ಕಾಂಗ್ರೆಸ್ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ

ಇಲಕಲ್ಲ :ಸೆ.9: ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಶುಕ್ರವಾರ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಬಸವೇಶ್ವರ ಸರ್ಕಲ್‍ದಿಂದ ಆರಂಭವಾದ ಮೆರವಣಿಗೆ ಪ್ರವಾಸಿ ಮಂದಿರ, ಮಹಾಂತ ಗಂಗೋತ್ರಿ, ನಿಲ್ದಾಣ, ಮಾರುತಿ ಯುವ ದೇವಸ್ಥಾನ ಮಾರ್ಗವಾಗಿ ಕಂಠಿ ಸರ್ಕಲ್‍ಗೆ ವೀರೇಶ ಆಗಮಿಸಿ ಅಲ್ಲಿ ಸಾರ್ವಜನಿಕ ಸಭೆಯಾಗಿ ಮಾರ್ಪಟ್ಟಿತು.

ಜಿಲ್ಲಾ ರೈತ ಕಾರ್ಯದರ್ಶಿ ಎಂ.ಆರ್.ಪಾಟೀಲ, ಬಿಜೆಪಿ ದ ಸ್ವಚ್ಛತಾ ನಗರ ಘಟಕದ ಅಧ್ಯಕ್ಷ ಮಂಗಳೂರು, ಗ್ರಾಮೀಣ ಘಟಕದ ಅಧ್ಯಕ್ಷ ಮಹಾಂತಗೌಡ ಪಾಟೀಲ ತೊಂಡಿಹಾಳ, ರಾಜಕುಮಾರ ಬಾದವಾಡಗಿ ಮತ್ತಿತರರು ಕಾಂಗ್ರೆಸ್ ಸರಕಾರದ ವಿರುದ್ಧ ಹರಿಹಾಯ್ದು ರೈತರಿಗೆ ಎಲ್ಲ ಹಂತಗಳಲ್ಲಿ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನಾ ಮೆರವಣಿಗೆಯಲ್ಲಿ ವೆಂಕಟೇಶ ಪೆÇೀತಾ, ಮಹೇಶ ಪಾಟೀಲ ಮಲ್ಲಯ್ಯ ಮೂಗನೂರ, ಬಸವರಾಜ ಹುನಕುಂಟೆ ಬಸವರಾಜ ಬಾದವಾಡಗಿ ಆನಂದ ಚಲವಾದಿ, ಹಿರೇಮನಿ, ಚಂದ್ರಶೇಖರ ಏಕಬೋಟೆ, ಸುಗೂರೇಶ ನಾಗಲೋಟಿ, ವಿಜಯ ಗಿರಡ್ಡಿ, ವಿಜಯ ಹೇರೂರ, ಅರವಿಂದ ಪ್ರಧಾನ ಗೌಡರ, ಭರಮರೆಡ್ಡಿ ಚಿಂತಕಮಲದಿನ್ನಿ, ಮಂಜುನಾಥ ಹೊಸಮನಿ, ಮಹಾಂತೇಶ ಅರವಿಂದಮಠ, ಮಹದೇವಸಾ ಕಾಟವಾ, ಮಹಾಂತಪ್ಪ ಚೆನ್ನಿ, ತೃಪ್ತಿ ಸಾಲಿಮಠ ಮತ್ತಿತರರು ಇದ್ದರು.