ಕಾಂಗ್ರೆಸ್ ಬೆಂಬಲಿಸಿ ಸಿದ್ಧು ಶಕ್ತಿ ಹೆಚ್ಚಿಸಿ

ಸಂಜೆವಾಣಿ ನ್ಯೂಸ್
ಮೈಸೂರು: ಏ.17:- ಇದು ಬಹುಮುಖ್ಯವಾದ ಚುನಾವಣೆ ಆಗಿರುವುದರಿಂದ ನಾಲ್ಕು ಜಿಲ್ಲೆಗಳಲ್ಲಿ ಸಮುದಾಯ ಮಾತ್ರವಲ್ಲದೆ ಇತರರಿಗೂ ಕಾಂಗ್ರೆಸ್ ಬೆಂಬಲಿಸಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಅವರ ಶಕ್ತಿ ಹೆಚ್ಚಿಸಿ ಎಂದು ಶಾಸಕ ಡಿ.ರವಿಶಂಕರ್ ಕರೆ ನೀಡಿದರು.
ಮೈಸೂರಿನ ಸಿದ್ಶಾರ್ಥನಗರದ ಕನಕಭವನದಲ್ಲಿ ಆಯೋಜಿಸಿದ್ದ ಮೈಸೂರು, ಕೊಡಗು, ಚಾಮರಾಜನಗರ, ಮಂಡ್ಯ ಜಿಲ್ಲೆಯ ಕುರುಬ ಸಮುದಾಯದ ಜಾಗೃತ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. 2013ರವರೆಗೂ ನಮ್ಮ ಸಮುದಾಯದ ಸ್ಥಿತಿ ಹೇಗಿತ್ತು. ಅನಂತರ ಸಿಎಂ ಸಿದ್ದರಾಮಯ್ಯ ಅವಧಿಯಲ್ಲಿ ಎಷ್ಟೆಲ್ಲಾ ಅಭಿಕಾರ್ಯ ಆಗಿವೆ ಎಂಬುದನ್ನು ಅರಿತುಕೊಳ್ಳಬೇಕಿದೆ. 257 ಕೋಟಿ ರೂ.ಗಳಲ್ಲಿ ಸಮುದಾಯಭವನ, ವಿದ್ಯಾರ್ಥಿ ನಿಲಯ ಹಾಗೂ ಸಮುದಾಯದ ಮಠದ ಅಭಿವೃದ್ಧಿಗೆ ಸಿಎಂ ನೀಡಿದ್ದಾರೆ. ಇದೆಲ್ಲವನ್ನೂ ಸಮುದಾಯ ಸ್ಮರಿಸಿ ಸಿಎಂಗೆ ಚುನಾವಣೆಯಲ್ಲಿ ಶಕ್ತಿ ತುಂಬ ಬೇಕಿದೆ ಎಂದು ಹೇಳಿದರು.
ಇನ್ನೂ ಕೇವಲ ಕುರುಬ ಸಮುದಾಯ ಮಾತ್ರವಲ್ಲದೆ ಇತರೆ ಸಮುದಾಯಗಳಿಗೂ ಕಾಂಗ್ರೆಸ್ ಗೆ ಮತ ನೀಡುವಂತೆ ಪ್ರೇರೆಪಿಸಬೇಕು. ಯಾಕೆಂದರೆ ಬಿಜೆಪಿಯಲ್ಲಿ ಸಮುದಾಯದ ಒಬ್ಬರಿಗೂ ಲೋಕಸಭೆಯಲ್ಲಿ ಟಿಕೇಟ್ ಕೊಡದೇ ಕಡಗಣಿಸಿದ್ದಾರೆ. ಅಂತೆಯೇ ಗ್ಯಾರಂಟಿಯ ವಿರೋಧಿಗಳಾಗಿ ಕೆಲಸ ಮಾಡಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಜಾತ್ಯಾತೀತ ವಾಗಿ ಪ್ರತಿ ಕುಟುಂಬಕ್ಕೂ ಯೋಜನೆ ತಲುಪಿಸುವ ನಿಟ್ಟಿನಲ್ಲಿ ಐದು ಗ್ಯಾರಂಟಿಗಳನ್ನು ನೀಡಿ ಇಂತಹ ಬರ ಪರಿಸ್ಥಿತಿಯಲ್ಲೂ ಜನತೆಯನ್ನು ಸಶಕ್ತರನ್ನಾಗಿಸಿದ್ದಾರೆ.ಇದೆಲ್ಲವನ್ನೂ ಜನತೆ ಮುಂದಿಟ್ಟು ಕಾಂಗ್ರೆಸ್ ಗೆ ಮತ ಹಾಕುವ ಅನಿವಾರ್ಯತೆ ತಿಳಿಸಿಕೊಡಿ ಎಂದರು.
