ಕಾಂಗ್ರೆಸ್ ಸರ್ಕಾರದಿಂದ ದ್ವೇಷದ ರಾಜಕಾರಣ; ಆರೋಪ

ಸಂಜೆವಾಣಿ ವಾರ್ತೆ
ದಾವಣಗೆರೆ. ಜು.೧೨; ರಾಜ್ಯದಲ್ಲಿ  ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಹಿಂದೆ ಬಿಜೆಪಿ‌ ಆಡಳಿತದ ಅವಧಿಯಲ್ಲಿ ಜಾರಿಗೆ ತಂದ ರೈತಪರ ಯೋಜನೆಗಳನ್ನು ಕೈಬಿಡುವ ಮೂಲಕ‌ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಪಾಲಾಕ್ಷ ಗೌಡ್ರು ಆಕ್ರೋಶ ವ್ಯಕ್ತಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರುಬಿ.ಎಸ್ ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿತಂದ ಎಪಿಎಂಸಿ ಕಾನೂನು ರದ್ದು ಮಾಡುವ ಮೂಲಕ  ರೈತ ವಿರೋಧಿ ಹಣೆಪಟ್ಟಿ ಕಟ್ಟಿಕೊಳ್ಳುತ್ತಿದೆ. ರೈತರು ತಾವು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವ ಸ್ವಾತಂತ್ರ್ಯ ,ಸಾಗಾಣಿಕೆ ವೆಚ್ಚ ದಲ್ಲಾಳಿಗಳ ಕಮೀಷನ್ ಇತರೆ ಖರ್ಚುಗಳ ಉಳಿತಾಯ ಎಲ್ಲಾ ಅನುಕೂಲಗಳನ್ನು ರದ್ದು ಪಡಿಸಿ ಹಳೇಯ ಕಾನೂನು‌ ಜಾರಿಗೆ ತಂದಿರುವುದು ಸರಿಯಲ್ಲ.೧೧ ಲಕ್ಷ ರೈತ ಕುಟುಂಬದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ೪೩೮.೬೯ ಕೋಟಿ ರೂ ರೈತ ವಿದ್ಯಾನಿಧಿ ಯೋಜನೆ ರದ್ದು ಪಡಿಸುವ ಮೂಲಕ ಬಡ ರೈತನ‌ಮಕ್ಕಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಜಿಲ್ಲೆಗೊಂದು‌ ಗೋಶಾಲೆ ಯೋಜನೆ ರದ್ದು ಖಂಡನೀಯ ಇದರೊಂದಿಗೆ ಭೂ ಸಿರಿ ಯೋಜನೆ ರದ್ದು ಮಾಡಿರುವುದು ಖಂಡನೀಯ.ಕಿಸಾನ್ ಸಮ್ಮಾನ್ ನಿಧಿ ಯೋಜನೆ ರದ್ದು,ರೈತಶಕ್ತಿ ಯೋಜನೆ ರದ್ದು,ನೀರಾವರಿ ಯೋಜನೆಗಳ ನಿರ್ಲಕ್ಷ್ಯ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಿದ್ಯುತ್ ದರ ಏರಿಕೆ ಮಾಡಿರುವುದು ಅತಿ ಸಣ್ಣ,ಸಣ್ಣ ಹಾಗೂ‌ ಮಧ್ಯಮ ಕೈಗಾರಿಕಾ ಇವುಗಳಿಗೆ ಬಾರಿ ಹೊಡೆತ ಉಂಟಾಗಿದೆ ಎಂದರು.ರೈತ ಮೋರ್ಚಾ ಮುಖಂಡ ಲೋಕಿಕೆರೆ ನಾಗರಾಜ್ ಮಾತನಾಡಿ ಎಪಿಎಂಸಿ ಕಾಯ್ದೆ ರದ್ದು ಮಾಡಿರುವುದು ರೈತರಿಗಾದ ಅನ್ಯಾಯ.ರೈತರು ಬೆಳೆದ ಬೆಳೆ ಮಾರಲು ಎ.ಪಿಎಂಸಿಗೆ ಹೋಗಬೇಕಾಗಿದೆ ಎಪಿಎಂಸಿ ಕಾಯ್ದೆಯಿಂದ ರೈತರು ತಾವು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದಾಗಿತ್ತು ಆದರೆ ಕಾಯ್ದೆ ರದ್ದು ಮಾಡಿರುವುದರಿಂದ ಸಾಗಾಣಿಕೆ ವೆಚ್ಚ,ದಲ್ಲಾಳಿಗಳ ಕಮೀಷನ್ ಈ ರೀತಿ ಶೋಷಣೆ ಮಾಡಲಾಗುತ್ತಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಬಾತಿ ಶಿವಕುಮಾರ್, ಶಿವಪ್ರಕಾಶ್ ಅಣಬೇರು,ಅಣಜಿ ಗುಡ್ಡೇಶ್ ಮತ್ತಿತರರಿದ್ದರು.