ಕಾಂಗ್ರೆಸ್ ಮುಖಂಡರಿಂದ ಶಾಸಕರಿಗೆ ಸನ್ಮಾನ

ಸಿರವಾರ,ಜೂ.೦೧-
ಪಟ್ಟಣದ ಕಾಂಗ್ರೆಸ್ ಮುಖಂಡರು ನೂತನವಾಗಿ ವಿಧಾನಸಭೆಗೆ ಮಾನ್ವಿ ಕ್ಷೇತ್ರದಿಂದ ಆಯ್ಕೆಯಾದ ಜಿ.ಹಂಪಯ್ಯ ನಾಯಕ ಅವರಿಗೆ ಅಭಿನಂದಿಸಿದರು.
ಪಟ್ಟಣದ ಮೂಲಭೂತ ಸೌಕರ್ಯಗಳು, ಕುಡಿಯುವ ನೀರು, ಚರಂಡಿ, ವಿದ್ಯುತ್ ದೀಪ, ರಸ್ತೆಗಳು, ರೈತರ ಸಮಸ್ಯೆಗಳಿಗೆ ಪರಿಹಾರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಪಟ್ಟಣ ಪಂಚಾಯತ್ ಸದಸ್ಯ ವೈ.ಭೂಪನಗೌಡ, ಗಣೇಕಲ್ ವೀರೇಶ, ಪತ್ತಾರ ನಾಗಪ್ಪ, ಮಲ್ಲಿಕಾರ್ಜುನ ಹೂಗಾರ್ ಇದ್ದರು.