
ಆಲಮಟ್ಟಿ:ಆ.29: ರಾಜ್ಯ ಸರ್ಕಾರ ಲೂಟಿ ಹೊಡೆಯುವ ಕೆಲಸದಲ್ಲಿಗ ನಿರತವಾಗಿದೆ ಅಲ್ಲದೇ ಹಿಂದೂಗಳನ್ನು ಕಡೆಗಣಿಸಿ ಮುಸ್ಲಿಮರ ಓಲೈಕೆಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ಕಿಡಿಕಾರಿ ಆಪಾದಿಸಿದರು.
ಆಲಮಟ್ಟಿ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಛತ್ರಪತಿ ಶಿವಾಜಿ ಮಹಾರಾಜರ ಆಡಳಿತಾವಧಿಯಲ್ಲಿ ಹಿಂದೂಗಳಷ್ಟೇ ಮುಸ್ಲಿಮರು ಸಂತುಷ್ಟರಾಗಿದ್ದರು. ಶಿವಾಜಿ ಮಹಾರಾಜರು ಇರದಿದ್ದರೆ ನಾವ್ಯಾರೂ ಇರುತ್ತಿರಲಿಲ್ಲ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು. ಬಾಗಲಕೋಟೆಯಲ್ಲಿ ಶಿವಾಜಿ ಮಹಾರಾಜರ ಪ್ರತಿಷ್ಟಾಪನೆಗೆ ಎಲ್ಲ ಸ್ಥಳೀಯ ಸಂಸ್ಥೆಗಳಿಂದ ಪರವಾನಗಿ ಪಡೆದು ಪುತ್ಥಳಿ ಪ್ರತಿಷ್ಟಾಪನೆ ಮಾಡಲು ಹೊರಟಿರುವ ಹಿಂದುಪರ ಸಮಘಟನೆಗಳಿಗೆ ತಡೆಯೊಡ್ಡುತ್ತಿರುವುದು ಸರಿಯಲ್ಲ, ಕೂಡಲೇ ಅವಕಾಶ ನೀಡಬೇಕು ಜನ ಇದೆಲ್ಲವನ್ನೂ ನೋಡುತ್ತಿದ್ದಾರೆ. ಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ಶಾಸ್ತಿ ನೀಡಲಿದ್ದಾರೆ. ಈ ಬಾರಿ ರಾಜ್ಯದ 28ಕ್ಷೇತ್ರಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದರೆ ಅಚ್ಚರಿಯಿಲ್ಲ, ಈ ಹಿಂದೆ ಮುಖ್ಯಮಂತ್ರಿಯಾಗಿದ್ದವರು ರಾಜ್ಯದಲ್ಲಿ ಬಿಜೆಪಿ ಒಂದು ಸ್ಥಾನವೂ ಗೆಲ್ಲುವುದಿಲ್ಲ ಎಂದು ಹೇಳಿದ್ದರು ಆದರೆ ಕಾಂಗ್ರೆಸ್ ಕೇವಲ ಒಂದು ಸ್ಥಾನ ಗೆದ್ದಿದೆ, ಈ ಬಾರಿ ಅದನ್ನೂ ಕೂಡ ಕಳೆದುಕೊಳ್ಳಲಿದೆ ಎಂದರು.
ಜಗದೀಶ ಶೆಟ್ಟರ್ ಅವರನ್ನು ಪಕ್ಷ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು, ಈಗ ಕಾಂಗ್ರೆಸ್‍ನಲ್ಲಿ ಎಂಎಲ್‍ಸಿ ಮಾಡಿ ಕೂಡುಸಿದೆ. ಅವರು ಬಿಜೆಪಿಯಲ್ಲಿದ್ದಾಗ ಗೋ ಹತ್ಯೆ, ಮತಾಂತರ ಸೇರಿದಂತೆ ಹಿಂದುಗಳ ರಕ್ಷಣೆಗಾಗಿ ನಿಲ್ಲುತ್ತಿದ್ದರು, ಈಗ ಕಾಂಗ್ರೆಸ್ ಸೇರಿದಾಕ್ಷಣ ಗೋವುಗಳನ್ನು ಕೊಲ್ಲಿರಿ, ಹೆಣ್ಣುಮಕ್ಕಳನ್ನು ಮತಾಂತರಗೊಳಿಸಿ ಎಂದು ಹೇಳುತ್ತಾರಾ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್‍ನವರು ಕೃಷ್ಣಾಮೇಲ್ದಂಡೆ ಯೋಜನೆಯನ್ನು ಎಷ್ಟು ಜನ ಅವಲಂಬಿಸಿದ್ದಾರೆ ಎನ್ನುವುದನ್ನು ಕಾಂಗ್ರೆಸ್‍ನವರಿಗೆ ಗೊತ್ತಿದೆ, ಅವರ ಹಿತಕಾಪಾಡಲು ನೀರಾವರಿ ಯೋಜನೆಗೆ ಸೇರಿದಂತೆ ದೀರ್ಘಾವಧಿ ಯೋಜನೆಗಳಿಗೆ ಆದ್ಯತೆ ನೀಡದೇ ಅತೀ ಜನಪ್ರಿಯ ಯೋಜನೆಗಳಿಗೆ ಬೆನ್ನುಬಿದ್ದು, ರಾಜ್ಯವನ್ನು ಲೂಟಿ ಹೊಡೆಯುವ ಕೆಲಸದಲ್ಲಿ ತೊಡಗಿದೆ ಎಂದು ಆಪಾದಿಸಿದರು. ಈ ಸಂದರ್ಭದಲ್ಲಿ ಸಾಬು ಮಾಶ್ಯಾಳ, ರಾಜು ಬಿರಾದಾರ, ಶಂಕರ ಕುಂಬಾರ ಇದ್ದರು.