ಕಾಂಗ್ರೆಸ್ ಮುಳುಗುವ ಹಡಗು: ರಮೇಶ ಜಿಗಜಿಣಗಿ

(ಸಂಜೆವಾಣಿ ವಾರ್ತೆ)
ಇಂಡಿ; ಸೆ.1:70ವರ್ಷ ಆಳಿದ ಕಾಂಗ್ರೆಸ್ ಕುಟುಂಬ ರಾಜಕಾರಣ ಮಾಡಿದೆ,ಭ್ರಷ್ಠಾಚಾರದ ಬಗ್ಗೆ ಮಾತನಾಡುತ್ತಿರುವ ಕಾಂಗ್ರೆಸ್ ಯಾವ ನಾಯಕರಿಗೂ ನೈತಿಕತೆ ಇಲ್ಲ. ಇವರೇನು ಸಾಜೋಕಾ ಕುಟುಂಬವೇ ದೇಶ ಮಾಡಿಕೊಂಡ ನಿಮಗೆ ಇಂದು ಕಾಂಗ್ರೆಸ್ ಪಕ್ಷ ಮುಳುಗುವ ಹಡಗು ಆಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಕಾಂಗ್ರೆಸ್ ನಾಯಕರ ಮೇಲೆ ಹರಿಹಾಯ್ದರು.
ಪಟ್ಟಣದ ಸಿಂದಗಿ ರಸ್ತೆಯಲ್ಲಿ ಬಿಜೆಪಿ ಕಾರ್ಯಾಲಯ ಉದ್ಘಾಟಿಸಿದ ನಂತರ ಮಾತನಾಡಿದ ಅವರು ದೇಶದಲ್ಲಿ ಕಾಂಗ್ರೆಸ್ ನಾಯಕರು ಯಾರಾಗಬೇಕು ಎಂದು ಖಂದಿಲ್ಲ ಹಚ್ಚಿ ಹುಡುತ್ತಿದ್ದಾರೆ ಹಿರಿಯರೇಲ್ಲ ಒಲ್ಲೆ ಎಂದು ಕೈ ಎತ್ತಿದ್ದಾರೆ ಮತ್ತೆ ಅದೇ ಹುಡುಗನಿಗೆ ಪಟ್ಟಕಟ್ಟುತ್ತಾರೆ . ದೇಶದಲ್ಲಿ ಎಲ್ಲಿಯೂ ಕಾಂಗ್ರೇಸ್ ಪಕ್ಷ ಉಳಿಯುವುದಿಲ್ಲ.
ಹಿಂದೆ ದಲಿತರಿಗೆ ಕುರಿ,ಕೋಣ,ಎಮ್ಮೆ ಸಾಲ ಕೊಟ್ಟು ಮಳ್ಳ ಮಾಡಿದ್ದರು ಎಮ್ಮೆ.ಕುರಿ ಕೊಟ್ಟರೆ ಶ್ರೀಮಂತರಾಗುತ್ತಾರೆಯೇ ? ಗೌಡ್ರ ಮನೆಯಿಂದ ಎಮ್ಮಿ ತಂದು ಮುರುವ ಚುಚ್ಚಿ ಸಾಲ ತಗೊಂದು ಗೌಡ್ರು ಎಮ್ಮೆ ಹೊಡ್ಕೋಂಡು ಮನೆಗೆ ಹೋದ್ರ ದಲಿತರು ಶ್ರೀಮಂತರಾಗುವುದು ಅಸಾಧ್ಯೆ ಎಂದು ಕಾಂಗ್ರೆಸ್ ಸರಕಾರ ವಿರುಧ್ಧ ವೈಂಗ್ಯವಾಡಿದರು.