ಮೈಸೂರಿನ ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಶಿವಣ್ಣ ಮಾತನಾಡಿ,ಶೋಷಿತ, ಹಿಂದುಳಿದ ವರ್ಗಕ್ಕೆ ಇದು ಅತ್ಯಂತ ಸೂಕ್ಷ್ಮ ಚುನಾವಣೆ ಆಗಿದೆ. ಇದು ಭವಿಷ್ಯದ ಚುನಾವಣೆ ಆಗಿದೆ. ಸಿದ್ದರಾಮಯ್ಯನವರ ಬಗ್ಗೆ ಅನ್ಯರ ಮಾತು ನೋಡಿದ್ದಿರಿ. ಹೀಗಾಗಿ ದಲಿತರು, ಶೋಷಿತರು ಹಾಗೂ ಬಡವರನ್ನು ಒಗ್ಗೂಡಿಸಿ ಹೋರಾಟ ಮಾಡಬೇಕಿದೆ. ಆ ಮೂಲಕ ಚಾಮರಾಜನಗರ, ಮೈಸೂರು- ಕೊಡಗು ಹಾಗೂ ಮಂಡ್ಯ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.
ಪೂರ್ಣವಾಧಿಯಾಗಿ ಸಿಎಂ ಸಿದ್ದರಾಮಯ್ಯ ಇರಲಿದ್ದಾರೆ:
ರಾಜ್ಯದಲ್ಲಿ ಆಡಳಿತ ಮಾಡಲು ಬಹುಮತ ಬೇಕಿದೆ. 136 ಮಂದಿ ಶಾಸಕರ ಬಲ ಸಿದ್ದರಾಮಯ್ಯ ಅವರಿಗಿದೆ. ಹೀಗಾಗಿ ಪೂರ್ಣವಧಿ ಸಿಎಂ ಆಗಿ ಮುಂದುವರೆದ ಅವಧಿಯನ್ನು ಪೂರೈಸುತ್ತಾರೆಂದು ಕುರುಬರ ಸಂಘದ ನಿಕಟಪೂರ್ವ ಅಧ್ಯಕ್ಷ ಸುಬ್ರಹ್ಮಣ್ಯ ಹೇಳಿದರು.
ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ವಿಚಾರ ಕೇವಲ ಮಾದ್ಯಮ ಊಹಾಪೆÇೀಹವಷ್ಟೇ ಆಗಿದೆ. ಐದು ಗ್ಯಾರಂಟಿ ಯೋಜನೆಯನ್ನು ಆರು ತಿಂಗಳ ಅವಧಿಯಲ್ಲೇ ಜಾರಿಗೊಳಿಸಿದ್ದು, ಅವರನ್ನು ಯಾವುದೇ ಕಾರಣಕ್ಕೂ ಕೆಳಗಿಳುವ ಪ್ರಶ್ನೆಯೇ ಎಲ್ಲವೆಂದರು.
ಈ ಸಮಾಜದ ಏಳಿಗೆ ಆಗಲೂ ರಾಜಕೀಯ ಬಲ ಅಗತ್ಯವಾಗಿದೆ. ರಾಜ್ಯದ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರ ಕೈ ಬಲ ಪಡಿಸಬೇಕೆಂದು ತೀರ್ಮಾನಿಸಿ ಈ ಜಾಗೃತ ಸಮಾವೇಶವನ್ನು ಆಯೋಜಿಸಿದ್ದೇವೆ. ನಾಲ್ಕು ಜಿಲ್ಲೆಯಿಂದ ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಲ್ಲುವ ನಿರ್ಣಯ ಕೈಗೊಂಡಿದ್ದೇವೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಈ ರೀತಿ ಸಂಘಟನೆ ಮಾಡುತ್ತಿದ್ದೇವೆ. ಆರ್ ಎಸ್ ಎಸ್ ಮಾಹಿತಿಯೇ ಕೇವಲ 8 ಕಡೆ ಬರುತ್ತದೆ ಎಂಬ ವರದಿ ನೀಡಿದೆ. ಹೀಗಾಗಿ ದಲಿತರು, ಕುರುಬರು ಸೇರಿ ಎಲ್ಲಾ ಸಮುದಾಯದವರೂ ಸಹ ಈ ಬಾರಿ ಕಾಂಗ್ರೆಸ್ ಬೆಂಬಲಿಸಲಿದ್ದಾರೆಂದರು.
