ಕಾಂಗ್ರೆಸ್ ಮುಕ್ತ ಭಾರತ ಬಿಜೆಪಿ ಸಂಕಲ್ಪ ಸಾಕಾರಗೊಳಿಸಿ: ಬಿಎಸ್‍ವೈ

ಆಳಂದ:ಮಾ.7: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಹೇಳಿಕೊಂಡು ಚುನಾವಣೆಯಲ್ಲಿ ಹೆಚ್ಚಿನ ಮತಗಳನ್ನು ಪಡೆದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣದ ಬಿಜೆಪಿ ಸಂಕಲ್ಪವನ್ನು ಸಹಕಾರಗೊಳಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.

ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ಆಯೋಜಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಕಾಂಗ್ರೆಸ್ ಮುಕ್ತ ಭಾರತ ಆಗಬೇಕು. ಇದು ಜನರಿಂದಲೇ ಸಾಧ್ಯವಿದೆ. ನರೇಂದ್ರ ಮೋದಿ ಅವರ ಕಾರ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು. 30ರಿಂದ 40 ಸಾವಿರ ಅಂತರದಿಂದ ಅಭ್ಯರ್ಥಿಯನ್ನು ಗೆಲಿಸುವ ಕಾರ್ಯಸಾಅಗಲಿ ಕಲ್ಯಾಣ ಕರ್ನಾಟ ಪ್ರದೇಶದಲ್ಲಿ 40 ಸ್ಥಾನಗಳಲ್ಲಿ 30 ಸ್ಥಾನಗಳು ಗೆಲ್ಲಿಸಿಕೊಡಿ, ನೆರೆ ಹೊರೆಯವರನ್ನು ಭೇಟಿ ಮಾಡಿ ಪ್ರಧಾನಿ ಮೋದಿ ಅವರ ಜನಪರ ಕಾರ್ಯವನ್ನು ಮನವರಿಕೆ ಮಾಡಿಕೊಟ್ಟು ಗೆಲುವಿಗೆ ಶ್ರಮಿಸಿದರೆ ಯಾತ್ರೆಯ ಸಾರ್ಥಕವಾಗಲಿದೆ ಎಂದರು. ಪಕ್ಷಕ್ಕೆ ಕಾರ್ಯಕರ್ತರೆ ಆಸ್ತಿಯಾಗಿದ್ದಾರೆ. ಕಾಂಗ್ರೆಸ್‍ಗೆ ರಾಜ್ಯದ ಜನ ಚುನಾವಣೆಯಲ್ಲಿ ತಕ್ಕ ಪಾಠಕಲಿಸಲಿದ್ದಾರೆ. ಪರಿಶಿಷ್ಟ ಜನಾಂಗದ ಓರ್ವ ಮಹಿಳಾ ರಾಷ್ಟ್ರಪತಿಯನ್ನಾಗಿ ದ್ರೌಪದಿ ಮುರ್ಮು ಅವನ್ನು ಮಾಡಿದ್ದು ಮೋದಿ ಅವರ ಇಂಥ ಹತ್ತು ಹಲವಾರು ಸಾಧನೆಗಳಾಗಿವೆ ಎಂದರು. ಕಳೆದ 8 ವರ್ಷದಲ್ಲಿ ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಅವಿರತ ಶ್ರಮವಹಿಸುವ ಪ್ರಧಾನಿಯಾಗಿದ್ದಾರೆ. ಇದಕ್ಕಾಗಿ ಪುಷ್ಟಿಯಾಗಿ ಕಾರ್ಯಕರ್ತರು ಕಂಕಣಬದ್ಧರಾಗಿ ಬರುವ ಚುನಾವಣೆಯಲ್ಲಿ ಸಮಯ ಕೊಟ್ಟು ಆಶೀವಾರ್ದಿಸಿದರೆ ಮತ್ತೆ ಪಕ್ಷವು ಅಧಿಕಾರಕ್ಕೆ ಬಂದು ರೈತಪರ ಜನಪರ ಬಜೆಟ್ ನೀಡಲಾಗುವುದು ಎಂದರು.

ವೇದಿಕೆಯಲ್ಲಿ ಮಾಳಿ ಸಮಾಜ, ಕುರುಬ ಸಮಾಜದಿಂದ ಬಿಎಸ್‍ವೈಗೆ ಸನ್ಮಾನಿಸಲಾಯಿತು.