ರಮೇಶ ಜಿಗಜಿಣಗಿ ಅಪ್ಪಾ, ಅಣ್ಣಾ,ತಮ್ಮ ಎಂದು ರಾಜಕಾರಣ ಮಾಡುತ್ತಾನೆ ಎಂದು ಆರೋಪಿಸುತ್ತಾರೆ . ನನಗೆ ನನ್ನ ಗುರು ಜೆ.ಎಚ್ ಪಟೇಲ. ರಾಮಕೃಷ್ಣ ಹೆಗಡೆಯಂತಹ ಸಂಸ್ಕಾರವಂತರ ಮಾರ್ಗದರ್ಶನವಾಗಿದೆ. ಒರಟು ಮಾತನಾಡಿದರೆ ಜನರು ಮಣ್ಣು ಮುಕ್ಕಿಸುತ್ತಾರೆ ಎಂದು ಹೇಳಿರುವುದರಿಂದ 40 ವರ್ಷದ ಸುಧೀರ್ಘ ರಾಜಕಾರಣದಲ್ಲಿ ಯಾವೋಬ್ಬ ಕಟ್ಟ ಕಡೆಯ ವ್ಯಕ್ತಿಯ ಮನಸ್ಸು ನೋಯಿಸದೆ ನಾನೋಬ್ಬ ದಲಿತ ವ್ಯಕ್ತಿಯಾದರೂ ನನ್ನ ಜನಾಂಗಕ್ಕೆ ದೂರ ಇಟ್ಟು ಅವರು ಕೆಲಸ ಕಾರ್ಯಕ್ಕೆ ಬಂದರೂ ನಿಮ್ಮಂತ ಕಾರ್ಯಕರ್ತರಿಂದ ಕೆಲಸ ಮಾಡಿಸಿದ್ದೇನೆ. ಅವರು ಕೂಡಾ ನನಗೆ ಬೈಯುತ್ತಾರೆ ಕೊನೆಗಳಿಗೆಯಲ್ಲಿ ಅಭಿಮಾನದಿಂದ ನನ್ನ ಜನ ನನಗೆ ಅಪ್ಪಿಕೊಳ್ಳುತ್ತಾರೆ. 7 ವರ್ಷಗಳಿಂದ ನನಗೂ ಮುಗಿಸಬೇಕು ಎಂಬ ಹುನ್ನಾರ ನಡೆದಿದೆ ನಾನು ಯಾವುದೇ ವಾಮ ಮಾರ್ಗದಿಂದ ಹಣ, ಸಂಪತ್ತು ಗಳಿಸಿಲ್ಲ ನನಗೆ ಚುನಾವಣೆಯಲ್ಲಿ ನೈಯಾ ಪೈಸ್ ಖರ್ಚು ಮಾಡದೆ ಆಯ್ಕೆ ಮಾಡುತ್ತೀರಿ ನನಗೆ ಹಣದ ಅವಶ್ಯಕತೆ ಇಲ್ಲ ದೇವರು ನಿಮಂತಹ ಕಾರ್ಯಕರ್ತರು ನನ್ನೋಂದಿಗೆ ಇದ್ದೀರುವುದರಿಂದ ಆತ್ಮಸ್ರ್ಥೆದಿಂದ ರಜಕೀಯ ಮಾಡುತ್ತಿರುವೆ.
ಇಂದು ಕೇಂದ್ರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಗತ್ತಿನ ನಂ1 ಇಂದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಶ್ವದ ದೇಶದ ನಾಯಕರು ಭಾರತದ ಕಡೆ ಮುಖ ಮಾಡುತ್ತಿದ್ದಾರೆ. ಕೋವಿಡ್ -19 ಸಂಧರ್ಬದಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿ ಇರದೆ ಬೇರೆ ಪಕ್ಷ ಏನಾದರೂ ಇದ್ದರೆ ಹಾದಿ ಬೀದಿಯಲ್ಲಿ ಹೆಣ ಬೀಳುತ್ತಿದ್ದವು ತನ್ನ ಜೀವ ಒತ್ತೆ ಇಟ್ಟು ದೇಶದ ಜನರನ್ನು ಉಳಿಸಿದ್ದಾರೆ. 2023ರ ಚುನಾವಣೆ ಸಜ್ಜಾಗಿ ಜಾತಿ ಜಾತಿ ಮಾಡಬ್ಯಾಡರೀ ಕೈಮುಗಿತ್ತೀನಿ ಒಂದೇ ಜಾತಿಯಿಂದ ಆಯ್ಕೆ ಅಸಾಧ್ಯೆ.