ಕಾಂಗ್ರೆಸ್ ಸರ್ಕಾರ ಬಂದರೆ, ಎನ್‍ಪಿಎಸ್ ರದ್ದು ಗ್ಯಾರೆಂಟಿ : ಈಶ್ವರ ಖಂಡ್ರೆ

ಭಾಲ್ಕಿ: ನ.4:ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಎನ್.ಪಿ.ಎಸ್ ರದ್ದುಗೊಳಿಸಿ ಓಪಿಎಸ್ ಜಾರಿಗೊಳಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಶಾಸಕ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಚನ್ನಬಸವಾಶ್ರಮದಲ್ಲಿ ಆಗಮಿಸಿದ ಎನ್.ಪಿ.ಎಸ್ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು. ಶಾಸಕಾಂಗ, ನ್ಯಾಯಾಂಗಗಳು ಸರಿಯಾಗಿ ನಡೆಯಲು ಕಾರ್ಯಾಂಗದ ಕಾರ್ಯ ಬಹು ಮುಖ್ಯವಾಗಿದೆ. ಕಾರ್ಯಾಂಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರು ಸುಕ್ಷಿರವಾಗಿದ್ದರೆಮಾತ್ರ ದೇಶದ ಅಭಿವೃಧ್ದಿ ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ಕೇಂದ್ರದ ನಾಯಕ ರಾಹುಲ ಗಾಂಧಿಯವರು ಈ ಹಿಂದೆ ಎನ್‍ಪಿಎಸ್ ರದ್ದುಗೊಳಿಸಿ ಒಪಿಎಸ್ ಮಾಡುವುದಾಗಿ ಮಾತು ಕೊಟ್ಟಿದ್ದಾರೆ. ಅದನ್ನೇ ನಾನು ಇಲ್ಲಿ ಉಚ್ಚರಿಸುತ್ತಲಿದ್ದು, ನಮ್ಮ ಸರ್ಕಾರ ಬಂದರೆ ಎನ್‍ಪಿಎಸ್ ರದ್ದು ಗೊಳಿಸಿ ಒಪಿಎಸ್ ಜಾರಿಗೊಳಿಸುತ್ತೇವೆ ಎಂದು ಹೇಳಿದರು. ನಂತರ ಎಲ್ಲಾ ನೌಕರರು ಮೆರವಣಿಗೆಯ ಮೂಲಕ ಸಂಕಲ್ಪ ಯಾತ್ರೆ ನಡೆಸಿ ತಹಸೀಲ್ದಾರ ಮೂಲಕ ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎನ್‍ಪಿಎಸ್ ನೌಕರರ ಸಂಘದ ಮುಖಂಡರಾದ ಚಂದ್ರಕಾಂತ ತಳವಾಡೆ, ಪ್ರಮುಖರಾದ ಡಾ| ಕಾಶಿನಾಥ ಚಲವಾ, ಬಸವರಾಜ ಬಡದಾಳೆ, ಸಂತೋಷ ವಾಡೆ, ಬಾಲಾಜಿ ಬೈರಾಗಿ, ಬಸವರಾಜ ಮಡಿವಾಳ, ಹಣಮಂತ ಕಾರಾಮುಂಗೆ, ಮಲ್ಲಿಕಾರ್ಜುನ ಪಾಟೀಲ ಧನ್ನೂರ(ಎಸ್), ಪುಷ್ಪಾವತಿ ಚಕುರ್ತೆ, ಕೀರ್ತಿಲತಾ ಸೊನಾಳೆ, ವಿಶ್ವಾರಾಧ್ಯ, ಕಿರಣಕುಮಾರ ಭಾಟಸಾಂಗವೆ, ಸಮಾಜ ಕಲ್ಯಾಣ ಇಲಾಖೆಯ ಧನರಾಜ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಜಕುಮಾರ ಪಾಟೀಲ, ಆರೋಗ್ಯ ಇಲಾಖೆಯ ಸೋಮನಾತ ತರನಳ್ಳೆ ಸೇರಿದಂತೆ ಎನ್‍ಪಿಎಸ್ ಸಂಘಟನೆಯ ರಾಜ್ಯಾಧ್ಯಕ್ಷರು, ರಾಜ್ಯ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.