ಕಾಂಗ್ರೆಸ್ ರೈತ ವಿರೋಧಿ: ನಡಹಳ್ಳಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.14: ಬಿಜೆಪಿ ಜಿಲ್ಲಾ ಕಚೇರಿಯಲ್ಲಿ  ನಿನ್ನೆ ಸಂಜೆ ನಡೆದ ಸಭೆಯಲ್ಲಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ. ಎಸ್. ನಡಹಳ್ಳಿ.  ಈ ಹಿಂದೆ ಮುಖ್ಯ ಮಂತ್ರಿಗಳಾಗಿದ್ದ
ಯಡಿಯೂರಪ್ಪನವರು ರೈತಪರ ಯೋಜನೆಗಳಾದ ಕಿಸಾನ್ ಸಮನ್ ಯೋಜನೆಗೆ  4 ಸಾವಿರ ರೂಪಾಯಿ ನೀಡುತ್ತಿದ್ದರು. ಅದನ್ನು ಕಾಂಗ್ರೆಸ್ ನವರು ನಿಲ್ಲಿಸಿದ್ದಾರೆ ಹಾಗೂ ರೈತರ ಮಕ್ಕಳಿಗೆ ವಿದ್ಯಾ ನಿಧಿ ಕಾಲರ್ಶಿಪ್.  ರೈತರ ಹಾಲಿನ ಪ್ರೋತ್ಸಾಹ ಧನವನ್ನು ನಿಲ್ಲಿಸಿರುತ್ತಾರೆ.
ಹಿಂದಿನ ನಮ್ಮ ಬಿಜೆಪಿ ಸರ್ಕಾರ ನೀಡುವ ಯೋಜನೆಗಳನ್ನ ತಡೆದು ಈಗಿನ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದತು.
ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಗಣಪಾಲ್ ಐನಾಥರೆಡ್ಡಿ ಮಾತನಾಡಿ,  ಇಂದಿನ ಕೇಂದ್ರ ಸರ್ಕಾರದ ಯೋಜನೆಗಳಾದ ಕಿಸಾನ್ ಸಮನ್ಸ್ ಯೋಜನೆಯ 6,000 ರೂಪಾಯಿಗಳು ನೇರವಾಗಿ ರೈತರಖಾತೆಗೆ ಜಮಗೊಳ್ಳುತ್ತವೆ ಹಾಗೂ ರಸಗೊಬ್ಬರದ ಮೇಲಿನ ಹೆಚ್ಚಿನ ಸಬ್ಸಿಡಿಯನ್ನು ಈಗಿನ ಕೇಂದ್ರ ಸರ್ಕಾರವು ನೀಡುತ್ತಿದೆ ಎಂದು ಹೇಳಿದರು.
 ಗಾಲಿ ಲಕ್ಷ್ಮಿಅರುಣ  ಮಾತನಾಡಿ,  ಇಡೀ ದೇಶದಲ್ಲಿ ವಿಶೇಷ ರೈತ ಬಜೆಟ್ ಮಂಡಿಸಿದ್ದು ನಮ್ಮ ಹೆಮ್ಮೆಯ ನಾಯಕ ಯಡಿಯೂರಪ್ಪನವರು ಎಂದರು.
 ಈಗಿನ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಯನ್ನ ಹಾಗೂ ಈಗಿನ ಕೇಂದ್ರ ಸರ್ಕಾರದ ರೈತ ಪರ ಯೋಜನೆಗಳನ್ನ ವಿಷಯಗಳನ ಪ್ರತಿ ರೈತರಿಗೆ ತಿಳಿಸಿ ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಲಾಯ್ತು.
ಸಭೆಯಲ್ಲಿ ಗುರುಲಿಂಗನಗೌಡ, ಸಿರಿವಾರ ಶಿವರುದ್ರಪ್ಪ, ದಮ್ಮೂರು ಶೇಖರ್, ಅನಿಲ್ ನಾಯ್ಡು ಮೊದಲಾದವರು ಇದ್ದರು.