ಕಾಂಗ್ರೆಸ್ ಮೇಲುಗೈ, ಮಬಲದತ್ತ ಬಿಜೆಪಿ,ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು

ಮಾನ್ವಿ.ಡಿ.೩೧- ತಾಲೂಕಿನ ಗ್ರಾಮ ಪಂಚಾಯತ ಚುನಾವಣೆ ಎದುರಿಸಿದ ೩೧೧ ಅಭ್ಯರ್ಥಿಗಳ ಫಲಿತಾಂಶ ಬುಧವಾರ ಹೊರಬಿದಿದ್ದು, ಒಟ್ಟಾರೆ ಫಲಿತಾಂಶದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದರೆ. ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವಿನಲ್ಲಿ ಸಮಬಲ ಕಾಯ್ದುಕೊಂಡಿದ್ದಾರೆ.
ಬುಧವಾರ ಪಟ್ಟಣದ ಸರ್ಕಾರಿ ಪದವಿ ಕಾಲೇಜ್‌ನಲ್ಲಿ ನಡೆದ ಮತ ಎಣಿಕೆ ಬೆಳಿಗ್ಗೆ ೮ರಿಂದ ಆರಂಭಗೊಂಡಿತ್ತು. ಮೊದಲ ಸುತ್ತಿನಲ್ಲಿ ೧೭ ಪಂಚಾಯಿತಿ ವಿವಿಧ ವಾರ್ಡ್‌ಗಳಿಂದ ೩೪೧ ಸ್ಥಾನಗಳಿಗೆ ೮೫೩ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ೩೦ ಜನ ಅಭ್ಯರ್ಥಿಗಳು ಅವಿರೋಧ ಆಯ್ಕೆಗೊಂಡ ಪರಿಣಾಮ ೩೧೧ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಮೊದಲು ಮತ್ತು ಎರಡನೇ ಸುತ್ತಿನಲ್ಲಿ ೧೨೫ ಜನ ಅಭ್ಯರ್ಥಿಗಳು ಗೆಲವು ಸಾಧಿಸಿದರೆ ಇನ್ನೂ ೧೮೬ ಸ್ಥಾನದ ಅಭ್ಯಥಿಗಳ ಮತ ಎಣಿಕೆ ಕಾರ್ಯ ಮಂದಗತಿಯಲ್ಲಿ ಸಾಗಿತ್ತು. ಮತ ಎಣಿಕೆ ರಾತ್ರಿ ೯:೩೦ರ ವರೆಗೆ ನಡೆದು ಒಟ್ಟಾರೆ ಫಲಿತಾಂಶದ ರಾತ್ರಿ ೧೦ ಗಂಟೆ ನಂತರ ಪ್ರಕಟವಾಯಿತು. ಗೆಲುವಿನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದರೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಗೆಲುವಿನಲ್ಲಿ ಸಮಬಲ ಕಂಡುಬಂದಿತ್ತು.
ಸಂಭ್ರಮ: ಗ್ರಾಮ ಪಂಚಾಯಿಗಳ ಚುನಾವಣೆ ಫಲಿತಾಂಶ ಹೊರಬಿಳುತ್ತಲೇ ಗೆದ್ದ ಅಭ್ಯರ್ಥಿಗಳ ಬೆಂಬಲಿಗರು ಕಾರ್ಯಕರ್ತರು ಬಣ್ಣ ಎರಚಿಕೊಂಡು ಸಂಭ್ರ್ರಮಿಸಿದರು. ನಂತರ ಜೆಡಿಎಸ್, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಬೆಂಬಲಿಗರೊಂದಿಗೆ ಶಾಸಕ ರಾಜಾ ವೆಂಕಟಪ್ಪ ನಾಯಕ ಹಾಗೂ ಮಾಜಿ ಶಾಸಕ ಎನ್.ಎಸ್.ಬೋಸರಾಜು ಮತ್ತು ಜಿ.ಹಂಪಯ್ಯ ನಾಯಕರಲ್ಲಿ ತೆರಳಿ ಗೆಲುವನ್ನು ಸಂಭ್ರಮಿಸಿದರು.
ಮತ ಎಣಿಕೆ ಕೇಂದ್ರದಲ್ಲಿ ಸುತ್ತಲೂ ಸಾವಿರಾರು ಜನರು ಜಮಾಯಿದ್ದರಿಂದ ಮೊಬೈಲ್ ನೆಟ್‌ವರ್ಕ್ ಬಾರದೆ ಜನರು ಸಮಸ್ಯೆ ಎದುರಿಸಬೇಕಾಯಿತು. ರಾಜ್ಯ ಹೆದ್ದಾರಿ ರಸ್ತೆ ಸಂಚಾರಕ್ಕೆ ಅಡಚರಣೆಯಾದ್ದರಿಂದ ಪೊಲೀಸರು ಜನರನ್ನ ಚದುರಿಸಲು ಹಾರಸಹಾಸ ಪಡಬೇಕಾಯಿತು.

