ಕಾಂಗ್ರೆಸ್ ವಿರುದ್ಧ ಅ.11 ಬೃಹತ್ ಪ್ರತಿಭಟನೆ

ಚಿಕ್ಕಬಳ್ಳಾಪುರ.ಅ.೯, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ ಐದೇ ತಿಂಗಳಿನಲ್ಲಿ ಜನರ ವಿಶ್ವಾಸಕ್ಕೆ ಧಕ್ಕೆ ತಂದಿದ್ದು ಈ ಸರ್ಕಾರದಿಂದ ರಾಜ್ಯದ ಜನತೆ ಸಾಲದ ಸುಳಿಯಲ್ಲಿ ಸಿಕ್ಕುವಂತಾಗಿದೆ ಎಂದು ಮಾಜಿ ಸಚಿವ ಡಾ. ಕೆ ಸುಧಾಕರ್ ಆರೋಪಿಸಿದರು.
ಅವರು ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯ ಸರ್ಕಾರದ ಆಡಳಿತ ವಿರೋಧಿ ನೀತಿ ಮತ್ತು ಜಿಲ್ಲೆಯಲ್ಲಿ ರೈತ ವಿರೋಧಿ ಮತ್ತು ಜನ ವಿರೋಧಿ ನೀತಿಯ ವಿರುದ್ಧ ಅಕ್ಟೋಬರ್ ೧೧ರಂದು ಬೃಹತ್ ಪ್ರತಿಭಟನೆ ಏರ್ಪಡಿಸಿರುವುದಾಗಿ ತಿಳಿಸಿದರು.
ಅಂದು ಚಿಕ್ಕಬಳ್ಳಾಪುರದಲ್ಲಿ ನ ಭೂತೊನ ಭವಿಷ್ಯ ಎಂಬಂತೆ ಹತ್ತಾರು ಸಾವಿರ ಮಂದಿ ಜಮಾವನೆಗೊಂಡು ರೈತ ವಿರೋಧಿ ನೀತಿಯ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ ಬಾರಿಸುವರು ಎಂದು ತಿಳಿಸಿದರು. ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಆರ್ಥಿಕವಾಗಿ ಅನ್ಸೋಧಿಸುತ್ತಿರುವ ನೀತಿಯ ಕಾರಣದಿಂದಾಗಿ ರಾಜ್ಯದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಈ ಹಿಂದೆ ನಮ್ಮ ಕೇಂದ್ರ ಸರ್ಕಾರದಿಂದ ರೈತರಿಗೆ ಪ್ರತಿ ತಿಂಗಳು ದೊರೆಯುತ್ತಿದ್ದ ೬,೦೦೦ ರೂ ಗಳಿಗೆ ನಮ್ಮ ಸರ್ಕಾರವಿದ್ದ ಸಂದರ್ಭದಲ್ಲಿ ನಾಲ್ಕು ಸಾವಿರಗಳನ್ನು ಜೊತೆ ಮಾಡಿ ೧೦,೦೦೦ ಅವರ ಖಾತೆಗೆ ಜಮಾ?ವಣೆ ಮಾಡಲಾಗುತ್ತಿತ್ತು ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾಲ್ಕು ಸಾವಿರ ರೂಗಳನ್ನು ಕಡಿತಗೊಳಿಸಿದೆ ಹಾಗೂ ಭೂಸಿರಿ ಯೋಜನೆಯಲ್ಲಿ ತಾವು ೧೦,೦೦೦ಗಳನ್ನು ರೈತ ಸಂಕಷ್ಟಕ್ಕೆ ಸಿಲುಕಿದಾಗ ಉಪಯೋಗಿಸಿಕೊಳ್ಳಲಿ ಎಂದು ನೀಡುತ್ತಿದ್ದೆವು. ಅದಕ್ಕೂ ಸಹ ಕತ್ತರಿ ಬಿದ್ದಿದೆ ಇದು ರೈತ ವಿರೋಧಿ ಸರ್ಕಾರ ಜನ ವಿರೋಧಿ ಸರ್ಕಾರ ಭ್ರಷ್ಟಾಚಾರ ಸರ್ಕಾರ ಆಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯರವರು, ಜಾತಿಗಣತಿ ವಿಚಾರವನ್ನು ಮುನ್ನಲೆಗೆ ತಂದಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ. ಯಾವಾಗಲೂ ಸಹ ಕಾಂಗ್ರೆಸ್ ಸರ್ಕಾರ ಮಾಡುವ ಜನವಿರೋಧಿ ಕಾರ್ಯಗಳೇ ಇದು ಒಂದೊಮ್ಮೆ ಜಾತಿಗಣತಿ ಬಂದಿದ್ದೆ ಆದಲ್ಲಿ ಮೀಸಲಾತಿಯ ಮೇಲು ಸಹ ಅದರ ದುಷ್ಪರಿಣಾಮ ಬೀರಲಿದೆ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆ, ಇಡೀ ರಾಷ್ಟ್ರದಲ್ಲಿಯೇ ಅತ್ಯಂತ ಹೆಚ್ಚು ಹೂವನ್ನು ಹೂವಿನ ಉತ್ಪಾದಕರಿಗೆ ಆಗುವ ಮಾರಾಟಗಾರರಿಗೆ ಹೆಚ್ಚಿನ ಅನುಕೂಲ ಆಗಲೆಂದು ನಾನು ನನ್ನ ಆಡಳಿತ ಅವಧಿಯಲ್ಲಿ ಸುಮಾರು ೪೦ ಕೋಟಿ ಬೆಲೆಬಾಳುವ ೯ ಎಕರೆ ಜಮೀನನ್ನು ಮಂಜೂರು ಮಾಡಿಸಿದ್ದೆ ಈಗ ಹೊಸದಾಗಿ ಬಂದಿರುವ ಶಾಸಕರು ನಾನು ೨೦ ಎಕರೆ ಜಮೀನನ್ನು ಮಾಡಿಸುತ್ತೇನೆ ಎಂದಿದ್ದಾರೆ ಹಾಗೆ ಮಾಡಿಸಿದರೆ ಆ ಕ್ರಮವನ್ನು ನಾನು ಸ್ವಾಗತಿಸುತ್ತೇನೆ ಎಂದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅಧ್ಯಕ್ಷ ಕೆ. ವಿ.ನಾಗರಾಜ್ ಮಾತನಾಡಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ವಿಭಜನೆ ಮಾಡಿರುವುದು ಹಾಲು ಉತ್ಪಾದಕರಿಗೆ ಮರಣ ಶಾಸನ ಬರೆದಂತಾಗಿದೆ ಎಂದರು.
ಚಿಕ್ಕಬಳ್ಳಾಪುರ ಹಾಲು ಉತ್ಪಾದಕರು ಪ್ರತಿ ದಿನ ನಾಲ್ಕು ಲಕ್ಷ ಲೀಟರ್ ಹಾಲು ಉತ್ಪಾದಿಸುವ ಮೂಲಕ ಇಡೀ ರಾಜ್ಯದಲ್ಲಿಯೇ ಹೆಚ್ಚು ಹಾಲು ಉತ್ಪಾದಿಸುವ ಖ್ಯಾತಿಗೆ ಬಂದಿದ್ದು ಅವಶ್ಯಕತೆ ಇಲ್ಲದಿದ್ದರೂ ಸಹ ಪ್ರತಿಷ್ಠೆಗೆ ಬಿದ್ದು ಇಂದಿನ ಆಡಳಿತ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂಬ ಒಂದೇ ಒಂದು ಕಾರಣಕ್ಕೆ ಚಿಕಮಲ್ ಒಕ್ಕೂಟವನ್ನು ಒಡೆದಿದ್ದಾರೆ ಎಂದರು.