ಕಾಂಗ್ರೆಸ್ ವಿಜಯೋತ್ಸವ


ಲಕ್ಷ್ಮೇಶ್ವರ,ಆ.6: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಯುವಕರ ಕಣ್ಮಣಿ ಭಾರತ್ ಜೋಡು ಯಾತ್ರೆಯ ಖ್ಯಾತಿಯ ರಾಹುಲ್ ಗಾಂಧಿಯವರಿಗೆ ಎರಡು ವರ್ಷ ಶಿಕ್ಷೆ ನೀಡಿ ಸಂಸತ್ ಸದಸ್ಯತ್ವವನ್ನು ರದ್ದುಗೊಳಿಸಿದ್ದ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿರುವನ್ನು ಸ್ವಾಗತಿಸಿ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರ ಘಟಕದ ಅಧ್ಯಕ್ಷ ಅಂಬರೀಶ್ ತೆಂಬದಮನಿ ಅವರು ದೇಶದಲ್ಲಿ ಇದೀಗ ಬಿಜೆಪಿ ವಿರೋಧಿ ಅಲೆ ಆರಂಭವಾಗಿರುವುದರಿಂದ ಹತಾಶಗೊಂಡಿರುವ ಕೇಂದ್ರ ಸರ್ಕಾರ ನೆಪಗಳನ್ನು ಒಡ್ಡಿ ಕಾಂಗ್ರೆಸ್ಸನ್ನು ಮಡಿಸಲು ಹೊರಟಿದೆ ಆದರೆ ಇದಕ್ಕೆ ಈಗಾಗಲೇ ಕರ್ನಾಟಕದ ಜನತೆ ಸಮರ್ಪಕ ಉತ್ತರ ನೀಡಿದ್ದು ಇನ್ನು ಮುಂದೆ ಭಾರತದಲ್ಲಿ ಆರ್ ಎನ್ ಡಿ ಎ ತನ್ನ ಪ್ರಭುತ್ವ ಸಾಧಿಸಲಿದೆ ಎಂದು ಮುಂಬರುವ ಐದು ರಾಜ್ಯಗಳ ಚುನಾವಣೆಯಲ್ಲೂ ಸಹ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಸಾಹೇಬ ಜಾನ್ ಹವಾಲ್ದಾರ್ ಮಹದೇವಪ್ಪ ಅಣ್ಣಿಗೇರಿ ಎನ್ ಎಂ ಗದಗ ಮಂಜಣ್ಣ ಶರಶೂರಿ ಕಿರಣ್ ನವಲೆ ಎಲ್ಲಪ್ಪ ಹಜಗಿ ವೀರೇಂದ್ರ ಬಜಂತ್ರಿ ಗಂಗಾಧರ ಮ್ಯಾಗೇರಿ ನೀಲಪ್ಪ ಪೂಜಾರ ಫಕೀರೇಶ ನಂದಣ್ಣವರ ಆದಮ್ ಸಾಬ್ ನಾಯಕ್ ಹೊನ್ನಪ್ಪ ಬಾಲೆ ಹೊಸೂರು ಸೇರಿದಂತೆ ಅನೇಕರಿದ್ದರು