
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಅ,7- ರೈತರ ಅಭಿವೃದ್ಧಿಗೆ ಬಿಜೆಪಿ ಆಡಳಿತದ ಸರ್ಕಾರ ಜಾರಿಗೆ ತಂದಿದ್ದ ಯೋಜನೆಗಳನ್ನು ಈಗಿನ ಕಾಂಗ್ರೆಸ್ ಸರ್ಕಾರ ರದ್ದು ಮಾಡಿರುವುದನ್ನು ವಿರೋಧಿಸಿ ಇಂದು ಡಿಸಿ ಕಚೇರಿ ಮುಂದೆ ಮಾಜಿ ಶಾಸಕರ ನೇತೃತ್ವದಲ್ಲಿ ರೈತ ಮೋರ್ಚಾದಿಂದ ಪ್ರತಿಭಟನಾ ಧರಣಿ ನಡೆಸಲಾಯ್ತು.
ಮಾಜಿ ಶಾಸಕರಾದ ಗಾಲಿ ಸೋಮಶೇಖರ ರೆಡ್ಡಿ, ಎಂ.ಎಸ್.ಸೋಮಲಿಂಗಪ್ಪ ಅವರ ನೇತೃತ್ವದಲ್ಲಿ. ಬಿಜೆಪಿಯ ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಗುರುಲಿಂಗನಗೌಡ, ಜಿಲ್ಲಾ ಮೋರ್ಚಾದ ಕಾರ್ಯದರ್ಶಿ ಮದಿರೆ ಕುಮಾರಸ್ವಾಮಿ, ಪಕ್ಷದ ಜಿಲ್ಲಾ ಅಧ್ಯಕ್ಷ ಗೋನಾಳ್ ಮುರಹರಗೌಡ, ಹಿರಿಯ ಮುಖಂಡರಾದ ಕೆ.ಎ.ರಾಮಲಿಂಗಪ್ಪ, ಎರ್ರಂಗಳಿ ತಿಮ್ಮಾರೆಡ್ಡಿ ಮೊದಲಾದವರೊಂದಿಗೆ ರಾಜ್ಯ ಸರ್ಕಾರ ರೈತರ ಬಗ್ಗೆ ತಳೆದಿರುವ ಧೋರಣೆಯನ್ನು ಖಂಡಿಸಿ ಘೋಷಣೆ ಕೂಗಲಾಯತು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯ್ತು.
ರೈತರು ತಮ್ಮ ಉತ್ಪನ್ನವನ್ನು ಬೇಕಾದಡೆ ಮಾರಾಟ ಮಾಡಲು ಅವಕಾಶವಿದ್ದ ಎಪಿಎಂಸಿ ಕಾನೂನು ತಿದ್ದುಪಡಿತನ್ನು ರದ್ದುಮಾಡಿ ರೈತರ ಆದಾಯಕ್ಕೆ ಕುತ್ತು ಬಂದಿದೆ.
ವಿದ್ಯುತ್ ಧರ ಏರಿಕೆ,
ರೈತರು ಮತ್ತು ಅವರ ಮಕ್ಕಳುಗೆ ನೆರವಾಗಬಲ್ಲ ವಿದ್ಯಾನಿಧಿ ಯೋಜನೆ, ಗೋಶಾಲೆ, ಭೂ ಸಿರಿ, ಕಿಸಾನ್ ಸಮ್ಮಾನ್ ಯೋಜನೆ ರದ್ದು ಮಾಡಿರುವುದು. ಕೃಷಿ ಭೂಮಿ ಮಾರಾಟ ಕಾಯ್ದೆಗೂ ತಿದ್ದುಪಡಿ ಮಾಡಿರುವುದು ರೈತ ವಿರೋಧವಾಗಿದ್ದು ಇವನ್ನು ಫುನಃ ಜಾರಿಗೆ ತರಬೇಕು ಸೇರಿದಂತೆ ಹಲವು ಬೇಡಿಕೆಗಳ ಬಗ್ಗೆ ಉಲ್ಲೇಖಿಸಿದೆ.
ಈ ಸಂದರ್ಭದಲ್ಲಿ ಶಾಸಕರಾದ ಸೋಮಶೇಖರ ರೆಡ್ಡಿ, ಸೋಮಲಿಂಗಪ್ಪ ಅವರುಗಳು ಬಿಜೆಪಿ ಸರ್ಕಾರದಲ್ಲಿ ನೀರಾವರಿ ಯೋಜನೆಗಳಿಗೆ ಬಜೆಟ್ ನಲ್ಲಿ 23 ಸಾವಿರ ಕೋಟಿ ರೂ ನೀಡಿತ್ತು. ಈಗ ಕಾಂಗ್ರೆಸ್ ನವರು 19 ಸಾವಿರ ಕೋಟಿ ರೂಗೆ ಇಳಿಸಿರುವುದು ರೈತರಿಗೆ ಅನ್ಯಾಯವಾಗಲ್ಲವೇ,
ಉಪ ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಮೇಕೆದಾಟು ಯೋಜನೆ ಅನುಷ್ಟಾನಕ್ಕೆ ನಡೆಸಿದ ಪಾದಯಾತ್ರೆ ಬರೀ ರಾಜಕೀಯ ಸ್ಟಂಟೇ ಎಂದು ಪ್ರಶ್ನಿಸಿದರು.
ಹಾಲು ಉತ್ಪಾದಕ ರೈತರಿಗೆ ಸಹಕಾರಿಯಾಗುತ್ತಿದ್ದ ಕ್ಷೀರ ಸಮೃದ್ದಿ ಸಹಕಾರ ಬ್ಯಸಂಕ್ ರದ್ದು ಮಾಡಿದ್ದು ಯಾವ ಉದ್ದೇಶಕ್ಕೆಂದು ಕೇಳಿದರು.
ರಾಜ್ಯದಲ್ಲಿ ಕೃಷಿ ಪಂಪ್ ಸೆಟ್ ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ತುಂಗಭದ್ರ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ನಯಾ ಪೈಸೆ ನೀಡಲಿಲ್ಲ. ನಿಮ್ಮ ಸರ್ಕಾರ ಆಡಳಿತಕ್ಕೆ ಬಂದ ಎರೆಡು ತಿಂಗಳಲ್ಲಿ 42 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ತಡೆಗೆ ಗ್ಯಾರೆಂಟಿಗಳಿಂದ ಏನಾಗದು, ರೈತರ ಸಂಕಷ್ಟದ ಯೋಜನೆಗಳು ಬೇಕು ಎಂದರು.
ಪಾಲಿಕೆ ಸದಸ್ಯರು, ಜಿಲ್ಲಾ ಘಟಕ, ರೈತ ಮೊರ್ಚಾದ ಪದಾಧಿಕಾರಿಗಳು,ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.