ಕಾಂಗ್ರೆಸ್ ವೀಕ್ಷಕರಾಗಿ ನಾಸೇರ್ ಖಾನ್ ನೇಮಕ

ಬೀದರ್:ನ.1:ಹೈದ್ರಾಬಾದ್ನ ಮಲಕಾಜಗಿರಿ ಸಂಸದೀಯ ಕ್ಷೇತ್ರದ ಖುತಬುಲ್ಲಾಪೂರ- 45 ವಿಧಾನ ಸಭಾ ಕ್ಷೇತ್ರಕ್ಕೆ ಮುಂಬರುವ ವಿಧಾನ ಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷದ ವೀಕ್ಷಕರಾಗಿ ಬೀದರ್ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ನಾಸೇರ್ ಖಾನ್ ಅವರನ್ನು ನೇಮಕ ಮಾಡಲಾಗಿದೆ.
ಈ ಕುರಿತು ತೆಲಂಗಾಣಾ ರಾಜ್ಯದ ಕಾಂಗ್ರೆಸ್ ಉಸ್ತುವಾರಿಯಾದ ಮಾಣಿಕರಾವ ಠಾಕರೆ ಅವರು ಅಕ್ಟೋಬರ್ 23 ರಂದು ನೇಮಕ ಮಾಡಿ ಘೋಷಣೆ ಮಾಡಿದ್ದು ಈಗಾಗಲೇ ನಾಸೇರ್ ಖಾನ್ ಅವರು ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದಾರೆ