ಕಾಂಗ್ರೆಸ್ ಮುಖಂಡರಿಂದ ಗೋವಿಂದಗೌಡರಿಗೆ ಅಭಿನಂದನೆ

ಕೆ.ಜಿ.ಎಫ್,ಮೇ ೧೬:ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕಿ ರೂಪಕಲಾಶಶಿಧರ್ ದಾಖಲೆಯ ಗೆಲುವಿನ ಪ್ರಮುಖ ರೂವಾರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರಿಗೆ ಕೆಜಿಎಫ್ ಕ್ಷೇತ್ರದ ಪ್ರಮುಖ ಕಾಂಗ್ರೆಸ್ ಮುಖಂಡರಿಂದ ಭಾರಿ ಹೂವಿನ ಹಾರಗಳ ಮೂಲಕ ಅಭಿನಂದಿಸಿದರು.
ನಗರಸಭೆ ಮಾಜಿ ಅಧ್ಯಕ್ಷರಾದ ವಳ್ಳಲ್ ಮುನಿಸ್ವಾಮಿ, ನಗರಸಭೆ ಸದಸ್ಯರಾದ ರಮೇಶ್ ಜೈನ್, ಶಾಲಿನಿ ನಂದಕುಮಾರ್, ಶ್ರೀನಿವಾಸ್ ಹಾಗೂ ಕೆಜಿಎಫ್‌ನ ಅನೇಕ ಮುಖಂಡರು ಬ್ಯಾಲಹಳ್ಳಿ ಗೋವಿಂದಗೌಡರಿಗೆ ಶಾಸಕಿ ರೂಪಕಲಾಶಶಿಧರ್ ೮೧ ಸಾವಿರ ದಾಖಲೆ ಮತಗಳನ್ನು ಪಡೆದುಕೊಂಡು, ಬಿಜೆಪಿ ಅಭ್ಯರ್ಥಿ ಅಶ್ವಿನಿ ಸಂಪಂಗಿ ವಿರುದ್ದ ೫೦ ಸಾವಿರ ದಾಖಲೆ ಮತಗಳ ಅಂತರದಿಂದ ಗೆಲವಿನ ಹಿನ್ನಲೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದೆಗೌಡರ ಪಾತ್ರ ಬಹಳ ಪ್ರಮುಖವಾಗಿತ್ತು ಎಂದು ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ಹೇಳಿದರು.
ಶಾಸಕಿ ರೂಪಕಲಾಶಶಿಧರ್ ಕೆಜಿಎಫ್ ನಗರದ ವಿಜಯೋತ್ಸವದಲ್ಲಿ ಭಾಗವಹಿಸಿ ನನ್ನ ಗೆಲವಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡರ ಸಹಕಾರದಿಂದ ಅತ್ಯದಿಕ ಮತಗಳನ್ನು ಪಡೆಯಲು ಸಾಧ್ಯವಾಯಿತು.ಮಹಿಳಯರ ಬಗ್ಗೆ ಅವರಿಗಿದ್ದ ಕಾಳಜಿ ಮತ್ತು ಡಿಸಿಸಿ ಬ್ಯಾಂಕ್‌ನಿಂದ ಸ್ತ್ರೀ ಸಂಘಗಳಿಗೆ ಸಾಲ ನೀಡಿ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ಬರಲು ಕಾರಣಿಬೂತಿಯಾಗಿದ್ದರು, ತಾಲೂಕಿನ ಅತಿ ಸಣ್ಣ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನೀಡುವ ಮೂಲಕ ಸಾವಿರಾರು ರೈತರ ಬೇಸಾಯಕ್ಕೆ ನೆರವು ನೀಡಿದ್ದರು, ಈ ಹಿನ್ನಲೆಯಲ್ಲಿ ಗೋವಿಂದಗೌಡರಿಗೆ ಶಾಸಕಿ ರೂಪಕಲಾಶಶಿಧರ್ ಧನ್ಯವಾದಗಳನ್ನು ತಿಳಿಸಿದರು. ಮಾರಿಕುಪ್ಪಂ ಗ್ರಾಪಂ, ಅಧ್ಯಕ್ಷೆ ಜಾಲಜಾಕ್ಷಿಶಿವು, ವಿಜಯ್, ಪುರುಷೋತ್ತಮ್‌ರೆಡ್ಡಿ, ಮಾಜಿ ಗ್ರಾಪಂ ಅಧ್ಯಕ್ಷರಾದ ಸುಬ್ಬಾರೆಡ್ಡಿ, ನಾರಾಯಣಪ್ಪ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಗೋವಿಂದೇಗೌಡರನ್ನು ಸನ್ಮಾಸಿದರು.
ವಿಜಯ್ ಮಾತನಾಡಿ, ಶಾಸಕರ ದಾಖಲೆಯ ಗೆಲವಿಗೆ ಚುನಾವಣೆಯಲ್ಲಿ ರಾತ್ರಿ ಹಗಲು ಎನ್ನದೆ ಗೋವಿಂದೇಗೌಡರ ಶ್ರಮ ಅಪಾರವಾಗಿತ್ತು, ಕಾಂಗ್ರೆಸ್ ಕಾರ್‍ಯಕರ್ತರನ್ನು ಒಗ್ಗೂಡಿಸಿದ ಹಿನ್ನಲೆಯಲ್ಲಿ ದಾಖಲೆಯ ಗೆಲವು ಸಿಕ್ಕಿದೆ, ಈ ಗೆಲುವಿನಿಂದ ಕೆಜಿಎಫ್ ಕ್ಷೇತ್ರದ ಅಭಿವೃದ್ದಿ ಇನ್ನಷ್ಟು ವೇಗಪಡೆದುಕೊಳ್ಳಲು ಗೋವಿಂದಗೌಡರ ಸಹಕಾರ ಅಗತ್ಯವಿದೆ ಎಂದರು.