ಕಾಂಗ್ರೆಸ್ ರಾಷ್ಟ್ರೀಯ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆಯವರಿಗೆ ಜನ್ಮದಿನದ ಶುಭ ಕೋರಿದ ಡಾ. ಅಜಯ್ ಧರ್ಮಸಿಂಗ್

ಕಲಬುರಗಿ,ಜು.21:ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು ಹಾಗೂ ಪ್ರಸ್ತುತ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಡಾ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವರ 80 ನೇ ವರ್ಷದ ಜನ್ಮದಿನವಾದ ಜುಲೈ 21 ರ ಗುರುವಾರ ನವ ದೆಹಲಿಯ ಅವರ ನಿವಾಸಕ್ಕೆ ತೆರಳಿ, ಜೇವರ್ಗಿ ಶಾಸಕರು ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ಆಗಿರುವ ಡಾ. ಅಜಯ್ ಧರ್ಮಸಿಂಗ್ ಅವರು ಪುಷ್ಪಗುಚ್ಛ ನೀಡಿ ಡಾ. ಖರ್ಗೆಯವರ ದೀರ್ಘಾಯುಷ್ಯಕ್ಕಾಗಿ ಭಗವಂತನಲ್ಲಿ ಪ್ರಾರ್ಥಿಸಿದರು.

ಬುದ್ಧನ ತತ್ವ, ಅಂಬೇಡ್ಕರ್ ಚಿಂತನೆ, ಬಸವಣ್ಣನವರ ಸಮಾನತೆಯ ಆದರ್ಶಗಳನ್ನು ಮೈಗೂಡಿಸಿಕೊಂಡಿರುವ ಡಾ. ಮಲ್ಲಿಕಾರ್ಜುನ ಖರ್ಗೆಯವರು ಜನನಾಯಕರಾಗಿ, ಮುತ್ಸದ್ದಿ ರಾಷ್ಟ್ರ ಚಿಂತಕರಾಗಿ ಹೊರಹೊಮ್ಮುವ ಮೂಲಕ ಕಲಬುರಗಿಯ ಭಾಗದ ಜನಪ್ರೀಯ ನಾಯಕರಾಗಿದ್ದಾರೆ. ಅವರಿಂದ ಇನ್ನೂ ಹೆಚ್ಚಿನ ಸೇವೆ ಈ ದೇಶಕ್ಕೆ, ರಾಜ್ಯಕ್ಕೆ, ಕಲಬುರಗಿ ಭಾಗಕ್ಕೆ ದೊರಕಲಿ, ಡಾ. ಖರ್ಗೆಜಿ ಅವರಿಗೆ ಭಗವಂತ ಶತಾಯುಷ್ಯ ಕರುಣಿಸಲಿ ಎಂದು ಡಾ. ಅಜಯ್ ಸಿಂಗ್ ಅವರು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರ. ಕಾರ್ಯದರ್ಶಿ ಶರಣು ಮೋದಿ, ಮಾಜಿ ಎಂಎಲ್‍ಸಿ ಅಲ್ಲಂಪ್ರಭು ಪಾಟೀಲ್, ನೀಲಕಂಠ ಮೂಲಗೆ ಹಾಜರಿದ್ದು ಇವರೂ ಡಾ. ಖರ್ಗೆಯವರ ಶತಾಯುಷ್ಯಕ್ಕಾಗಿ ಪರಮಾತ್ಮನಲ್ಲಿ ಪ್ರಾರ್ಥನೆ ಸಲ್ಲಿಸಿ ಶುಭ ಕೋರಿದರು.