ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್‍ರಿಂದ ನೆರವಿನ ಹಸ್ತ

ವಿಜಯಪುರ, ಮೇ.02-ನಗರದಲ್ಲಿ ವಾಸವಾಗಿರುವ ರಾಜಾಸ್ತಾನದ ಬಡ ಕುಟುಂಬದವರಿಗೆ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಶನಿವಾರ ಆಹಾರ ಧಾನ್ಯ ವಿತರಿಸಿದರು.
ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಘೋಷಿಸಿರುವ ಲಾಕ್‍ಡೌನ್‍ನಿಂದಾಗಿ ಬಡವರು ತತ್ತರಿಸಿ ಹೋಗಿದ್ದಾರೆ. ದುಡಿಯಲು ಕೆಲಸವಿಲ್ಲದೆ ವಲಸೆ ಬಂದಿರುವ ರಾಜಾಸ್ತಾನಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಆಹಾರ ಧಾನ್ಯ ವಿತರಿಸಲಾಗಿದೆ ಎಂದು ತಿಳಿಸಿದರು.
ಆಧಾರ ಕಾರ್ಡ್‍ಗಳನ್ನು ಹೊಂದಿರುವ ರಾಜಾಸ್ತಾನಿಗಳಿಗೆ ಕೊವಿಡ್ ಲಸಿಕೆ ಹಾಕಿಸುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದ ಅವರು, ಬರುವ ದಿನಗಳಲ್ಲಿ ಇನ್ನಷ್ಟು ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ನೆರವಿಗೆ ಮನವಿ: ಲಾಕ್‍ಡೌನ್ ಸಮಯದಲ್ಲಿ ಸಂಕಷ್ಟದಲ್ಲಿರುವ ಕಡುಬಡವರನ್ನು, ಕೂಲಿಕಾರರನ್ನು, ನಿರಾಶ್ರಿತರನ್ನು, ಗುರುತಿಸಿ ಸಹಾಯ ಮಾಡುವಲ್ಲಿ ನಗರದ ಶ್ರೀಮಂತರು ಮುಂದಾಗಬೇಕು ಎಂದು ಅವರು ಮನವಿ ಮಾಡಿದರು.
ಲಾಕ್‍ಡೌನ್‍ನಿಂದಾಗಿ ಬಡವರು, ನಿತ್ಯ ದುಡಿಯುವವರಿಗೆ ಜೀವನ ನಡೆಸುವುದು ಕಷ್ಟವಾಗಿದೆ. ಆದ್ದರಿಂದ ಇಂತಹ ಕಷ್ಟದ ಸಮಯದಲ್ಲಿ ನಗರದ ಶ್ರೀಮಂತರು ತಮ್ಮ ಕೈಲಾದಷ್ಟು ಸಹಾಯ ಮಾಡಿ ಬಡವರಿಗೆ ನೆರವು ನೀಡಬೇಕು ಎಂದು ಕೋರಿದರು.