
ರಾಯಚೂರು.ನ.೧೭- ಕಾಂಗ್ರೆಸ್ ಹಿರಿಯ ಮುಖಂಡರಾದ ಜಿ.ಶಿವಮೂರ್ತಿ ಅವರ ಜನ್ಮದಿನದ ನಿಮಿತ್ಯ ಅವರ ಅಭಿಮಾನಿ ಬಳಗದಿಂದ ಓಂ ಸಾಯಿ ಮಂದಿರದಲ್ಲಿ ಆಯೋಜಿಸಿದ್ದ ಅನ್ನ ಸಂತರ್ಪಣಾ ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್‌ಎಸ್ ಬೋಸರಾಜು ಅವರು ಭಾಗವಹಿಸಿ ಅನ್ನ ಸಂತರ್ಪಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಾಯಚೂರಿನ ಸಾಯಿಮಂದಿರದಲ್ಲಿ ವಿಷೇಶ ಪೂಜೆ ಸಲ್ಲಿಸಿ ನಂತರ ಕಾಂಗ್ರೆಸ್ ಮುಖಂಡರಾದ ಜಿ.ಶಿವಮೂರ್ತಿ ಅವರಿಗೆ ಜನ್ಮದಿನದ ಶುಭ ಕೋರಿದರು.
ಈ ಸಂದರ್ಭದಲ್ಲಿ ಶಿರಡಿ ಸಾಯಿ ಬಾಬಾ ಚಾರಿಟೆಬಲ್ ಟ್ರಸ್ಟ್ ಹಾಗೂ ಜಿ.ಶಿವಮೂರ್ತಿ ಅಭಿಮಾನಿ ಬಳಗದಿಂದ ಸಚಿವರಿಗೆ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಹಿರಿಯರಾದ ಜಯಣ್ಣ, ಕೆ.ಶಾಂತಪ್ಪ, ರುದ್ರಪ್ಪ ಅಂಗಡಿ, ಸಾಯಿ ಧ್ಯಾನಮಂದಿರ ಟ್ರಸ್ಟ್‌ನ ಅದ್ಯಕ್ಷರಾದ ಸಾಯಿಕಿರಣ ಆದೋನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.