ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ
 ವಿಜಯನಗರ ಜಿಲ್ಲೆಯ ಮೂರು ಕ್ಷೇತ್ರಗಳ ಅಭ್ಯರ್ಥಿ ಘೋಷಣೆ


ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ: ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿ ಬಿಡುಗಡೆಯಾಗಿದ್ದು ಹೆಚ್.ಆರ್.ಗವಿಯಪ್ಪ,  ಭೀಮಾನಾಯ್ಕ್ ಹಾಗೂ ಪರಮೇಶ್ವರನಾಯ್ಕ್ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ 2023 ರ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧೆಸಲಿದ್ದಾರೆ.
ಕೆಪಿಸಿಸಿ ಇಂದು ಬೆಂಗಳೂರಿನಲ್ಲಿ 2023ರ ಚುನಾವಣೆಯ 224 ಕ್ಷೇತ್ರಗಳ ಪೈಕಿ ಮೊದಲ123 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಪ್ರಬಲ ಪೈಪೂಟಿಯ ವಿಜಯನಗರದಿಂದ ಮಾಜಿ ಶಾಸಕ ಹೆಚ್.ಆರ್.ಗವಿಯಪ್ಪ, ಹಾಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಭೀಮಾನಾಯ್ಕ್, ಹಡಗಲಿ ಕ್ಷೇತ್ರದ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ್ ಸ್ಥಾನ ಪಡೆಯುವ ಮೂಲಕ ಅಧೀಕೃತ ಅಭ್ಯರ್ಥಿಗಳೆಂದು ಆಯ್ಕೆಯಾಗಿದ್ದು ಸ್ಪರ್ಧೆಗೆ ಅಣಿಯಾಗಲಿದ್ದಾರೆ. ಘೋಷಣೆಯಾಗುತ್ತಿದ್ದಂತೆಯೇ ಹರ್ಷ ಮೂಗಿಲು ಮುಟ್ಟಿದ್ದು ಅವರ ಅಭಿಮಾನಿಗಳು ಸಹ ಸಂಭ್ರಮಿಸಿದರು.
ಈ ಕುರಿತು ಸಂಜೆವಾಣಿ ಪ್ರತಿನಿಧಿಯೊಂದಿಗೆ ಮಾತನಾಡಿದ ಮಾಜಿ ಶಾಸಕ ಹೆಚ್.ಆರ್.ಗವಿಯಪ್ಪ ಪಕ್ಷದ ಹೈಕಮಾಂಡ ನನ್ನ ಮೇಲೆ ವಿಶ್ವಾಸವಿಟ್ಟು ಅವಕಾಶ ನೀಡಿದೆ, ನನ್ನ ಕ್ಷೇತ್ರದ ವಿವಿಧ ಆಕಾಂಕ್ಷಿಗಳು ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರ ಒಗ್ಗೂಡುವಿಕೆಯಿಂದ ಪಕ್ಷದ ಗೆಲುವಿಗೆ ಕಾರ್ಯತಂತ್ರ ರೂಪಿಸುತ್ತೇವೆ ಎಂದು ಬದಲಾವಣೆ ಜಗದ ನಿಯಮ ಆಮೂಲಕ ಪ್ರಜಾತಂತ್ರ ವ್ಯವಸ್ಥೆಯನ್ನು ಎತ್ತಿಹಿಡಿಯುತ್ತೇನೆ ಎಂದು ಹರ್ಷ ವ್ಯಕ್ತಪಡಿಸಿದರು.
ಊಳಿದಂತೆ ಹಗರಿಬೊಮ್ಮನಹಳ್ಳಿಯಲ್ಲಿ ಹಾಲಿ ಶಾಸಕ ಭೀಮಾನಾಯ್ಕ್‍ರವರಿಗೂ ಈ ಭಾರಿಯು ಮಣಿಹಾಕಿದ್ದು ಈ ಕ್ಷೇತ್ರದಲ್ಲಿಯೂ ರಾಮಪ್ಪ ಸೇರಿದಂತೆ ಅನೇಕ ಆಕಾಂಕ್ಷಿಗಳಿದ್ದು ಹಾಲಿ ಶಾಸಕರಾಗಿರುವ ಭೀಮಾನಾಯ್ಕ್‍ರವರಿಗೆ ಅವಕಾಶ ನೀಡಿದೆ. ಇನ್ನು ಹಡಗಲಿಯಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕರಾಗಿರುವ ಪಿ.ಟಿ.ಪರಮೇಶ್ವರನಾಯ್ಕ್‍ರವರಿಗೆ ಅವಕಾಶ ನೀಡಿದೆ.
ಜನರೊಂದಿಗೆ ಹತ್ತಿರದಲ್ಲಿದ್ದು ಸೇವೆ ಮಾಡುತ್ತೇನೆ, ಅಭಿವೃದ್ಧಿಯ ಜೊತೆ ಸಾರ್ವಜನಿಕರೊಂದಿರುವೆ ಈ ಬಾರಿ ಜನ ಹಾರೈಸುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.ಹೆಚ್.ಆರ್.ಗವಿಯಪ್ಪ.
ಪಕ್ಷದ ಆಂತರಿಕ ವಿಶ್ವಾಸ ಹಾಗೂ ಒಗ್ಗಟ್ಟಿನಿಂದ ಮುಂಬರುವ ಚುನಾವಣೆ ಎದುರಿಸುತ್ತೇವೆ, ಎಲ್ಲಾ ಆಕಾಂಕ್ಷಿಗಳೊಂದಿಗೆ ಮಾತನಾಡಿರುವೆ, ಹೈಕಮಾಂಡ ಅಪ್ಪಣೆಯಂತೆ ಗೆಲುವಿಗೆ ಎಲ್ಲರೂ ಶ್ರಮಿಸುತ್ತೇವೆ. ಮೊದಲ ಪಟ್ಟಿ ಬಿಡುಗಡೆಯಾಗಿದ್ದು ವಿಜಯನಗರ ಜಿಲ್ಲೆಯ ಮೂರು ಕ್ಷೇತ್ರಗಳ ಅಭ್ಯರ್ಥಿ ಘೋಷಣೆಯಾಗಿದೆ.
ಬಿ.ವಿ.ಶಿವಯೋಗಿ.  ಕೆ.ಪಿ.ಸಿ.ಸಿ.ಬಳ್ಳಾರಿ ಗ್ರಾಮೀಣ ಜಿಲ್ಲಾಧ್ಯಕ್ಷ.