ಕಾಂಗ್ರೆಸ್ ಬೀದಿ ಬದಿ ವ್ಯಾಪಾರಸ್ಥರ ವಿಭಾಗದ ಅಧ್ಯಕ್ಷರಾಗಿ ಕಲ್ಲಪ್ಪ ಮರಡಿ ಆಯ್ಕೆ


ಸಂಜೆವಾಣಿ ವಾರ್ತೆ
ಕುಕನೂರು, ಜೂ.12: ಪಟ್ಟಣದ ಎಂಟನೇ ವಾರ್ಡಿನ ನಿವಾಸಿ  ಯುವ ಮುಖಂಡ ಕಲ್ಲಪ್ಪ ಹನುಮಪ್ಪ ಮರಡಿ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಬೀದಿಬದಿ ವ್ಯಾಪಾರಸ್ಥರ ವಿಭಾಗದ ಕುಕನೂರು ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಅನುಮೋದನೆಯ ಮೇರೆಗೆ . ಕರ್ನಾಟಕ ಪ್ರದೇಶ ಕಾಂಗ್ರೆಸ್ ಬೀದಿಬದಿ ವ್ಯಾಪಾರಸ್ಥರ ವಿಭಾಗದ ರಾಜ್ಯಾಧ್ಯಕ್ಷ ಡಾ. ಸಿ ಇ ರಂಗಸ್ವಾಮಿಯವರು ಕಲ್ಲಪ್ಪ ಮರಡಿಯವರಿಗೆ ಆದೇಶ ಪ್ರತಿಯನ್ನು ನೀಡಿ , ಕುಕನೂರು ತಾಲೂಕು ಬೀದಿಬದಿ ವ್ಯಾಪಾರಸ್ಥರನ್ನು ಸಂಘಟಿಸಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕು ಎಂದು ಸೂಚಿಸಿದ್ದಾರೆ.