ಇನ್ನೂ ತನ್ನ ಜೀವನವನ್ನೇ ರಾಜಕೀಯ ಕ್ಕೆ ಮುಡಿಪಾಗಿಟ್ಟ ಈಶ್ವರಪ್ಪ ಅವರನ್ನು ಮೂಲೆಗುಂಪು ಮಾಡಿದ್ದು, ಸಿದ್ದರಾಮಯ್ಯ ತಲೆ ಕಡಿಯುತ್ತೇನೆನ್ನುವವರಿಗೆ ಟಿಕೇಟ್ ಕೊಟ್ಟಿದ್ದಾರೆ. ಒಬ್ಬನೇ ಸಮುದಾಯದವರಿಗೂ ಟಿಕೇಟ್ ಕೊಡದೇ ಅನ್ಯಾಯ ಎಸಗಿದ್ದಾರೆ. ಆದರೆ, ಕಾಂಗ್ರೆಸ್ ನಲ್ಲಿ ಎರಡು ಕ್ಷೇತ್ರದಲ್ಲಿ ಅವಕಾಶ ಕೊಟ್ಟಿದ್ದಾರೆ. ಇನ್ನೂ ಕಾಂತರಾಜ ವರದಿಯನ್ನು ಯಾರು ಸ್ವೀಕರಿಸಿ ಇರಲಿಲ್ಲ. ಆದರೆ, ಸಿಎಂಸಿದ್ದರಾಮಯ್ಯ ವರದಿ ಪಡೆದು ಸಾಮಾಜಿಕ ನ್ಯಾಯ ಕೊಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಅಂತಹವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ. 4 ಲಕ್ಷದ 36 ಸಾವಿರ ಕೋಟಿಯನ್ನು ಜನತೆಗೆ ನೇರವಾಗಿ ನೀಡಿದ್ದಾರೆ. ಅದಕ್ಕೆ ಅವರಿಗೆ ಮತ ಹಾಕಬೇಕಿದೆ.
ಸಿದ್ದರಾಮಯ್ಯ ಆಡಳಿತ ಮಾಡುತ್ತಿದ್ದಾರೆ. ನಮ್ಮತೆರಿಗೆ ನಮ್ಮ ಹಕ್ಕು ಎನ್ನುವುದು ತಪ್ಪೇ, ರಾಜದಿಂದಲೇ ಹೋದ ನಿರ್ಮಲಾ ಸೀತಾರಮನ್ ಅವರು ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಒಪ್ಪಿಕೊಂಡಿದ್ದಾರೆ. ಇನ್ನೂ ಈ ಹಿಂದೆ ಅನೇಕ ಅವಧಿಯಲ್ಲಿ ಎಚ್.ಡಿ.ದೇವೇಗೌಡರೇ ಇದೇ ಬಿಜೆಪಿ ಯ ಬಗ್ಗೆ ಮಾತನಾಡಿರುವ ನಿದರ್ಶನಗಳು ಇವೆ. ಈಗ ಅವರ ಸಮಯಕ್ಕೆ ತಕ್ಕಂತೆ ಬಿಜೆಪಿ ಪರವಾಗಿ ಮಾತನಾಡುತ್ತಿದ್ದಾರೆ. ಇದನ್ನು ಜನತೆ ಸಹ ಒಪ್ಪುವುದಿಲ್ಲ ಎಂದು ಹೇಳಿದರು.
ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ನಗರಪಾಲಿಕೆ ಮಾಜಿ ಸದಸ್ಯ ಗೋಪಿ, ಕೆ.ಎಸ್.ಶಿವರಾಮು ಸೇರಿ ಅನೇಕರು ಉಪಸ್ಥಿತರಿದ್ದರು.