ಕಾಂಗ್ರೆಸ್ ಶಾಸಕರಿಗೆ ಗ್ಯಾರಂಟಿ ಆಗದ ಮಂತ್ರಿ ಪದವಿ

ಸರ್ಕಾರದಲ್ಲಿ ವಿಶ್ವಾಸದ ಕೊರತೆ ಶಾಸಕ ವಜ್ಜಲ್ ಲೇವಡಿ
ಲಿಂಗಸುಗೂರು,ಮೇ.೨೬-
ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ತಮ್ಮ ಶಾಸಕರಿಗೆ ಮಂತ್ರಿ ಪದವಿ ಕೊಡದೆ ಗ್ಯಾರಂಟಿ ಇಲ್ಲದೆ ಇರುವುದು ಈ ಸರ್ಕಾರದಲ್ಲಿ ವಿಶ್ವಾಸದ ಕೊರತೆ ಇದೆ ಹಾಗೂ ಕಾಂಗ್ರೆಸ್ ಪಕ್ಷವು ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ನೀಡಿದಂತೆ ಕಾಂಗ್ರೆಸ್ ಹೈಕಮಾಂಡ್‌ನಿಂದ ಗ್ಯಾರಂಟಿ ತೆಗೆದುಕೊಳ್ಳಬೇಕಿತ್ತು ಎಂದು ನೂತನ ಶಾಸಕ ಮಾನಪ್ಪ ಡಿ. ವಜ್ಜಲ್ ಅವರ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಕಾಂಗ್ರೆಸ್ ಸರ್ಕಾರ ವಿರುದ್ಧ ಲೇವಡಿ ಮಾಡಿದರು.
ಲಿಂಗಸುಗೂರು ತಾಲ್ಲೂಕಿನ ಕ್ಷೇತ್ರದ ಜನರು ನನ್ನನ್ನು ಆಯ್ಕೆ ಮಾಡಿ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಲು ಕಾರಣರಾದ ಮತದಾರರಿಗೆ ಹಾಗೂ ಬಿಜೆಪಿ ಪಕ್ಷದ ಮುಖಂಡರು ಕಾರ್ಯಕರ್ತರಿಗೆ ನಾನು ಯಾವತ್ತೂ ಚೀರ ರುಣಯಾಗಿರುತ್ತೆನೆ ಎಂದು ಶಾಸಕ ವಜ್ಞಲ್ ಹೇಳಿದರು.
ನೂತನ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪುತ್ತದೆ ಇಲ್ಲವೊ ಗೊತ್ತಿಲ್ಲ ಆದರೆ ಯಾವುದೇ ಯೋಜನೆಗಳು ರಿವರ್ಸ್ ಗೇರ್ ಆಗುವ ಸಾಧ್ಯತೆ ಇರುವುದರಿಂದ ಜನರಿಗೆ ಇದರ ಪರಿಣಾಮ ಬೀರುತ್ತದೆ ಎಂಬುದು ಗೊತ್ತಾಗುತ್ತದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ನೂತನ ಶಾಸಕ ಮಾನಪ್ಪ ಡಿ ವಜ್ಜಲ್ ರವರು ಕಾರ್ಯಕರ್ತರ ಮುಖಂಡರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು ಜನರಿಗೆ ಮನದಟ್ಟು ಮಾಡಲು ಪಕ್ಷದ ಕಾರ್ಯಕರ್ತರು ಮುಖಂಡರು ಕೆಲಸ ಮಾಡಬೇಕು ಎಂದು ರಾಯಚೂರು ಲೋಕಸಭಾ ಸದಸ್ಯ ರಾಜ ಅಮರೇಶ್ವರ ನಾಯಕ ಹೇಳಿದರು.
ಚುನಾವಣೆಯಲ್ಲಿ ಹೇಳಿದ ಮಾತು ನಾನು ಯಾವತ್ತೂ ತಪ್ಪಲ್ಲಾ ಕ್ಷೇತ್ರದ ಜನರ ಇಚ್ಚೆಯಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನನ್ನ ಮೊದಲ ಕರ್ತವ್ಯ ವಾಗಿದೆ ವಜ್ಜಲ್ ಹೇಳಿದರು.
ಲಿಂಗಸುಗೂರು ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರಕ್ಕೆ ಒತ್ತಡ ಹಾಕಿ ನೆನೆಗುದಿಗೆ ಬಿದ್ದಿರುವ ಹಲವು ಯೋಜನೆಗಳನ್ನು ಮರು ಜೀವ ತುಂಬಲು ಸಾಕಷ್ಟು ಅನುದಾನ ತಂದು ಲಿಂಗಸುಗೂರು ಮೀಸಲು ವಿಧಾನಸಭಾ ಕ್ಷೇತ್ರವು ಐತಿಹಾಸಿಕ ಕ್ಷೇತ್ರ ಮಾಡಲು ಮುಂದಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಗುಂತಗೊಳ ಸಂಸ್ಥಾನದ ರಾಜರಾದ ರಾಜ ಶ್ರೀನೀವಾಸ ನಾಯಕ ಹಾಗೂ ಗುರಗುಂಟ ಸಂಸ್ಥಾನದ ರಾಜರಾದ ರಾಜ ಸೋಮನಾಥ್ ನಾಯಕ್ ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷ ವೀರನಗೌಡ ಪಾಟೀಲ ಲೆಕ್ಕಿಹಾಳ ಪಕ್ಷದ ಮುಖಂಡರಾದ ಗಿರಿಮಲ್ಲನಗೌಡ ಮಾಲಿ ಪಾಟೀಲ್ ಕರಡಕಲ್ ಅಯ್ಯಪ್ಪ ವಕೀಲರು ಗುಂಡಪ್ಪ ಸಾಹುಕಾರ ಮುದುಕಪ್ಪ ವಕೀಲರು ಹನುಮಂತಪ್ಪ ಕಂದಗಲ್ ಹುಲ್ಲೇಶ ಸಾಹುಕಾರ ಪರಮೇಶ ಯಾದವ್ ಗುಂಡಯ್ಯ ಸೊಪ್ಪಿಮಠ ಬೀರಪ್ಪ ಪೂಜಾರಿ ರುದ್ರಗೌಡ ತುರಡಗಿ ವೆಂಕನಗೌಡ ಐದನಾಳ ಜಯಶ್ರೀ ಸಕ್ರಿ ಬಸಮ್ಮ ಯಾದವ್ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.