ಕಾಂಗ್ರೆಸ್ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ : ಪಕ್ಷಕ್ಕೆ ಉತ್ತಮ ಮುನ್ನುಡಿ

ಅಳ್ನಾವರ,ಜ8: ರಾಜ್ಯದಲ್ಲಿ ಈಚೆಗೆ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಭವಿಷ್ಯದಲ್ಲಿ ಪಕ್ಷ ಇನ್ನಷ್ಟು ಬಲಿಷ್ಟವಾಗಿ ಮುನ್ನುಗ್ಗಲು ಹಾಗೂ ಉತ್ತಮ ಭವಿಷ್ಯಕ್ಕೆ ಜನರು ರುಜು ಬರೆದು ಆಗಿದೆ. ಇದು ಉತ್ತಮ ದಿನಗಳಿಗೆ ಮುನ್ನುಡಿ ಬರೆದಂತಾಗಿದೆ ಎಂದು ಮಾಜಿ ಶಾಸಕ ಸಂತೋಷ ಲಾಡ್ ಹೇಳಿದರು.
ಸಮೀಪದ ಹೊನ್ನಾಪೂರ ಗ್ರಾಮದಲ್ಲಿ ಅಳ್ನಾವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾದ ಸನ್ಮಾನ ಕಾರ್ಯಕ್ರಮದಲ್ಲಿ ನೂತನ ಗ್ರಾಮ ಪಂಚಾಯ್ತಿ ಸದಸ್ಯರನ್ನು ಸನ್ಮಾನಿಸಿ ಅವರು ಮಾತನಾಡಿ, ಪಕ್ಷದ ನಾಯಕರುಗಳಾದ ಡಿ.ಕೆ. ಶಿವಕುಮಾರ ಹಾಗೂ ಸಿದ್ದರಾಮಯ್ಯ ಅವರು ರಾಜ್ಯದ ಮೂಲೆ ಮೂಲೆ ಸಂಚರಿಸಿ ಪಕ್ಷದ ಸಂಘಟನೆ ಬಲಪಡಿಸಲು ಸನ್ನದ್ದರಾಗಿದ್ದಾರೆ. ರಾಜ್ಯದಲ್ಲಿ ಮತ್ತೆ ನಮ್ಮ ಪಕ್ಷ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂಬ ಆಶಾ ಭಾವನೆ ವ್ಯಕ್ತಪಡಿಸಿದರು.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸುವಲ್ಲಿ ಕಾಂಗ್ರಸ್ ಪಕ್ಷ ನೀಡಿದ ಕೊಡುಗೆ ವಿಶಿಷ್ಟ ಮಹಿಳೆಯರಿಗೆ ಮೀಸಲಾತಿ ತರುವ ಮೂಲಕ ಸಮಾನ ಅಧಿಕಾರ ನೀಡಿದ ಹೆಮ್ಮೆಯ ಪಕ್ಷ ನಮ್ಮದು. ಗ್ರಾಮ ಪಂಚಾಯ್ತಿಗಳಿಗೆ ನೇರವಾಗಿ ಹೆಚ್ಚಿನ ಅನುಧಾನ ಹರಿದು ಬರಲು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳೇ ಸಾಕ್ಷಿ. ಎಲ್ಲರಿಗೂ ಸಮಬಾಳು, ಸಮ ಪಾಲು ನೀಡುವುದೆ ನಮ್ಮ ಪಕ್ಷದ ಮೂಲ ಉದ್ದೇಶ ಎಂದರು.
