ಕಾಂಗ್ರೆಸ್ ಸರ್ಕಾರ ರೈತ ವಿರೋಧಿ: ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳ

ಹುಮನಾಬಾದ್ :ಸೆ.9:ರಾಜ್ಯ ದ ಕಾಂಗ್ರೆಸ್ ಸರ್ಕಾರರೈತವಿರೋಧಿ ಸರ್ಕಾರವಾಗಿ ಪರಿಣಮಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳ ಕರ ಆರೋಪಿಸಿದ್ದಾರೆ.

ಬಿಜೆಪಿಯ ರೈತ ಮೋರ್ಚಾದಿಂದ ಪಟ್ಟಣದಪ್ರಮುಖಮಾರ್ಗಗಳಮೂಲಕ ತಾಲೂಕು ಆಡಳಿತ ಕಚೇರಿವರೆಗೆ ಪ್ರತಿಭ ಟನೆ ನಡೆಸಿ ರಾಜ್ಯಪಾಲರಿಗೆ ಬರೆದ ಮನವಿ ತಹಸೀಲ್ದಾರ್‍ಮೂಲಕ ಸಲ್ಲಿಸಿದ ಬಳಿಕ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಬಂದು ನೂರು ದಿನಗಳು ಕಳೆದಿದೆ. ರೈತಪರ ಯೋಜನೆಗ ಳಾದ ಕಿಸಾನ್ ಸನ್ಮಾನ್, ವಿದ್ಯಾನಿಧಿ, ಶ್ರಮನಿಧಿ ಯೋಜನೆಗಳನ್ನು ರದ್ದು ಮಾಡ ಲಾಗಿದೆ. ಅಗತ್ಯ ವಸ್ತುಗಳ ಬೆಲೆ ನಿಯಂತ್ರಿ ಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಕೃಷಿಗೆ ಅಗತ್ಯವಿರುವ ವಸ್ತುಗಳ ಬೆಲೆ ಗಗನಕ್ಕೇರಿದೆ. ಕೃಷಿ ಪಂಪ್ ಸೆಟ್‍ಗಳಿಗೆ ವಿದ್ಯುತ್ ಕಡಿತಗೊಳಿಸಲಾಗಿದೆ. ರಾಜ್ಯ ದಲ್ಲಿ ಬರಗಾಲ ತಾಂಡವಾಡುತ್ತಿದೆ. ಆದ ರೂ ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿಲ್ಲ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ರೈತರು ಬದುಕುವುದು ಅಸಾಧ್ಯದ ಮಾತಾಗಿದೆ ಎಂದು ಆರೋಪಿಸಿದ್ದಾರೆ.

ರಾಜ್ಯ ಕಾರಕಾರಣಿ ಸದಸ್ಯ ಸೋಮ ನಾಥ ಪಾಟೀಲ್ ಮಾತನಾಡಿ, ಎಪಿಎಂಸಿ ಕಾನೂನು, ಕೃಷಿ ಭೂಮಿ ಮಾರಾಟ ಕಾನೂನು, ಜಿಲ್ಲೆಗೊಂದು ಗೋಶಾಲೆ ಯೋಜನೆ ಸೇರಿದಂತೆ ರೈತರ ಏಳಿಗೆಗಾಗಿ ಜಾರಿಗೆ ತಂದಿರುವ ಹತ್ತಾರು ಯೋಜನೆ ಗಳನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ರದ್ದುಗೊಳಿಸಿ ರೈತರ ಜೀವನದ ಜೊತೆಗೆ ಚಲ್ಲಾಟವಾಡುತ್ತಿದೆ ಎಂದರು.

ಬಿಜೆಪಿ ರೈತ ಮೋರ್ಚಾ ಮಂಡಲ ಅಧ್ಯಕ್ಷ ರಾಮರಾವ್ ಕೇರೂರೆ ಅವರು 3s ತಹಸೀಲ್ದಾರ್ ಅಂಜುಮ್ ತಬಸುಮ್ ಅವರಿಗೆ ರಾಜ್ಯಪಾಲರಿಗೆ ಬರದಿರುವ ಮನವಿ ಪತ್ರ ಸಲ್ಲಿಸಿ ರಾಜ್ಯದ ರೈತರ ಪಂಪಸೆಟ್‍ಗಳಿಗೆ ಉಂಟಾಗಿರುವಅನಿಯ ಮಿತ ಲೋಡ್ ಶೆಡ್ಡಿಂಗ್ ರದ್ದುಪಡಿಸಿ,1 ಗ0ಟೆ ನಿರಂತರ ವಿದ್ಯುತ್ ಪೂರೈಸುವಂತೆ ಮನವರಿಕೆ ಮಾಡಿಕೊಂಡರು.

ಮಲ್ಲಿಕಾರ್ಜುನ ಕುಂಬಾರ, ಪದ್ಮಾಕರ ಪಾಟೀಲ್, ಮಲ್ಲಿಕಾರ್ಜುನ ಪಾಟೀಲ್ ರಾಜ್ಯ ಸರ್ಕಾರದವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬಿಎಸ್‍ಎಸ್‍ಕೆ ಅಧ್ಯಕ್ಷ ಸುಭಾಷ ಕಲ್ಲೂರ, ಮಂಡಲ ಅಧ್ಯಕ್ಷ ಪ್ರಭಾಕರ ನಾಗರಾಳೆ, ಬಸವರಾಜ ಆರ್ಯ, ಇಲಿಯ್ಯಾಸ, ಗಿರೀಶ ತುಂಬಾ, ಸಂತೋಷ ಪಾಟೀಲ್, ಮಲ್ಲಿಕಾರ್ಜುನ ಸೀಗಿ, ನಾಗಭೂಷಣ ಸಂಗಮಕ, ಡಿಎ??? ಪತ್ರಿ, ಅನೀಲಪಸರ್ಗಿ, ಗಜೇಂದ್ರ ಕನಕಟಕ, ನರಸಿಂಗ(ರಾಜು) ಬಂಡಾರಿ, ಅರುಣ ಬೌಗಿ ಸೇರಿದಂತೆ ನೂರಾರು ರೈತರು ಪ್ರತಿಭಟನಾ ???ಯಾಲಿಯಲ್ಲಿ ಭಾಗಿಯಾಗಿದ್ದರು.