ಕಾಂಗ್ರೆಸ್ ಮೌನ ಪ್ರತಿಭಟನೆ

ಹುಬ್ಬಳ್ಳಿ ಜು.12: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ದೋಷಿ ಎಂದು ಸಾಬೀತುಪಡಿಸಲು ಹಾಗೂ ಅವರನ್ನು ಲೋಕಸಭೆಯ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲು ಕೇಂದ್ರದ ಬಿಜೆಪಿ ಸರ್ಕಾರ ಹುನ್ನಾರ ಹಾಗೂ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಖಂಡಿಸಿ ನಗರದ ಕಿಮ್ಸ್ ಮುಖ್ಯದ್ವಾರದ ಬಳಿ ಧಾರವಾಡ ಜಿಲ್ಲಾ ಮಹಾನಗರ ಹಾಗೂ ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ ಒಂದು ದಿನದ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ್ ಪಾಟೀಲ್, ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ, ಮುಖಂಡರಾದ ಸದಾನಂದ ಡಂಗನವರ, ಡಾ. ಶರಣಪ್ಪ ಕೊಟಗಿ, ಎ.ಎಂ.ಹಿಂಡಸಗೇರಿ, ಮಾಜಿ ಸಂಸದ ಐ.ಜಿ. ಸನದಿ, ಎಫ್.ಹೆಚ್. ಜಕ್ಕಪ್ಪನವರ, ಪ್ರಕಾಶ್ ಪಾಟೀಲ್, ತಾರಾದೇವಿ ವಾಲಿ, ಸತೀಶ್ ಮೆಹರವಾಡೆ, ಮಹೇಶ್ ದಾಬಡೆ, ರಾಜಶೇಖರ ಮೆಣಸಿನಕಾಯಿ, ಅನ್ವರ್ ಮುಧೋಳ, ಬಂಗಾರೇಶ್ ಹಿರೇಮಠ, ಅರವಿಂದ ಏಗನಗೌಡ್ರ, ವೀರಣ್ಣ ಹಿರೇಹಾಳ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.