ಸೋತು ಗೆದ್ದ ಅಭ್ಯರ್ಥಿಗಳು:

ತಾಲೂಕಿನ ನಕ್ಕುಂದಿ ಗ್ರಾಪಂ ಪಂಚಾಯಿತಿಯಲ್ಲಿ ಎಸ್ಸಿ ಮೀಸಲಾತಿಯಿಂದ ಸ್ಪರ್ಧೆ ಮಾಡಿ ಸೋಲು ಕಂಡಿದ್ದ ಮಾರೆಪ್ಪ ಅಭ್ಯರ್ಥಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಿದ ಅಭ್ಯರ್ಥಿ ಶಂಕ್ರಪ್ಪನ ವಿರುದ್ಧ ಹೆಚ್ಚು ಮತಗಳನ್ನು ಪಡೆದು ಗೆಲುವು ಸಾಧಿಸಿ ಗ್ರಾಮಸ್ಥರಲ್ಲಿ ಆಚ್ಚರಿ ಮೂಡಿಸಿದ್ದಾರೆ.

ಬಾಗಲವಾಡ ಗ್ರಾ.ಪಂ ಎಸ್ಸಿ ಪುರುಷ ಮೀಸಲು ಸ್ಥಾನದಿಂದ ಪಿ.ತಿಪ್ಪಣ್ಣ ಬಾಗಲವಾಡ ವಕೀಲರು ಗೆಲುವು ಸಾಧಿಸಿದ್ದಾರೆ. ಹಾಗೂ ಹಿರೇಕೊಟ್ನೆಕಲ್ ಗ್ರಾ.ಪಂ.ಜಯಶ್ರೀ ಹನುಮಂತಗೌಡ, ಶಿವಾನಂದಸ್ವಾಮಿ, ಯಲ್ಲಪ್ಪ, ಜ್ಯೋತಿ ಕೃಷ್ಣ, ಶಾಮಿದಾಬೇಗಂ, ಅಮರೇಶನಾಯಕ, ಪುಷ್ಪಾವತಿ ಬಸವರಾಜನಾಯಕ, ಲಕ್ಷ್ಮೀ ಶ್ರೀನಿವಾಸನಾಯಕ, ಲಕ್ಷ್ಮೀ ವೆಂಕೋಬ, ನಾಗನಗೌಡ, ಭೋಗಾವತಿ ಗ್ರಾ.ಪಂ.ನಲ್ಲಿ ವಿರೂಪಾಕ್ಷರೆಡ್ಡಿಗೌಡ, ಪಂಪನಗೌಡ ಸೇರಿದಂತೆ ಬೊಮ್ಮನಾಳ್ ಗೋಪಾಲ, ಶಿವಮ್ಮ ಯಂಕಪ್ಪ, ನಾಗನಗೌಡ ಸೇರಿದಂತೆ ಇನ್ನಿತರರು ಗೆಲುವು ಸಾಧಿಸಿದವರಲ್ಲಿ ಪ್ರಮುಖರಾಗಿದ್ದಾರೆ