ಕಾಂಗ್ರೆಸ್ ಮುಖಂಡರ ಆರೋಪಕ್ಕೆ ಗಡಂತಿ ಆಕ್ರೋಶ

ಚಿಂಚೋಳಿ,ಮೇ.30- ಕಾಂಗ್ರೆಸ್ ಪಕ್ಷದ ಕೆಲ ನಾಯಕರು ಚಿಂಚೋಳಿ ಶಾಸಕ ಡಾ. ಅವಿನಾಶ ಜಾಧವ ಅವರ ಬಗ್ಗೆ ಇಲ್ಲದ ಸಲ್ಲದ ಸುಳ್ಳು ಆರೋಪವನ್ನು ಮಾಡುತ್ತಿರವುದು ಖಂಡನೀಯ ಎಂದು ಬಿಜೆಪಿ ತಾಲೂಕು ಅಧ್ಯಕ್ಷರಾದ ಸಂತೋಷ್ ಗಡಂತಿ ಅವರು ಪ್ರತಿಕ್ರಿಯಿಸಿದ್ದಾರೆ.
ಶಾಸಕರಾದ ಡಾ. ಅವಿನಾಶ ಜಾಧವ ಅವರು ಕಾಣೆ ಯಾಗಿದ್ದಾರೆ ಮತ್ತು ಅವರ ಕೊಡುಗೆ ಏನು ಎಂದು ಕೇಳುವ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಶಾಸಕರು ಕೈಗೊಂಡಿರುವ ಸೇವೆ ಮತ್ತು ಕೆಲಸಗಳು ಕಾಣುವುದಿಲ್ಲ ಕೇವಲ ರಾಜಕೀಯ ಮಾಡುತ್ತ ಇಲ್ಲ ಸಲ್ಲದ ಸುಳ್ಳು ಆರೋಪಗಳನ್ನು ಮಾಡುವುದರಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಅವರು ಹರಿಹಾಯ್ದರು.
ಕೋವಿಡ್ 19 ಸೋಂಕು ತಡೆಗಟ್ಟಲು ಕೈಗೊಳ್ಳುವತ್ತಿರುವ ಕ್ರಮ, ಸೋಂಕಿತರಿಗೆ ಸಕಾಲದಲ್ಲಿ ಚಿಕಿತ್ಸೆ ಆಗೂ ಔಷಧಗಳ ಕೊರತೆಯಾಗದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಅವರು ಕೈಗೊಳ್ಳುತ್ತಿರುವುದು ಜನಸಾಮಾನ್ಯರಿಗೆ ಕೊತ್ತಿದೆ ಎಂದರು.
ತಾಲೂಕಿನ ಜನರು ಕೊರೊನಾ ಸೋಂಕು ದೃಢ ಪಟ್ಟಲ್ಲಿ ಅವರಿಗೆ ಇಲ್ಲಿಯೇ ಚಿಕಿತ್ಸೆ ಕೊಡಿಸುತ್ತಿದ್ದಾರೆ, ಇದಕ್ಕಾಗಿ ಇಲ್ಲಿನ ಶಾಸಕರು ಚಿಂಚೋಳಿ ಆಸ್ಪತ್ರೆಯಲ್ಲಿ ಆಕ್ಸಿಜನ್ ವ್ಯವಸ್ಥೆ ಮಾಡಿ ತಾಲೂಕಿನ ಜನರು ಕಲಬುರ್ಗಿ ಹೋಗದಂತೆ ಅನುವು ಮಾಡಿಕೊಟ್ಟಿದ್ದಾರೆ.
ಚಿಂಚೋಳಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದ್ದು ಇದು ಕಾಂಗ್ರೆಸ್ ಪಕ್ಷದ ನಾಯಕರು ನಮ್ಮ ಶಾಸಕರ ಮಾಡಿದ ಕೆಲಸವು ಅವರು ಅರ್ಥಿ ಕೊಳ್ಳಬೇಕು ಮತ್ತು ಕಾಂಗ್ರೆಸ್ ಪಕ್ಷದ ರಾಷ್ಟ್ರದಲ್ಲಿ ಮೂಲೆಗುಂಪಾಗಿ ಹೋಗಿದೆ ರಾಜ್ಯದಲ್ಲಿಯೂ ಮುಂಬರುವ ಜಿಲ್ಲಾ ಪಂಚಾಯತ್ ಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಅಸ್ಥಿತ್ವ ಕಳೆದುಕೊಳ್ಳಲಿದೆ ಎಂದರು.
ರಾಜಕೀಯ ಮಾಡಬೇಕಾದ ಸರಿಯಾದ ಸಮಯ ಮತ್ತು ಸಂದರ್ಭ ಈಗಿಲ್ಲ, ಕೊರೊನ ಸೋಂಕು ಮುಗಿದ ನಂತರ ಎಷ್ಟು ಬೇಕು ಕಾಂಗ್ರೆಸ್ ಪಕ್ಷದವರು ಅಷ್ಟು ರಾಜಕೀಯ ಮಾಡಲಿ ನಾವು ಮಾಡೋಕು ಸಿದ್ದರಿದ್ದೇವೆ ಎಂದರು.
ಚಿಂಚೋಳಿ ತಾಲೂಕಿನ ಜನರು ಕೊರೋನ ಸೋಂಕು ಭಯಭೀತರಾಗಿದ್ದಾರೆ ಈ ಸಂದರ್ಭದಲ್ಲಿ ಚಿಂಚೋಳಿ ತಾಲೂಕಿನಲ್ಲಿ ಕೊರೋನ ಸೋಂಕು ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಏನಿದೆ ಅವರು ಅರ್ಥ ಅರ್ಥಮಾಡಿಕೊಳ್ಳಬೇಕು ಎಂದು ಸಂತೋಷ್ ಗಡಂತಿ ಅವರು ಹೇಳಿದರು.