ಕಾಂಗ್ರೆಸ್ ಮುಖಂಡ ಸುಬ್ಬರಾಯಡು ವಿರುದ್ದದ ಆರೋಪ ಸುಳ್ಳು: ಬೋಯಪಾಟಿ ವಿಷ್ಣುವರ್ಧನ

(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.24: 34ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯೆ  ರಾಜೇಶ್ವರಿ ಅವರ ಪತಿ, ಕಾಂಗ್ರೆಸ್ ಪಕ್ಷದ ಮುಖಂಡ ಸುಬ್ಬರಾಯುಡು ಅವರ ಮೇಲೆ  ಸರ್ಕಾರಿ‌ ನಿವೇಶನದಲ್ಲಿನ ಮಣ್ಣನ್ನು ಕೊಳ್ಳೆ ಹೊಡೆದಿದ್ದಾರೆ ಎಂದು ಮಾಡಿರುವ ಆರೋಪ ಸುಳ್ಳು ಎಂದು ಬಳ್ಳಾರಿ ನಗರ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಬೋಯಪಾಟಿ ವಿಷ್ಣುವರ್ಧನ ಹೇಳಿಕೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ನಿಮ್ಮ‌ ಸಂಜೆವಾಣಿ ಪತ್ರಿಕೆಯಲ್ಲಿ ನಿನ್ನೆ  ಕರಿಮಾರಮ್ಮ ಕಾಲೊನಿ ಹತ್ತಿರ ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡುತ್ತಿರುವುದು ನಮ್ಮ ಕಾರ್ಪೋರೇಟರ್ ಎಂ ರಾಜೇಶ್ವರಿ  ಅವರ ಪತಿ ಸುಬ್ಬರಾಯುಡು ಎಂದು ಆರೋಪಿಸಲಾಗಿದೆ.
ಆದರೆ ಈ ವಿಷಯ ಕಾರ್ಪೋರೇಟರ್ ಎಂ ರಾಜೇಶ್ವರಿ  ಹಾಗು ಅವರ ಪತಿ ಸುಬ್ಬರಾಯುಡು ಅವರ ಗಮನಕ್ಕೆ ಬಂದಿರುವುದಿಲ್ಲ ಹಾಗೂ ಅವರು ಯಾವುದೇ ಈ ರೀತಿಯ  ಚಟುವಟಿಕೆಗಳಿಗೆ ಅನುಮತಿ ನೀಡಿರುವುದಿಲ್ಲ.
ಈ ತರಹದ ಆರೋಪದ ವರದಿ ನೋಡಿ ಅವರಿಗೆ ಆಘಾತ ಉಂಟಾಗಿದೆ. ನಮ್ಮ ಕಾಂಗ್ರೆಸ್ ಪಕ್ಷದಿಂದ ಗೆದ್ದ  ಎಂ. ರಾಜೇಶ್ವರಿ ಹಾಗೂ ಅವರ ಪತಿ ಕಾಂಗ್ರೆಸ್ ಮುಖಂಡ ಸುಬ್ಬರಾಯುಡು ಅವರ ಮೇಲೆ ಯಾರೋ ವಿನಾಕಾರಣ ಪಿತೂರಿ ನಡೆಸಿ ದೂರು ಸಲ್ಲಿಸಿ ಅವರ ರಾಜಕೀಯ ಬೆಳವಣಿಗೆಗೆ ಧಕ್ಕೆ ಉಂಟು ಮಾಡುವ ಹುನ್ನಾರ ನಡೆದಿದೆ. ನಮ್ಮ ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷ. ಯಾವುದೇ ರೀತಿಯ ಅಕ್ರಮ ವ್ಯವಹಾರಗಳಲ್ಲಿ ಪಾಲ್ಗೊಳ್ಳುವುದಿಲ್ಲ. ನಮ್ಮ ಪಕ್ಷದ ನಾಯಕರುಗಳ ಹೆಸರು ಹೇಳಿ ದರೋಡೆಕೋರರು ಈ ತರಹದ ಅಕ್ರಮ ಚಟುವಟಿಕೆಗಳು ಮಾಡಿರಬಹುದು. ಇದನ್ನು ತೀವ್ರವಾಗಿ ನಮ್ಮ ಪಕ್ಷ ಖಂಡಿಸುತ್ತಿದೆ. ಮುಂಬರುವ ದಿನಗಳಲ್ಲಿ ಇಂತಹ ಅವ್ಯವಹಾರಗಳು ನಮ್ಮ ವಾರ್ಡಿನಲ್ಲಿ ಕಂಡುಬಂದಲ್ಲಿ ನಮ್ಮ ಪಕ್ಷದಿಂದ ನಾವೇ  ಕಾನೂನು ರೀತಿ ಕ್ರಮ ಕೈಗೊಳ್ಳಲು  ಮುಂದಾಗುತ್ತೇವೆ ಎಂದು ಹೇಳಿದ್ದಾರೆ.