ಕಾಂಗ್ರೆಸ್, ಬಿಜೆಪಿ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪೆಡೆ

ಏ.೫ ಸಿರವಾರ ಕ್ರಾಸ್ ಹತ್ತಿರ ಪ್ರತಿಭಟನೆ: ಕರೇಮ್ಮನಾಯಕ
ದೇವದುರ್ಗ.ಮಾ.೩೦-ಜೆಡಿಎಸ್ ಪಕ್ಷದ ವತಿಯಿಂದ ಏ.೫ರಂದು ಸಿರವಾರ್ ಕ್ರಾಸ್ ಹತ್ತಿರ ಧರಣಿ ಸತ್ಯಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಹಿರಿಯ ಮುಖಂಡರಾದ ಕರೇಮ್ಮ ಜಿ ನಾಯಕ ಹೇಳಿದರು.
ಪಟ್ಟಣದ ಪೊಲೀಸ್ ಕಾಲೋನಿಯಲ್ಲಿರುವ ಕರೆಮ್ಮ ಗೋಪಾಲಕೃಷ್ಣ ನಿವಾಸದಲ್ಲಿ ಸುಣದಕಲ್ ಗ್ರಾಮದ ೪೦ ಜನರು ಕಾಂಗ್ರೆಸ್, ಬಿಜೆಪಿ ಪಕ್ಷ ತೂರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪೆಡೆಯಾದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕೊತ್ತದೊಡ್ಡಿ ಗ್ರಾಮದಲ್ಲಿ ಬರುವ ೧೫ನೇ ಮುಖ್ಯಕಾಲುವೆ ನೆನೆಗುದ್ದಿಗೆ ಬಿದ್ದಿರುವ ಕಾಮಗಾರಿ ಆರಂಭಿಸಬೇಕು. ಕೆಲಸ ವಿಳಂಬವಾದರಿಂದ ಕೆಲ ಗ್ರಾಮಗಳಿಗೆ ನೀರು ಮುಟ್ಟುತ್ತಿಲ್ಲ. ಹೀಗಾಗಿ ರೈತರು ಪ್ರತಿವರ್ಷ ನಷ್ಟದಲ್ಲೇ ಬದುಕು ಸಾಗಿಸಬೇಕಾಗಿದೆ. ಕಾಮಗಾರಿ ಆರಂಭಿಸುವ ಕುರಿತು ಎನ್‌ಆರ್‌ಬಿಸಿ ಅಧಿಕಾರಿಗಳು ಸ್ಪಷ್ಟತೆ ಉತ್ತರ ನೀಡುತ್ತಿಲ್ಲ. ಸಮರ್ಪಕವಾಗಿ ಮಾಹಿತಿ ನೀಡದೇ ಇರುವ ಕಾರಣ ಹೋರಾಟ ಅನಿವಾರ್ಯ ಎಂದು ಹೇಳಿದರು. ನಾರಾಯಣಪುರ ಬಲದಂಡೆ ಕಾಲುವೆಗಳಿಗೆ ಏ.೨೦ವರೆಗೆ ಕಾಲುವೆಗಳಿಗೆ ನೀರು ಹರಿಸಬೇಕು. ಈಭಾಗದ ಜನಪತ್ರಿನಿಧಿಗಳು ರೈತರ ಸಮಸ್ಯೆಗೆ ಕೂಡಲೇ ಸ್ಪಂದಿಸಬೇಕು ಎಂದು ಹೇಳಿದರು. ಬುಡನಗೌಡ ಜಾಗಟಗಲ್ ಮಾತನಾಡಿ, ಕಾಂಗ್ರೆಸ್, ಬಿಜೆಪಿ ಪಕ್ಷದಲ್ಲಿ ಬೇಸತ್ತು ಪ್ರಮಾಣಿಕೆ ನಿಷ್ಟೆ ಜೆಡಿಎಸ್ ಪಕ್ಷಕ್ಕೆ ಜನರು ಸೇರ್ಪೆಯಾಗುತ್ತಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅಧಿಕಾರ ಅವಧಿಯಲ್ಲಿ ಬೇಸಿಗೆ ಅವಧಿಯಲ್ಲಿ ಕಾಲುವೆಗಳಿಗೆ ನೀರು ಹರಿಸಲಾಯಿತು. ರೈತರ ಬೆಳೆದ ಬೆಳೆಗಳಿಗೆ ಏ.೨೦ವರೆಗೆ ನೀರು ಹರಿಸುವಂತೆ ಧರಣಿ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು. ಕೊನೆ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಪೂರೈಕೆ ಆಗದೇ ಕಾರಣ ಪ್ರತಿವರ್ಷ ಬೆಳೆ ನಷ್ಟದ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ದೂರಿದರು. ಮುಂಬರುವ ವಿಧಾನಸೌಧ ಚುನಾವಣೆಯಲ್ಲಿ ಈಬಾರಿ ಜೆಡಿಎಸ್ ಪಕ್ಷಕ್ಕೆ ಪೂರಕವಾದ ಬೆಂಬಲ ವ್ಯಕ್ತವಾಗುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಶರಣಪ್ಪ ಬಳೆ, ಅಮರೇಶ ಪಾಟೀಲ್, ವೆಂಕೋಬ ನಾಯಕ, ಇಸಾಕ್ ಮೇಸ್ತ್ರೀ ರಾಮದುರ್ಗ, ಫೆರೋಜ್ ಖಾನ್ ಸೇರಿ ಸುಣದಕಲ್ ಗ್ರಾಮದ ೪೦ಕ್ಕೂ ಹೆಚ್ಚು ಜನರು ಇದ್ದರು.