ಕಾಂಗ್ರೆಸ್-ಬಿಜೆಪಿ ತೊರೆದ ಮುಖಂಡರು ಜೆಡಿಎಸ್‍ಗೆ ಸೇರ್ಪಡೆ

ಹನೂರು: ತಾಲ್ಲೂಕಿನ ಮಾರ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ವಿವಿಧ ಮುಖಂಡರುಗಳು ಕಾಂಗ್ರೇಸ್ ಹಾಗೂ ಬಿಜೆಪಿ ಪಕ್ಷವನ್ನು ತೊರೆದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಆರ್. ಮಂಜುನಾಥ್ ಸಮ್ಮುಖದಲ್ಲಿ ಜೆಡಿಎಸ್ ಪಕ್ಷವನ್ನು ಸೇರ್ಪಡೆಗೊಂಡರು.
ಮಾರ್ಟಳ್ಳಿ ಸಮೀಪದ ಕೀರೆಪಾತಿ ಗ್ರಾಮದ ಚಾರ್ಲಸ್, ಮೈಕ್‍ಸೆಡ್ ದೇವಸಗಯರಾಜ್, ಕಾಂತರಾಜು, ಕುಮಾರ್, ಸಗಾಯ್‍ರಾಜ್, ಸೆಂಡು ಮುರುಗನ್, ಮೋಹಿಷ್, ಜಪಮಾಲೆ ಸೇರಿದಂತೆ ಇನ್ನಿತರರು ಜೆಡಿಎಸ್ ಪಕ್ಷವನ್ನು ಸೇರ್ಪಡೆಗೊಂಡರು. ಈ ವೇಳೆ ಸೇರ್ಪಡೆಗೊಂಡ ಮುಖಂಡರುಗಳು ಮಾತನಾಡಿ, ಜೆಡಿಎಸ್ ಮುಖಂಡ ಎಂ.ಆರ್.ಮಂಜುನಾಥ್ ಅವರ ಕಾರ್ಯವೈಖರಿ ಮತ್ತು ಸಮಾಜ ಮುಖಿ ಕಾರ್ಯಗಳಿಂದ ಪ್ರೇರಿತರಾಗಿ ಜೆಡಿಎಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ರಾಜ್ಯ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮಂಜುನಾಥ್ ಮಾತನಾಡಿ, ಇಲ್ಲಿನ ಸ್ಥಳಿಯ ಶಾಸಕರ ಆಡಳಿತ ವೈಪಲ್ಯವನ್ನು ಕಂಡು ಕ್ಷೇತ್ರ ವ್ಯಾಪ್ತಿಯ ವಿವಿದೆಡೆ ಜೆಡಿಎಸ್ ಪಕ್ಷವನ್ನು ಸೇರ್ಪಡೆಗೊಳ್ಳುತ್ತಿದ್ದಾರೆ. ಕುಡಿಯುವ ನೀರನ್ನು ಶಾಶ್ವತವಾಗಿ ಒದಗಿಸಲು ಅಸಾಧ್ಯವಾದ ಶಾಸಕರು ನಿದ್ದೆಯಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ಕಾರ್ಯಕರ್ತರು ಅವರಿಂದ ದೂರವಾಗುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾ.ಪಂ. ಸದಸ್ಯ ಮಣಿ, ಮುಖಂಡರುಗಳಾದ ಮುಳ್ಳೂರು ಶಿವಮಲ್ಲು, ಸಂದನ ಪಾಳ್ಯ ತಲೈವಾರ್, ಚಾರ್ಲಿಸ್, ಕಾರ್ಯಕರ್ತರಾದ ಗಣೇಶ್, ಪೆರಿಯನಾಯಗಮ್, ಮುನಿಸ್ವಾಮಿ, ಆರ್ಮುಗ್ಮಮ್, ಕುಪ್ಪಸ್ವಾಮಿ, ಸಕ್ಕರೇಶ್ ಇನ್ನಿತರಿದ್ದರು.