
ಗಂಗಾವತಿ ಮೇ 05 : ಭಜರಂಗದಳವನ್ನು ನಿಷೇಧ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ ಕಾಂಗ್ರೆಸ್ ಪಕ್ಷದ ವಿರುದ್ಧ ಹಿಂದೂ ಜಾಗರಣೆ ವೇದಿಕೆಯಿಂದ ಖಂಡಿಸಿ ನಗರದ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಸಂಘಟನೆಯ ಪ್ರಾಂತ ಪ್ರಮುಖ ಶ್ರೀಕಾಂತ ಹೊಸಕೇರಿ ಮಾತನಾಡಿ, ದೇಶದಲ್ಲಿ ಧರ್ಮದ ರಕ್ಷಣೆಗಾಗಿ ಹಲವಾರು ಸಮಾಜಮುಖ ಕೆಲಸ ಮಾಡುತ್ತಾ ಜನರನ್ನು ಜಾಗೃತಿಗೊಳಿಸಿತ್ತಿರುವ ಭಜರಂಗದಳವನ್ನು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಿಷೇಧ ಮಾಡಲು ನಿರ್ಧರಿಸಿದೆ. ಇದು ಹಿಂದೂ ವಿರೋಧಿ ಭರವಸೆಯಾಗಿದೆ. ಮತದಾರರು ಇಂಹತ ಪಕ್ಷ ವನ್ನು ಯಾವತ್ತು ಅಧಿಕಾರಕ್ಕೆ ತರಬಾರದು. ದೇಶ ವಿರೋಧಿ ಕೆಲಸ ಮಾಡುವ ಸಂಘಟನೆಗಳ ಜೊತೆ ಭಜರಂಗದಳವನ್ನು ಹೋಲಿಕೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿಯಾಗಿದೆ. ಅಧಿಕಾರಕ್ಕೆ ಬರುವ ಮುಂಚೆಯೇ ಹಿಂದೂಗಳನ್ನು ಹತ್ತಿಕ್ಕುವ ಕೆಲಸಕ್ಕೆ ಕೈ ಹಾಕಿದೆ. ಆದ್ದರಿಂದ ಪ್ರತಿಯೊಬ್ಬ ಮತದಾರರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಬೇಡಿ ಎಂದರು.
ಈ ವೇಳೆ ಅಯ್ಯನಗೌಡ ಹೇರೂರು, ನೀಲಕಂಠ ಕಟ್ಟಿಮನಿ, ಪ್ರಶಾಂತ ಚಿತ್ರಗಾರ, ಕುಮಾರ ಹೂಗಾರ, ವಿರೇಶ, ಸಿದ್ದುಗೌಳಿ, ಕಿಟ್ಟಿನಾಯಕ, ಮಂಉ ಸೇರಿದಂತೆ ಅನೇಕರು ಇದ್ದರು.
One attachment • Scanned by Gmail