ಪ್ರಸ್ತುತ್ ಸಮಾಜದಲ್ಲಿ ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದೆ. ಎಲ್ಲ ಜನಾಂಗದವರು ಒಂದಾಗಿ ಬದುಕುವ ಸಂಸ್ಕ್ರತಿ ನಮ್ಮದು. ಬಸವ ತತ್ವದಡಿ ಬದಕು ಕಟ್ಟಿಕೊಳ್ಳಬೇಕು. ಜಾತಿ ವ್ಯವಸ್ಥೆತೆಯನ್ನು ಬೇರು ಮಟ್ಟದಿಂದ ಕಿತ್ತು ಎಸೆಯುವ ಕಾರ್ಯ ಹಳ್ಳಿಯಿಂದ ಆರಂಭವಾಗಲಿ ಇದಕ್ಕೆ ನೂತನ ಪ್ರತಿನಿಧಿಗಳು ಮುಂದೆ ಬನ್ನಿ . ಮಹಾತ್ಮಾ ಗಾಂಧಿ ಕಂಡ ಗ್ರಾಮ ಸ್ವರಾಜ್ಯ ಕನಸು ನನಸ್ಸಾಗಿಸಲು ಶ್ರಮಿಸಿ . ಹಳ್ಳಿಗಳಿಗೆ ಹಾಗೂ ಯುವಕರಿಗೆ ಉತ್ತಮ ಆಗುವ ಕಾರ್ಯಕ್ರಮ ರೂಪಿಸಿಕೊಳ್ಳಿ. ಸರ್ಕಾರದ ಕಾರ್ಯಕ್ರಮಗಳನ್ನು ನೇರವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಮೂಲಕ ಸಮಾಜದಲ್ಲಿ ಅಮೂಲಾಗ್ರ ಬದಲಾವಣೆ ತರಲು ಶ್ರಮಿಸಿ ಎಂದರು.
ಬಡವರ, ದೀನ ದಿಲಿತರ, ಶೋಷಿತರ ಹಾಗೂ ಹಿಂದುಳಿಗ ವರ್ಗದ ಜನರ ಕಷ್ಟ ನಿಬಾಯಿಸಲು ಪಕ್ಷಾತೀತವಾಗಿ, ಜ್ಯಾತ್ಯಾತೀತವಾಗಿ ಶ್ರಮಿಸಬೇಕು. ನಿಮಗೆ ದೊರೆತ ಅಧಿಕಾರದ ಅವಕಾಶವನ್ನು ಪ್ರಾಮಾಣಿಕ ಸೇವೆಗೆ ಬಳಕೆ ಮಾಡಿಕೊಂಡು ,ನಿಮ್ಮ ಊರುಗಳನ್ನು ಉದ್ದಾರ ಮಾಡಿಕೊಳ್ಳಿ, ನಿರಾಶ್ರಿತರಿಗೆ ಮನೆ ಕಟ್ಟಿ ಕೊಡುವ ಕೆಲಸ ಮಾಡಿ, ಮೂಲಭೂತ ಸೌಲಭ್ಯ ಒದಗಿಸಿ ಎಂದರು.
ರೈತರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಧಾರವಾಡದಲ್ಲಿ ದಿ. 26 ರಂದು ಅಳ್ನಾವರ ಮತ್ತು ಕಲಘಟಗಿ ಭಾಗದ ಜನರನ್ನು ಸೇರಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ಉದ್ದೇಶಿಸಲಾಗಿದೆ. ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವದು ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಎಂದು ವಿನಂತಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶಗೌಡ ಕರಿಗೌಡರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯ ನಿಂಗಪ್ಪ ಘಾಟಿನ್, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ನಿಂಗಪ್ಪ ಬೇಕ್ವಾಡಕರ, ಮಾರುತಿ ಬಾಂಗಡಿ, ಅನ್ವರಖಾನ ಬಾಗೇವಾಡಿ, ಹಸನಅಲಿ ಶೇಖ, ಉಸ್ಮಾನ ಬಾತಖಂಡಿ, ಹನಮಂತ ಸನದಿ, ಅಕ್ಕವ್ವಾ ಬಾಂಗಡಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಉಮೇಶ ಭೂಮಣ್ಣವರ, ಆರತಿ ಹಿರೇಮಠ, ಲಕ್ಷ್ಮಿ ಕೋಡೆ, ಮಲ್ಲನಗೌಡ ಪಾಟೀಲ, ರಾಯಪ್ಪ ಹುಡೇದ, ಇಸ್ಮಾಯಿಲ್ ದೇವರಾಯಿ, ಶ್ರೀಕಾಂತ ಗಾಯಕವಾಡ, ಸತ್ತಾರ ಬಾತಖಂಡಿ, ಸುರೇಂದ್ರ ಕಡಕೋಳ ಇದ್ದರು.