ಪಕ್ಷಕ್ಕಾಗಿ ಒಗ್ಗಟಿನಿಂದ ದುಡಿದು ಮುಂಬರುವ ವಿಧಾನಸಭೆ, ಸ್ಥಳೀಯ ಚುನಾವಣೆಯಲ್ಲಿ ಸೂರ್ಯಚಂದ್ರ ಎಷ್ಟು ಸತ್ಯ ವಿಧಾನಸೌಧಾ 3 ನೇ ಮಹಡಿ ಮತ್ತೋಮ್ಮೆ ಹಿಡಿಯುವುದು ಖಚಿತ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ಪಾಟೀಲ, ಕೋಚಬಾಳ ಮಾತನಾಡಿ ಕಾರ್ಯಕರ್ತರು ಕೇಂದ್ರ,ರಜ್ಯಮಟ್ಟದ ಯೋಜನೆಗಳನ್ನು ಸಾಮನ್ಯ ಹಾಗೂ ಭೂತ ಮಟ್ಟದಲ್ಲಿ ಮನವರಿಕೆ ಮಾಡಬೇಕು. ಕಾಂಗ್ರೇಸ್ ಪಕ್ಷದ ಕೇಂದ್ರ ನಾಯಕ ಅಪ್ರಬುದ್ಧ ಹೀಗಾಗಿ ಪಕ್ಷ ಮುಳುಗುತ್ತಿದ್ದೆ. ಬಿಜೆಪಿ ಪಕ್ಷ ಬಲಾಢ್ಯವಾಗಿದೆ.ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ಅವಧಿಯಲ್ಲಿ ದೇಶ ವಿಶ್ವಗುರುವಾಗಿದೆ ಎಂದರು. ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ, ಕಾಸುಗೌಡ ಬಿರಾದಾರ, ಶೀಲವಂತ ಉಮರಾಣಿ, ಶಂಕರಗೌಡ ಪಾಟೀಲ . ರವಿಕಾಂತ ಬಗಲಿ, ಅನೀಲ ಜಮಾದಾರ, ಸಿದ್ದಲಿಂಗ ಹಂಜಗಿ, ಹಣಮಂತರಾಯಗೌಡ ಪಾಟೀಲ,ರಾಜಕುಮಾರ ಸಗಾಯಿ, ಭೀಮಸಿಂಗ ರಾಠೋಡ, ಬಸವರಾಜ ಹೂಗಾರ, ಯಲ್ಲಪ್ಪ ಹದರಿ, ವಿಜಯಲಕ್ಷ್ಮೀ ರೂಗಿಮಠ ವೇದಿಕೆಯಲ್ಲಿದ್ದರು.
ಅನೀಲಗೌಡ ಬಿರಾದಾರ,ಬುದ್ದುಗೌಡ ಪಾಟೀಲ,ಬಿ.ಎಸ್ ಪಾಟೀಲ,ವೇಂಟೆಶ ಕುಲಕರ್ಣಿ, Éೂೀಕಗೌಡ ಬಿರಾದಾರ, ಸಂಜೀವ ದಶವಂತ, ಮಲ್ಲು ವಾಲೀಕಾರ,ವಿಜಯಕುಮಾರ ಮೂರಮನ್, ಮಲ್ಲಯ್ಯಾ ಪತ್ರಿಮಠ, ರಮೇಶ ಧರೇನವರ ಸೇರಿದಂತೆ ನೂರಾರು ಬಿಜೆಪಿ ಕಾರ್ಯರ್ಕರು ಗಣ್ಯರು ಉಪಸ್ಥಿತರಿದ್ದರು.

ಪಕ್ಷದ ದೂರದೃಷ್ಠಿ ಇಟ್ಟುಕೊಂಡು ಶ್ಯಾಪ್ರಸಾದ ಮುಖರ್ಜಿ, ದೀನದಯಾಳ ಶರ್ಮ ಪಕ್ಷ ಕಟ್ಟಿದ್ದಾರೆ. ಒಬ್ಬ ವ್ಯಕ್ತಿಯಿಂದ ಪಕ್ಷವಲ್ಲ ವ್ಯಕ್ತಿಗಿಂತ ಪಕ್ಷ ಶ್ರೇಷ್ಠ ಆದ್ದರಿಂದ ಬಿಜೆಪಿ ಪಕ್ಷ ಇಡೀ ದೇಶ ವ್ಯಾಪಿಸಿದೆ. ಬರುವ ಚುನಾವಣೆ ಇಂಡಿ ಮತಕ್ಷೇತ್ರದಲ್ಲಿ ಬಿಜೆಪಿ ಭಾವುಟ ಹಾರಲಿ.
ಮಲ್ಲಿಕಾರ್ಜುನ ಕೀವುಡೆ, ಮಂಡಲ ಅಧ್ಯಕ್ಷ