ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಶೈಲೇಶ್ ಎಸ್

ಕೆಂಗೇರಿ,ಆ.೨೪- ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿಯು ಶೈಲೇಶ್ ಎಸ್. ರವರಿಗೆ ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ್ದಾರೆ. ಇವರ ನೇಮಕಾತಿ ಪತ್ರವನ್ನು ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಂ. ರಾಜಕುಮಾರ್ ರವರು ನೇಮಕಾತಿ ಪತ್ರವನ್ನು ನೀಡುವುದರ ಮೂಲಕ ತಮಗೆ ನೀಡಿರುವ ಈ ಜವಾಬ್ದಾರಿಯುತವಾದ ಸ್ಥಾನವನ್ನು ವಹಿಸಿಕೊಂಡು ಪಕ್ಷದ ಸೂಚನೆ ಹಾಗೂ ಸ್ಥಳೀಯ ಕಾಂಗ್ರೆಸ್ ನಾಯಕರಗಳ ಸಹಕಾರದೊಂದಿಗೆ ಪಕ್ಷದ ಸಬಲೀಕರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪಕ್ಷದ ಸಂಘಟನೆಗೆ ಶ್ರಮಿಸಿ ನಿಮ್ಮೆಲ್ಲಾ ಕೆಲಸ ಕಾರ್ಯಗಳಿಗೆ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು. ನಂತರ ಮಾತನಾಡಿ ಶೈಲೇಶ್ ನನಗೆ ಈ ಜವಾಬ್ದಾರಿಯುತವಾದ ಸ್ಥಾನ ನೀಡಿದ ಎಂ. ರಾಜಕುಮಾರ ರವರಿಗೆ ಹಾಗೂ ಕಾಂಗ್ರೆಸ್ ಮುಖಂಡರಿಗೆ ಹೃದಯಪೂರ್ವಕ ಅಭಿನಂದನೆಗಳು. ನಾನು ನನಗೆ ನೀಡಿರುವ ಜವಾಬ್ದಾರಿ ಸ್ಥಾನವನ್ನು ಪಕ್ಷದ ಸೂಚನೆಯಂತೆ ಪಾಲಿಸಿ ಪಕ್ಷ ಸಂಘಟನೆಯಲ್ಲಿ ಹೆಚ್ಚಿನ ಗಮನವಹಿಸಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು