ಕಾಂಗ್ರೆಸ್-ಬಿಜೆಪಿ ಮುಖಂಡರ ಸೌಹಾರ್ದ ಚುನಾವಣೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.10: ತಾಲೂಕಿನ ಕುಡುತಿನಿ ಗ್ರಾಮದ ಮತಗಟ್ಟೆ ಮುಂದೆ  ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು  ಒಂದಡೆ ಕುಳಿತು  ಸೌಹಾರ್ದಯುತ ಚುನಾವಣೆ ನಡೆಸಿದ್ದು ವಿಶೇಷವಾಗಿತ್ತು.
ಹಲವು ಚುನಾವಣೆಗಳನ್ನು ನಡೆಸಿಕೊಂಡು ಬಂದಿರುವ ವಿವಿಧ ಪಕ್ಷಗಳು ತಮ್ಮದೇ ಆತ ಕಾರ್ಯತಂತ್ರದ ಮೂಲಕ ಚುನಾವಣೆ ನಡೆಸಿಕೊಂಡು ಬಂದಿರುವ ರಾಜಕೀಯ ಪಕ್ಷಗಳು, ಇಂದು ಮಾತ್ರ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಒಂದೇ ಶಾಮಿಯಾನದಲ್ಲಿ ಕುಳಿತು ಸೌಹಾರ್ದವಾಗಿ ಚುನಾವಣೆ ನಡೆಸಿದ್ದು ವಿಶೇಷವಾಗಿತ್ತು, ಮುಖಂಡರು ಮಾತನಾಡಿ ಬೆಳಿಗ್ಗೆಯಿಂದ ಮತದಾರರು ಅತ್ಯಂತ ಉತ್ಸುಕತೆಯಿಂದ ಮತಚಲಾಯಿಸುತ್ತಿದ್ದಾರೆ, ಮಧ್ಯಾಹ್ನದ ವೇಳೆಗೆ ಬಹುತೇಕರು ಮತಚಲಾಯಿಸುತ್ತಾರೆ, ಗರಿಷ್ಠ ಪ್ರಮಾಣದಲ್ಲಿ ಮತದಾನ ನಡೆಯುವ ವಿಶ್ವಾಸವಿದೆ ಎಂದರು, ಕಾಂಗ್ರೆಸ್ ಮುಖಂಡರಾದ ಪಲ್ಲೇದ ಪ್ರಭು, ವಿ.ಚಂದ್ರಪ್ಪ, ಪಿ. ರಾಮಲಿಂಗಪ್ಪ, ಭೀಸಣ್ಣ, ಎಸ್.ಬೀಮೇಶ್, ಬಿಜೆಪಿ ಮುಖಂಡರಾದ ಕೆ.ಎಂ.ಹಾಲಪ್ಪ, ಕೋಟೆ ವೀರಾರೆಡ್ಡಿ, ಪಂಪಾಪತಿ, ಪಿ.ಗೋಪಾಲ, ಎಸ್. ಶಿವಾನಂದ, ಸಿದ್ದರಾಮ ಹಾಗೂ ಕಾರ್ಯಕರ್ತರು ಇದ್ದರು.