ್ಯಾಧ್ಯಕ್ಷರನ್ನಾಗಿ ಮೂಡಲಗಿರಿ ಅವರನ್ನು ನೇಮಿಸಿ ಮತ್ತು ನೂತನ ಜಿಲ್ಲಾ ಸಮಿತಿಯನ್ನು ರಚಿಸಿ ಅದರ ಅನುಮೋದನೆಗೆ ರಾಜ್ಯ ಸಮಿತಿಗೆ ಕಳುಹಿಸಲು ತೀರ್ಮಾನಿಸಲಾಯಿತು , ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ವಾಸೀಂ, ಉಪಾಧ್ಯಕ್ಷರಾದ ಬಾಲ ಚೌಡಪ್ಪ, ರಾಜ್ಯ ಕಾರ್ಯದರ್ಶಿ ಮಂಜುನಾಥ್, ಬ್ಲಾಕ್ ಅಧ್ಯಕ್ಷರುಗಳು ಉಪಸ್ಥಿತರಿದ್ದರು.