
ಚಿಂಚೋಳಿ,ಡಿ.28- ಇಲ್ಲಿನ ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿಂದು ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ 135ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರಿಗೆ ಸಂವಿಧಾನ ಮುನ್ನುಡಿ ಓದಿ ಪ್ರತಿಜ್ಞೆ ಸ್ವೀಕರಿಸುವ ಮೂಲಕ ಆಚರಿಸಲಾಯಿತು.
ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಹಗಲು ರಾತ್ರಿ ದುಡಿದು ಪಕ್ಷವನ್ನು ಕಟ್ಟಿ ಬಲಪಡಿಸಿದ ಕಾಂಗ್ರೆಸ್ಸಿನ ಹಿರಿಯ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಈ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪಕ್ಷದ ಮುಖಂಡರಾದ ಸುಭಾಶ್ ರಾಠೋಡ ಅವರು, ಈ ಹಿಂದೆ ನಡೆದ ಚುನಾವಣೆಯಲ್ಲಿ ಎಂಎಲ್ಎ ಮತ್ತು ಎಂಪಿ ಹಾಗೂ ಜಿಲ್ಲಾ ಪಂಚಾಯತ ತಾಲೂಕ ಪಂಚಾಯತ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ಶ್ರಮಿಸಿದ ಪಕ್ಷದ ಎಲ್ಲಾ ಮುಖಂಡರಿಗೂ ಮತ್ತು ಕಾರ್ಯಕರ್ತರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಕಾರ್ಯಕರ್ತರು ಪ್ರಮಾಣಿಕ ಪ್ರಯತ್ನ ಮಾಡಿದ್ದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಅವರು ಭವಿಷ್ಯ ನುಡಿದರು.
ಕಾರ್ಯಕ್ರಮದಲ್ಲಿ. ಪಕ್ಷದ ಬ್ಲಾಕ್ ಅಧ್ಯಕ್ಷರಾದ ಅನಿಲ್ ಕುಮಾರ್ ಜಮಾದಾರ್. ಚಿಂಚೋಳಿಯ ಉಪಾಧ್ಯಕ್ಷರಾದ ಸೈಯದ ಶಬ್ಬೀರ್. ಮುಖಂಡರಾದ. ಬಸವರಾಜ ಮಲಿ. ಗೋಪಾಲರಾವ ಕಟ್ಟಿಮನಿ. ಜಗನ್ನಾಥ ಕಟ್ಟಿ. ಕೆ.ಎಂ. ಬಾರಿ. ಅಬ್ದುಲ್ ಬಾಸಿದ. ಆರ್.ಬ್ಗಣಪತರಾವ. ಶಿವಕುಮಾರ್ ಕೊಳ್ಳುರ್. ಚಿತ್ರಶೇಖರ ಪಾಟೀಲ್. ಗಂಗಾಧರ ಗಡ್ಡಿಮನಿ. ಜಗನ್ನಾಥ್ ಗುತ್ತೇದಾರ್. ಬಸವರಾಜ ಕಡಬೂರ್. ಅಮರ್ ಲೋಡ್ಡನೋರ. ನಗು ಗುಣಾಜಿ.ಕಲೀಲ್ ಪಟೇಲ್. ಮಲ್ಲಿಕಾರ್ಜುನ್ ಬುಶೆಟ್ಟಿ. ಸಂತೋಷ್ ಗುತ್ತೇದಾರ್. ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು ಉಪಸ್ಥಿತರಿದ್ದರು.